September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ಇಲ್ಲಿ ಜ. 6 ರಂದು ಸಂಸ್ಥಾಪಕರ ದಿನಾಚರಣೆಯು ಬಹಳ ವಿಜೃಂಭಣೆಯಿಂದ ನಡೆಯಿತು.

ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಸ್ವತಃ ರಚಿಸಿದ ಹಾಡನ್ನು ಎಲ್ಲಾ ಶಿಕ್ಷಕರು ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಮಾತನಾಡಿ, ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ಹಾಕಿದ ಗಟ್ಟಿಯಾದ ಬುನಾದಿ ಇಂದು ಶಾಲೆ ಇಷ್ಟು ಎತ್ತರ ಬೆಳೆದಿದೆ. ಪುತ್ರನಾಗಿ ಹೆಮ್ಮೆಯ ತಂದೆ, ಶಿಷ್ಯನಾಗಿ ಎತ್ತರ ಸ್ಥಾನದಲ್ಲಿ ಗುರು, ತಿದ್ದಿ ದಾರಿತೋರಿಸುವ ಮಾರ್ಗದರ್ಶನದಿಂದ ಎಸ್‌ಎಸ್‌ಎಲ್‌ಸಿ12 ಬಾರಿ ಹಾಗೂ ಪಿಯುಸಿಯಲ್ಲಿ ಸತತ 4 ವರ್ಷ ಶೇ. 100 ಫಲಿತಾಂಶ ಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಸಂಸ್ಥಾಪಕ ಗಿರೀಶ್ ಕೆ.ಎಚ್. ಅವರು ಅನಿಸಿಕೆ ವ್ಯಕ್ತಪಡಿಸಿ, ಗುಡ್ಡದಂತಿದ್ದ ಈ ಪ್ರದೇಶ ಪುಟ್ಟ ಮಕ್ಕಳ ನಿರಂತರ ಪಾದಸ್ಪರ್ಶದಿಂದ ಇದು ಬೆಳಗಿದೆ. ಸಂಸ್ಥೆಯು ರಾಜ್ಯ, ರಾಷ್ಟಮಟ್ಡದ ಸಾಧನೆಗೆ ಇಲ್ಲಿ ವಿದ್ಯೆ ನೀಡಿದ ಶಿಕ್ಷಕರು ಹಾಗೂ ವಿದ್ಯೆ ಪಡೆದ ವಿದ್ಯಾರ್ಥಿಗಳೇ ಕಾರಣ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್, ಕುಂಭ ಶ್ರೀ ವೈಭವ ಸಮಿತಿಯ ಅಧ್ಯಕ್ಷ ಅಶ್ವಿತ್ ಕುಲಾಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಮನೋಜ್, ಶಾಲಾ ಶೈಕ್ಷಣಿಕ ಸಲಹೆಗಾರ ಶ್ರೀಮತಿ ಉಷಾ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕರಾದ ಅಭಿಲಾಶ್ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಅಕ್ಷತಾ ನಿರೂಪಿಸಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ನಿತೇಶ್ ವಂದಿಸಿದರು.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಚಪ್ಪರ ಮೂಹೂರ್ತ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya

ಜು. 13: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ “ಶ್ರೀ ಗುರುಸಾನಿಧ್ಯ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಆಶಾಲತಾ ಉಪಾಧ್ಯಕ್ಷರಾಗಿ ಪ್ರೇಮ ಅವಿರೋಧ ಆಯ್ಕೆ

Suddi Udaya

ಜ 29 :ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೃಹತ್ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

Suddi Udaya

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Suddi Udaya
error: Content is protected !!