September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿರಾಜಕೀಯ

ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿದ ತ್ಯಾಗ ಹೋರಾಟಕ್ಕೆ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡಿದೆ: ಮೋಹನ್ ಗೌಡ ಕಲ್ಮಂಜ

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯೆಂದು ಯುವ ನಾಯಕತ್ವಕ್ಕೆ ಸ್ಫೂರ್ತಿ ತುಂಬಿದ ನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಮುಖ್ಯಮಂತ್ರಿಯಾದ ಕ್ಷಣ ನಿಜಕ್ಕೂ ರೋಮಾಂಚನ, ಸಂತಸ ತಂದಿದೆ.

ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿರುವ ತ್ಯಾಗ ಹೋರಾಟ, ಶ್ರಮಕ್ಕೆ ಇಂದು ಹೈಕಮಾಂಡ್ ಸೂಕ್ತ ಸ್ಥಾನ ಗೌರವ ನೀಡಿದೆ. ಖಂಡಿತ ಓರ್ವ ಪಕ್ಷದ ಸಾಮಾನ್ಯ ಕಾರ್ಯಕರ್ತ,ಯುವ ನಾಯಕ ಹೋರಾಟದಿಂದ ಬೆಳೆದರೆ ಡಿಕೆ ಶಿವಕುಮಾರ್ ರೀತಿ ಬೆಳೆಯಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ಸಾರಿದೆ.

ನೂತನ ಮುಖ್ಯ ಮಂತ್ರಿಗಳು ಯುವಕರ, ಕೃಷಿಕರ, ಮಧ್ಯಮ ವರ್ಗ, ಶ್ರಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಲಿದ್ದಾರೆ.ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ್ ಗೌಡರ ಆತ್ಮೀಯ ಒಡನಾಟ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹಾಗೂ ನನ್ನ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಕೂಡ ಅವರ ನೇತೃತ್ವ ಆಶೀರ್ವಾದದಿಂದಲೇ ಆಗಿರುವ ಕಾರಣ ನಮಗೆಲ್ಲರಿಗೂ ಅತ್ಯಂತ ಗೌರವ. ಒಕ್ಕಲಿಗ ಗೌಡ ಸಮಾಜದ ನಾಯಕ ಇಂದು ಮುಖ್ಯ ಮಂತ್ರಿ ಆಗಿರೋದು ನಮಗೆಲ್ಲ ಸಂತಸ ತಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ,ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಅಭಿಪ್ರಾಯ ವ್ಯಕ್ತಪಡಿಸಿದರು.

Related posts

ದ.ಕ. ಮತ್ತು ಉಡುಪಿ ಜಿಲ್ಲಾ ಲೈವ್ ಅಸೋಸಿಯೇಶನ್ ಅಧ್ಯಕ್ಷರಾಗಿ ದಿವ್ಯವರ್ಮಾ, ಕಾರ್ಯದರ್ಶಿಯಾಗಿ ಶರತ್ ಎಂ. ಗೌಡ ಬೆಳ್ತಂಗಡಿ ಆಯ್ಕೆ

Suddi Udaya

ವೇಣೂರು ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಸುಲ್ಯೋಡಿ ಶಾಲೆಯಲ್ಲಿ ಶ್ರಮದಾನ

Suddi Udaya

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ನಿಯೋಗದಿಂದ ರಕ್ಷಿತ್ ಶಿವರಾಮ್ ಭೇಟಿ: ಕೋಳಿ ಸಾಕಾಣಿಕೆದಾರರ ಸಂಕಷ್ಟಕ್ಕೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರದ ಭರವಸೆ ನೀಡಿದ ರಕ್ಷಿತ್ ಶಿವರಾಮ್

Suddi Udaya

ಕರಂಬಾರು:ವಿಪರೀತ ಮಳೆಯಿಂದ ಅಣೆಕಟ್ಟಿನಲ್ಲಿ ಮರಗಳ ರಾಶಿ, ಪಕ್ಕದ ತೋಟಕ್ಕೆ ಹರಿದ ನೀರು, ಕೃಷಿಗೆ ಹಾನಿ

Suddi Udaya

ತಣ್ಣೀರುಪಂತ: ಕುದ್ರಡ್ಕದಲ್ಲಿ ಮೂವರು ಮಕ್ಕಳಿಗೆ ಹಾವು ಕಡಿತ

Suddi Udaya
error: Content is protected !!