24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.100ರಷ್ಟು ಸಹಾಯಧನದಲ್ಲಿ ಸಹ್ಯಾದ್ರಿ ಬ್ರಹ್ಮ ಭತ್ತದ ಬಿತ್ತನೆ ಬೀಜ ಲಭ್ಯ

ಬೆಳ್ತಂಗಡಿ: ತಾಲೂಕಿನ ವೇಣೂರು, ಕೊಕ್ಕಡ ಹಾಗೂ ಬೆಳ್ತಗಂಡಿ ರೈತ ಸಂಪರ್ಕ ಕೇಂದ್ರಗಳಲ್ಲಿ 2026-27 ನೇ ಸಾಲಿನ ಎನ್‌ಎಫ್‌ಎಸ್‌ಎನ್‌ಎಮ್ ಯೋಜನೆಯಡಿಯಲ್ಲಿ ಶೇ.100ರಷ್ಟು ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜವು (ಸಹ್ಯಾದ್ರಿ ಬ್ರಹ್ಮ) ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಭತ್ತ ಕೃಷಿಕರು ಸದುಪಯೋಗ ಪಡೆದುಕೊಳ್ಳುವಂತೆ ಬೆಳ್ತಂಗಡಿ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತಳಿಯ ವಿಶೇಷತೆ:
ಮಧ್ಯಮ ಅವಧಿಯ ಕೆಂಪು ಅಕ್ಕಿಯ ತಳಿ (130-135 ದಿನಗಳು), ಹೆಕ್ಟೇರ್‌ಗೆ 50 ರಿಂದ 55 ಕ್ವಿಂಟಾಲ್ ಇಳುವರಿ, ಕಣೆ ಕೀಟ ಬಾಧೆಗೆ ಸಹಿಷ್ಣುತೆಯನ್ನು ಹೊಂದಿದೆ. ದಪ್ಪ ಮತ್ತು ಮಧ್ಯಮ ಗಾತ್ರದ ಭತ್ತ ಕರಾವಳಿ ಪ್ರದೇಶಕ್ಕೆ (ವಲಯ-೧೦) ಸೂಕ್ತವಾದ ತಳಿ. ಉತ್ತಮ ಇಳುವರಿ ನೀಡುವ ರೈತ ಸ್ನೇಹಿ ತಳಿ. ಲಘು ಪೋಷಕಾಂಶಗಳು, ಕೀಟನಾಶಕಗಳು, ಟ್ರೈಕೊಡರ್ಮಾ ಹಾಗೂ ಸಾವಯವ ಗೊಬ್ಬರ ಶೇ.೧೦೦ ಸಹಾಯಧನದಲ್ಲಿ ನೀಡಲಾಗುವುತ್ತದೆ.

ಅರ್ಜಿ ಸಲ್ಲಿಕೆ ಹೇಗೆ:

  • ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನಿನ ಪಹಣಿ
  • ಆಧಾರ್ ಕಾರ್ಡ್ ಜೆರಾಕ್ಸ್
  • ಬ್ಯಾಂಕ್ ಪಾಸ್‌ಬುಕ್ ಮೊದಲ ಪುಟದ ಜೆರಾಕ್ಸ್
  • 1 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಎಸ್‌ಸಿ/ಎಸ್‌ಟಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ

Related posts

ನೆರಿಯ ಸೆಂಟ್ ತೋಮಸ್ ಪ್ರೌಢಶಾಲೆ ಶೇ 100 ರ ಸಾಧನೆಗೆ ಸನ್ಮಾನ

Suddi Udaya

ವೇಣೂರು ದೇವಾಡಿಗರ ಸೇವಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ಮುಂಡಾಜೆ ಪ. ಪೂ. ಕಾಲೇಜು: ಜಾಗೃತ ಜಾಗೃತಿ ಸಪ್ತಾಹ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ ಮತ್ತು ಭಿತ್ತಿಪತ್ರಗಳ ಅನಾವರಣ

Suddi Udaya

ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸಾಧನೆ

Suddi Udaya

ಮೇಲಂತಬೆಟ್ಟು ಗ್ರಾ. ಪಂ. ನ ಗ್ರಾಮ ಸಭೆ

Suddi Udaya
error: Content is protected !!