September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಉಜಿರೆ ಪ್ರಾ.ಕೃ.ಪ. ಸಹಕಾರಿ ಸೇವಾ ಸಂಘದ ನೂತನ ಕಟ್ಟಡ “ಉತ್ಥಾನ” ಲೋಕಾರ್ಪಣೆ: ಸಮಾರೋಪ ಸಮಾರಂಭ:ಜೋಡು ಜೀಟಿಗೆ ತುಳು ನಾಟಕ ಪ್ರದರ್ಶನ

ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ನೂತನ ಕಟ್ಟಡ “ಉತ್ಥಾನ” ಇದರ ಉದ್ಘಾಟನಾ ಸಮಾರಂಭ ನಡೆದು ಸಂಜೆ ಸಭಾ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಜೋಡು ಜೀಟಿಗೆ ನಾಟಕ ಪ್ರದರ್ಶನ ನಡೆಯಿತು.ಮೆಸ್ಕಾಂ ಮಂಗಳೂರು ಇದರ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು.

ಪ್ರಾ.ಕೃ.ಸ,ಸೇ. ಸಂಘ ಉಜಿರೆ ಇದರ ಅಧ್ಯಕ್ಷರಾದ ಕೇರಿಮಾರ್ ಬಾಲಕೃಷ್ಣ ಗೌಡ ಅಧ್ಯಕ್ಷತೆಯನ್ನು ವಹಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇದರ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆ ಹಾಗೂ ಉಜಿರೆ ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ರೆ|ಫಾ| ಅಬೆಲ್ ಲೋಬೋ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸರಸ್ವತಿ ರೈ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಜಿರೆಯ ಖ್ಯಾತ ನೃತ್ಯ ತಂಡ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಇವರಿಂದ ಗಾನ ನೃತ್ಯ ವೈಭವ ಹಾಗೂ ನಾಟಕ ರಂಗದಲ್ಲಿ ಸದ್ದನ್ನು ಮಾಡಿದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ, ಉರ್ವ ಚಿಲಿಂಬಿ, ಮಂಗಳೂರು ಇವರಿಂದ “ಜೋಡು ಜೀಟಿಗೆ” ತುಳು ಜನಪದ ನಾಟಕ ಜರಗಿತು. ನೂರಾರು ಪ್ರೇಕ್ಷಕರು ನಾಟಕವನ್ನು ಸಂಪೂರ್ಣವಾಗಿ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Related posts

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಭವ್ಯ ರಂಗಮಂಟಪದಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ಊರಿಗೆ ವನ್ಯಜೀವಿ ಬಂದರೆ 1926ಗೆ ಕರೆ ಮಾಡಿ: ಸಚಿವ ಈಶ್ವರ ಬಿ ಖಂಡ್ರೆ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ : ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ವಾರ್ಷಿಕ ಕ್ರೀಡಾಕೂಟ

Suddi Udaya

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಪೆರಿಂಜೆ ಗ್ರಾಮ ಸಮೀಕ್ಷೆ

Suddi Udaya

ಕೊಕ್ಕಡ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಬೆಳ್ತಂಗಡಿ: ತಾಲೂಕು ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಕ್ರೀಡಾ ಸಾಮಗ್ರಿ ವಿತರಣೆ

Suddi Udaya
error: Content is protected !!