July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುದ್ದಿ ಉದಯ ಮಾಹಿತಿ ಪೋಸ್ಟರ್ ಅನಾವರಣ: ಸುದ್ದಿ ಉದಯ ಪತ್ರಿಕೆ ಅತ್ಯುತ್ತಮ ಗುಣಮಟ್ಟದೊಂದಿಗೆ ತಾಲೂಕಿನ ನಂಬರ್-1 ಪತ್ರಿಕೆಯಾಗಿ ಬೆಳೆಯುತ್ತಿದೆ: ಸಂಪತ್ ಬಿ. ಸುವರ್ಣ

ಬೆಳ್ತಂಗಡಿ: ಸುದ್ದಿ ಉದಯ ಪತ್ರಿಕೆ ಬೆಳೆಯುವುದು ಮಾತ್ರವಲ್ಲದೆ, ನಮ್ಮಂತಹ ಸಾಮಾನ್ಯ ಜನರಿಗೆ ಅವಕಾಶ ಕಲ್ಪಿಸಿ, ನಮ್ಮ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ, ಸಮಾಜದಲ್ಲಿ ಅತ್ಯುತ್ತಮವಾದ ಸ್ಥಾನಮಾನವನ್ನು ಕಲ್ಪಿಸಿ ಕೊಡುತ್ತಿದೆ. ಪತ್ರಿಕೆಯಲ್ಲಿ ಪ್ರತಿಭಾನ್ವಿತ ಬರಹಗಾರರಿಗೆ ಅವಕಾಶ ನೀಡಿ, ಜನಸ್ಥಾಯಿಯಾಗಿ ಬೆಳೆಯುತ್ತಿದೆ. ಪತ್ರಿಕೆ ಮಾತ್ರ ಬೆಳೆಯುವುದಲ್ಲ, ನಮ್ಮನ್ನೂ ಕೂಡಾ ಬೆಳೆಸಿದೆ, ಸರಳ ಬರವಣಿಗೆ ಶೈಲಿ ಮೂಲಕ ಅತ್ಯುತ್ತಮ ಗುಣಮಟ್ಟದಲ್ಲಿ ತಾಲೂಕಿನ ನಂಬರ್-೧ ಪತ್ರಿಕೆಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕöÈತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ ಹೇಳಿದರು.

ಅವರು ಜೂ.3ರಂದು ಬೆಳ್ತಂಗಡಿ ರಕ್ಷಾ ಆರ್ಕೇಡ್‌ನ 3ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುದ್ದಿ ಉದಯ ವಾರಪತ್ರಿಕೆಯ ಕಛೇರಿಯಲ್ಲಿ ನಡೆದ ಪತ್ರಿಕೆಯ ಮಾಹಿತಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಮುಖ್ಯ ಅತಿಥಿ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಇದರ ವ್ಯವಸ್ಥಾಪಕರಾದ ಲೋಹಿತ್ ಕುಮಾರ್ ಮಾತನಾಡಿ, ಸುದ್ದಿ ಉದಯ ಪತ್ರಿಕೆಯ ಆಧಾರ ಸ್ತಂಭಗಳು ಬಲಿಷ್ಠವಾಗಿದ್ದು, ಯಾವುದೇ ರೀತಿ ಕುಗ್ಗದೆ ಯಶಸ್ವಿಯಾಗಿ 3 ವರ್ಷ ಪೂರೈಸಿ, ಸಮಾಜದಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸಾಮಾನ್ಯರಿಗೂ ಸ್ಥಾನಮಾನ ಒದಗಿಸಿದ ಪತ್ರಿಕೆ
ಸುದ್ದಿ ಉದಯ ಹಲವು ಏರುಪೇರು, ಸಂಕಷ್ಟದ ನಡುವೆ ಹೋರಾಟವನ್ನು ನಡೆಸಿ ಯಶ್ವಸಿ ಮೂರು ವರ್ಷ ಪೂರೈಸಿದೆ. ನಾನು ಕೂಡಾ ಎಷ್ಟೋ ಬಾರಿ ಪತ್ರಿಕೆ ನಡೆಸಲು ಸಾಧ್ಯನಾ ಎಂದು ಆಲೋಚಿಸಿದ್ದೆ. ಎಷ್ಟೋ ಉದ್ಯಮಿಗಳು, ಬಂಡವಾಳಶಾಯಿಗಳು ಆರಂಭಿಸಿದ ಪತ್ರಿಕೆಗಳೇ ಉಳಿದಿಲ್ಲ. ಸಾಮಾನ್ಯ ಜನರು ಸೇರಿ ಪತ್ರಿಕೆ ಆರಂಭಿಸಿದ್ದು, ಉಳಿಯಬಹುದಾ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಇವುಗಳನ್ನೆಲ್ಲಾ ಮೀರಿ ಪತ್ರಿಕೆ ಬೆಳೆದು ಮುನ್ನಡೆಯುತ್ತಿದೆ. ಜನಸಾಮಾನ್ಯರು ಮಾಡುವ ಅಸಾಮಾನ್ಯ ಕೆಲಸಗಳು ಯಾವಾಗಲೂ ಶಾಶ್ವತವಾಗಿರುತ್ತದೆ. ಪತ್ರಿಕೆಯ ವರದಿಯ ಮೂಲಕ ಸಾಮಾನ್ಯ ಜನರಿಗೂ ಸಮಾಜದಲ್ಲಿ ಸ್ಥಾನಮಾನವನ್ನು ಕಲ್ಪಿಸುವ ಕೆಲಸ ಮಾಡಿದೆ. ಪತ್ರಿಕೆಯಲ್ಲಿ ಜನರಿಗೂ ಅವಕಾಶ ನೀಡಿ, ಅವರ ಸಾಧನೆಗಳನ್ನು ಗುರುತಿಸುವ ದೊಡ್ಡ ಕಾರ್ಯ ಮಾಡಿರುವುದು ಸುದ್ದಿ ಉದಯ ಪತ್ರಿಕೆ ಮಾತ್ರ. ನನ್ನ ಉದ್ಯಮ ಅಲ್ಲದಿದ್ದರೆ ನಾನು ಕೂಡ ಪತ್ರಿಕಾ ರಂಗಕ್ಕೆ ಬರುತ್ತಿದ್ದೆ. ನನ್ನ ಪತ್ರಿಕಾ ರಂಗದ ಕನಸನ್ನು ಹಿರಿಯ ಪತ್ರಕರ್ತರಾದ ಬಿ.ಎಸ್, ಕುಲಾಲ್, ಸಂತೋಷ್ ಪಿ. ಕೋಟ್ಯಾನ್, ತುಕರಾಮ್, ತಿಮ್ಮಪ್ಪ ನವರು ಸೇರಿ ನೆರವೇರಿಸಿದ್ದಾರೆ.
ಸಂಪತ್ ಬಿ ಸುವರ್ಣ ಅಧ್ಯಕ್ಷರು, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ

ಈ ಸಂದರ್ಭದಲ್ಲಿ ಸುದ್ದಿ ಉದಯ ವಾರಪತ್ರಿಕೆಯ ಪ್ರಧಾನ ಸಂಪಾದಕ ಬಿ.ಎಸ್. ಕುಲಾಲ್, ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ., ಉಪ ಸಂಪಾದಕ ಸಂತೋಷ್ ಪಿ ಕೋಟ್ಯಾನ್, ವ್ಯವಸ್ಥಾಪಕ ಪಿ. ತಿಮ್ಮಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ್ ಗೌಡ, ಸಿಬ್ಬಂದಿಗಳಾದ ಇರ್ಫಾನ್, ಸುಧಾ, ಪ್ರತಿಭಾ, ಧನ್ಯ, ಸುದಿತ್, ಮನೀಷ್ ವಿ. ಅಂಚನ್, ರಚನಾ ಉಪಸ್ಥಿತರಿದ್ದರು. ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕರಾದ ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.

Related posts

ಬೆಳ್ತಂಗಡಿ: ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ರೂ.3ಕೋಟಿ ಅನುದಾನ

Suddi Udaya

ವಲಯ ಮಟ್ಟದ ಶಾಲೆ ವಾಲಿಬಾಲ್ ಪಂದ್ಯಾಟ: ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಶೈಕ್ಷಣಿಕ ಸವಾಲುಗಳಿಗೆ ತಂತ್ರಜ್ಞಾನದ ಪರಿಹಾರ ಹುಡುಕುವ ಹ್ಯಾಕಥಾನ್

Suddi Udaya

ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ ರೂ.3.03 ಕೋಟಿ ವ್ಯವಹಾರ;ರೂ.13.04 ಲಕ್ಷ ಲಾಭ ; ಶೇಕಡಾ 25 ಡಿವಿಡೆಂಟ್

Suddi Udaya

ಉಜಿರೆ ಎಸ್.ಡಿ.ಎಮ್. “SAP-Software ಮೂಲಕ ಹಣಕಾಸು ಲೆಕ್ಕಪತ್ರ ನಿರ್ವಹಣೆ ಮತ್ತು ನಿಯಂತ್ರಣ” ಕುರಿತು ವಿಶೇಷ ತರಬೇತಿ ಕಾರ್ಯಾಗಾರ

Suddi Udaya

ಕನ್ಯಾಡಿ-I ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ ಚುನಾವಣೆ

Suddi Udaya
error: Content is protected !!