September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಹೆದ್ದಾರಿ ಕಾಮಗಾರಿ ವಾಹನಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಾಯ

ಕಲ್ಮಂಜ: ಹೆದ್ದಾರಿ ಕಾಮಗಾರಿಯ ಪೇವರ್ ಮೆಷೀನ್ ವಾಹನಕ್ಕೆ ಹಿಂಬದಿಯಿಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜದ ಗುರಿಪಳ್ಳ ಕ್ರಾಸ್ ಸಮೀಪ ಜೂ.1 ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಬೈಕ್ ಸವಾರ ಕಡಿರುದ್ಯಾವರ ಗ್ರಾಮದ ಪರಬೆಟ್ಟು ನಿವಾಸಿ ಎಲೆಕ್ಟ್ರಿಷಿಯನ್ ವೃತ್ತಿಯ ಹರೀಶ್ (28) ಗಂಭೀರ ಗಾಯ ಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯ
ವಾಹನಕ್ಕೆ ಹಿಂಬದಿಯ ದೀಪಗಳು ಇಲ್ಲದ ಕಾರಣ ವಾಹನ ಸಂಚರಿಸುತ್ತಿದ್ದುದು ಗಮನಕ್ಕೆ ಬಾರದೆ ಅಪಘಾತ ನಡೆದಿದೆ
ಎಂದು ಸ್ಥಳೀಯರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಾಹನಗಳು ಅಲ್ಲಲ್ಲಿ ರಸ್ತೆ ಬದಿ ರಾತ್ರಿ ಹೊತ್ತು ನಿಲ್ಲುತ್ತಿದ್ದು, ಇವುಗಳಲ್ಲಿ ಸರಿಯಾದ ರಿಫ್ಲೆಕ್ಟರ್, ದೀಪಗಳು ಇಲ್ಲದಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.

Related posts

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಶಿಖರ್ಜಿಯಲ್ಲಿ ನಿರಂಜನನ ದರ್ಶನ ಹಾಗೂ ಜಿನಭಕ್ತಿ ಲಹರಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜು-‘ಆಟಿಡೊಂಜಿ ದಿನ’ ಕಾರ್ಯಕ್ರಮ.

Suddi Udaya

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ಫಿಲಿಪ್ಸ್ ಅಫಿನಿಟಿ-70 ಅಲ್ಟ್ರಾ ಸೌಂಡ್ ಸೇವೆ ಲೋಕಾರ್ಪಣೆ

Suddi Udaya

ಸಾವಿರಾರು ರೈತರ ಕೃಷಿ ಜಮೀನು ಆರ್.ಟಿ.ಸಿ ಯಲ್ಲಿ ವಕ್ಫ್ ಅಸ್ತಿ ಎಂದು ದಾಖಲು: ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟೀಕರಣ ನೀತಿಯಿಂದ ರೈತರು ಆತ್ಮಹತ್ಯೆ ಮಾಡಬೇಕಾದ ಸ್ಥಿತಿ ನಿಮಾ೯ಣ : ಹರೀಶ್ ಪೂಂಜ

Suddi Udaya

2 ಲಕ್ಷ ಮೌಲ್ಯ ದ ಚಿನ್ನದ ಬ್ರೇಸ್ ಲೆಟ್ ಮರಳಿಸಿ‌ ಪ್ರಾಮಾಣಿಕತೆ ಮೆರೆದ ಬದ್ಯಾರಿನ ಝೈನುದ್ದೀನ್

Suddi Udaya
error: Content is protected !!