30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಲೈಫ್‌ಸ್ಟೈಲ್‌ವರದಿ

ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಲ್ಲಿ ಸಂಭ್ರಮದ ‘ಆಟಿಡೊಂಜಿ ದಿನ’ ಆಚರಣೆ

ಬೆಳ್ತಂಗಡಿ:ಹಿಂದಿನ ಕೂಡು ಕುಟುಂಬಗಳ ಜೀವನದಲ್ಲಿ ನೆಮ್ಮದಿ, ಸೌಹಾರ್ದತೆ ಹಾಗೂ ಆರೋಗ್ಯಕರ ಆಹಾರ ಪದ್ಧತಿ ಇತ್ತು. ಆ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ರಾಜೀವ್ ಸಾಲಿಯಾನ್ ಹೇಳಿದರು.

ಅವರು ಆ 2ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆಗಳ ಆಶ್ರಯದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದ ಮಾಜಿ ಅಧ್ಯಕ್ಷ ಹಾಗೂ ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್. ವಿವಿಧ ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಸಮಿತಿಯ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ಶಾಖಾ ನಿರೀಕ್ಷಕಿ ಮಾಲಾ ಎಂ.ಕೆ. ಹಾಗೂ ಬಡಕೋಡಿ ಶಿಕ್ಷಕಿ ಸೌಮ್ಯ ಆಟಿ ತಿಂಗಳ ಆಚರಣೆ, ಅದರ ಸಾಂಸ್ಕೃತಿಕ ಮಹತ್ವ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಹೆಚ್. ಧರ್ಣಪ್ಪ ಪೂಜಾರಿ, ಗೌರವ ಮಾರ್ಗದರ್ಶಕ ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಭಾರತಿ ಸಂತೋಷ್, ಕಾರ್ಯದರ್ಶಿ ಸಂಧ್ಯಾ ಹೆಚ್.ಡಿ., ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಶರತ್ ಅಂಚನ್ ಹಾಗೂ ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಾದ ದಿಯಾ ಎಂ. ಕೋಟ್ಯಾನ್ ಮತ್ತು ಧೃತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಲ್ಲದೆ ಆಟಿ ತಿಂಗಳ ಸುಮಾರು 52 ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ತಂದ ಮಹಿಳೆಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹಳೆಯ ಕೃಷಿ ಹಾಗೂ ಗೃಹಬಳಕೆಯ ಪರಿಕರಗಳ ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಿತ್ತು.

ಸಂಘದ ಮಾಜಿ ಅಧ್ಯಕ್ಷೆ ಪುಷ್ಪಾ ಗಿರೀಶ್ ಪ್ರಾರ್ಥಿಸಿದರು. ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ವಿಶಾಲ ಜಗದೀಶ್ ಕಾರ್ಯಕ್ರಮ ನಿರೂಪಿಸಿದರೆ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಭಾರತಿ ಸಂತೋಷ್ ವಂದಿಸಿದರು. ಸಮಿತಿಯ ನಿರ್ದೇಶಕರು,ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಇಂದಬೆಟ್ಟು: ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ: ಸ್ನೇಕ್ ಅಶೋಕ್ ರವರಿಂದ ಹೆಬ್ಬಾವು ರಕ್ಷಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪ್ರಚಂಡ ಗೆಲುವು: ಅಭಿವೃದ್ಧಿಗೆ ಸಂದ ಭರ್ಜರಿ ಜಯ: ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂಗೆ ಸೋಲು

Suddi Udaya

ಗುರುವಾಯನಕೆರೆ: ಆಟಿ ಡೊಂಜಿ ಕೆಸರದ ಗೊಬ್ಬು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡೂರುಪಳಿಕೆ ಹಾಲು ಉತ್ಪಾದಕರ ಘಟಕ ಉದ್ಘಾಟನೆ

Suddi Udaya

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya
error: Content is protected !!