September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೂತನ ಮುಖ್ಯಮಂತ್ರಿ ಡಿಕೆಶಿ ರಾಜ್ಯದ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಹೊಸ ದಿಕ್ಕು ನೀಡಲಿದ್ದಾರೆ: ಅಭಿನಂದನ್ ಹರೀಶ್ ಕುಮಾರ್

ಬೆಳ್ತಂಗಡಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ನಮ್ಮೆಲ್ಲರ ಹೆಮ್ಮೆಯ ನಾಯಕ, ಕಾಂಗ್ರೆಸ್ ಪಕ್ಷದ ಅಪ್ರತಿಮ ಸಂಘಟಕ ಹಾಗೂ ಜನನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಅವರ ರಾಜಕೀಯ ಪಯಣ ಇಂದು ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿಯ ಸ್ಥಾನಕ್ಕೆ ತಲುಪಿರುವುದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಇದು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ತ್ಯಾಗ,ನಿಷ್ಠೆ ಮತ್ತು ಪರಿಶ್ರಮಕ್ಕೆ ಸಂದ ಗೌರವವಾಗಿದೆ.

ಸಂಕಷ್ಟದ ಸಂದರ್ಭಗಳಲ್ಲಿ ಪಕ್ಷದ ಧ್ವಜವನ್ನು ಎತ್ತಿಹಿಡಿದು, ಅನೇಕ ರಾಜಕೀಯ ಸವಾಲುಗಳನ್ನು ಧೈರ್ಯದಿಂದ ಎದುರಿಸಿ,ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರದ ಗದ್ದುಗೆಗೆ ತರುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಐತಿಹಾಸಿಕವಾಗಿದೆ. ಪಕ್ಷಕ್ಕಾಗಿ ಅವರು ತೋರಿದ ಬದ್ಧತೆ, ಹೋರಾಟ ಮತ್ತು ತ್ಯಾಗ ಇಂದು ಫಲ ನೀಡಿದ್ದು, ರಾಜ್ಯದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಕರ್ನಾಟಕದ ಪ್ರತಿಯೊಬ್ಬ ಯುವಕ, ರೈತ, ಕಾರ್ಮಿಕ, ಮಹಿಳೆ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಅವರು ಕಾರ್ಯನಿರ್ವಹಿಸಲಿದ್ದು, ಸಾಮಾಜಿಕ ನ್ಯಾಯ, ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಹೊಸ ದಿಕ್ಕು ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ.ವಿಶೇಷವಾಗಿ ಯುವಕರಿಗೆ ರಾಜಕೀಯದಲ್ಲಿ ಶ್ರಮ,ನಿಷ್ಠೆ ಮತ್ತು ಹೋರಾಟವಿದ್ದರೆ ಯಾವುದೇ ಹುದ್ದೆಯನ್ನು ತಲುಪಬಹುದು ಎಂಬ ಸಂದೇಶವನ್ನು ಡಿ.ಕೆ. ಶಿವಕುಮಾರ್ ಅವರ ಜೀವನಗಾಥೆ ನೀಡುತ್ತದೆ.

ಮುಖ್ಯಮಂತ್ರಿ ಪದಗ್ರಹಣವು ರಾಜ್ಯದ ಯುವಜನತೆಗೆ ಹೊಸ ಪ್ರೇರಣೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಉತ್ಸಾಹವನ್ನು ತುಂಬಿದೆ.
ಅವರ ನಾಯಕತ್ವದಲ್ಲಿ ಕರ್ನಾಟಕವು ಅಭಿವೃದ್ಧಿ, ಸಮಾನತೆ ಮತ್ತು ಸೌಹಾರ್ದತೆಯ ಹೊಸ ಯುಗದತ್ತ ಸಾಗಲಿ. ರಾಜ್ಯದ ಪ್ರತಿಯೊಬ್ಬ ನಾಗರಿಕರ ಬದುಕಿನಲ್ಲಿ ಆಶಾಭಾವನೆ, ಹೊಸ ಬೆಳಕು ಮೂಡಲಿ ಎಂದು ಹಾರೈಸುತ್ತೇನೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಹೇಳಿದರು.

Related posts

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

Suddi Udaya

ಬಳಂಜ ಶಾಲಾ ವಿದ್ಯಾರ್ಥಿಗಳನ್ನು ಪಿಕಪ್-ಟಿಪ್ಪರ್ ನಲ್ಲಿ ವಿಹಾರಕ್ಕೆ ಕರೆದೊಯ್ದ ಶಿಕ್ಷಕ: ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ಕರೆದೊಯ್ದ ಶಿಕ್ಷಕನ ವಿರುದ್ಧ ಪೋಷಕರ ಅಸಮಾಧಾನ

Suddi Udaya

ಕಡಿರುದ್ಯಾವರ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆ ವತಿಯಿಂದ ಮುಂಡೂರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Suddi Udaya

ದೇವಸ್ಥಾನದ ಅಭಿವೃದ್ದಿಗೆ ಪ್ರಸಾದಂ ಯೋಜನೆಯಡಿಯಲ್ಲಿ ಅನುದಾನ ಒದಗಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರವೀಂದ್ರರಿಗೆ ಎ.ಎಸ್.ಐ. ಯಾಗಿ ಬಂಟ್ವಾಳ ನಗರ ಠಾಣೆಗೆ ಭಡ್ತಿ

Suddi Udaya
error: Content is protected !!