September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಯಕ್ಷಭಾರತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಆರಂಭ

ಉಜಿರೆ: ಉಜಿರೆಯ ನಾಗರಾಜ ಕಾಂಪೌಂಡ್ ನ “ಶ್ರೀ ಮಾತಾ” ದಲ್ಲಿ ಕನ್ಯಾಡಿಯ ಯಕ್ಷಭಾರತಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಈ ಶೈಕ್ಷಣಿಕ ವರ್ಷದ ಯಕ್ಷಗಾನ ನಾಟ್ಯ ತರಬೇತಿ ಜೂನ್ 6ರಂದು ಆರಂಭವಾಯಿತು.

ಸಂಸ್ಥೆಯ ಜೊತೆ ಕಾರ್ಯದರ್ಶಿಗಳಾದ ರತ್ನವರ್ಮ ಜೈನ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ನಾಟ್ಯ ಗುರುಗಳಾದ ಚಂದ್ರಶೇಖರ ಧರ್ಮಸ್ಥಳ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿ ಹರೀಶ್ ಕೊಳ್ತಿಗೆ ಸ್ವಾಗತಿಸಿದರು.

ಶ್ರೀಮತಿ ಉಷಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಚಾಲಕ ಮಹೇಶ ಕನ್ಯಾಡಿ ವಂದಿಸಿದರು. ಈ ಸಂದರ್ಭದಲ್ಲಿ ರಸಪ್ರಶ್ನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪುಸ್ತಕ ನೀಡಲಾಯಿತು. ಟ್ರಸ್ಟಿಗಳಾದ ಕುಸುಮಾಕರ ಕೊತ್ತೋಡಿ, ಯಶೋಧರ ಇಂದ್ರ, ಗುರುಪ್ರಸಾದ್ ಸಹಕರಿಸಿದರು. ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬೆಳಾಲು ಗೌಡರ ಯಾನೆ ಒಕ್ಕಲಿಗರ ವಾರ್ಷಿಕೋತ್ಸವ

Suddi Udaya

ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಂದ ಮೊದಲ ದಿನವೇ 6 ಮೆಗಾ ಗ್ಯಾರಂಟಿ: ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್- ಯುವ ಜನರಿಗೆ ಉದ್ಯೋಗ ಗ್ಯಾರಂಟಿ- ಜೋಡೋ ಯುವ ಸಂಘ ರಚನೆ

Suddi Udaya

ಗುಂಡೂರಿ: ಶ್ರೀಮತಿ ಶಾಂತ ನಿಧನ

Suddi Udaya

ಆರಂಬೊಡಿ: ಮಿಲಾದ್ ಕಾರ್ಯಕ್ರಮ ಪ್ರಯುಕ್ತ ಮೌಲೂದ್ ಪಾರಾಯಣ ನವೀಕೃತ ನೂತನ ಮದರಸ ಕಟ್ಟಡ ಉದ್ಘಾಟನೆ

Suddi Udaya

ಮಾ 11: ಉಜಿರೆ ಬ್ರಹ್ಮಕಲಶೋತ್ಸವ: “ಧರ್ಮಯಾನ “ಐತಿಹಾಸಿಕ ಶೋಭಾಯಾತ್ರೆ-ಪ್ರಚಾರ ವಾಹನ ಅಭಿಯಾನಕ್ಕೆ ಚಾಲನೆ

Suddi Udaya

ಧರ್ಮಸ್ಥಳ: ಯುಗಾದಿ ಬಳಗದ ಸ್ನೇಹ ಪರ್ವ-2 ಕಾರ್ಯಕ್ರಮ

Suddi Udaya
error: Content is protected !!