29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೂ 3 ಲಕ್ಷ ವೆಚ್ಚದಲ್ಲಿ ಬರೆಯುವ ಪುಸ್ತಕ ವಿತರಣೆ

ನಾರಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಾರಾವಿ ಸೊಸೈಟಿ ಕಾರ್ಯವ್ಯಾಪ್ತಿಯ ಐದು ಗ್ರಾಮಗಳಾದ ನಾರಾವಿ, ಕುತ್ಲೂರು, ಕೊಕ್ರಾಡಿ, ಸಾವ್ಯ, ಸುಲ್ಕೇರಿ ಸರಕಾರಿ ಶಾಲೆಗಳಿಗೆ ರೂ 3.00 ಲಕ್ಷ ವೆಚ್ಚದಲ್ಲಿ ಸಂಪೂರ್ಣ ಬರೆಯುವ ಪುಸ್ತಕವನ್ನು ಜೂ 9ರಂದು ವಿತರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಿ ಮಾತನಾಡಿ ಶಿಕ್ಷಣವು ವ್ಯಕ್ತಿಯ ಭವಿಷ್ಯದ ಬದಲಿಸುವ ಶಕ್ತಿಯಾಗಿದೆ. ನಾರಾವಿ ಸೊಸೈಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪುಸ್ತಕ ಹಾಗೂ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ಸೊಸೈಟಿ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ವಹಿಸಿ ಎಲ್ಲರನ್ನು ಸ್ವಾಗತಿಸಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ನಮ್ಮ ಕಾರ್ಯವ್ಯಾಪ್ತಿಯ ಶಾಲೆಗಳಿಗೆ ಬರೆಯುವ ಪುಸ್ತಕ ನೀಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಅಗ್ನೀವೀರ್ ಗೆ ಆಯ್ಕೆಯಾದ ನಿಶ್ಚಿತ್ ಜೈನ್, ಶರತ್ ಅವರನ್ನು ಶಾಸಕ ಹರೀಶ್ ಪೂಂಜರವರು ಮತ್ತು ಸಿಎ ಬ್ಯಾಂಕ್ ವತಿಯಿಂದ ಸನ್ಮಾನಿಸಿದರು.

ಸುಲ್ಕೇರಿ ಶ್ರೀರಾಮ ಶಾಲೆಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ,ಪ್ರಗತಿಪರ ಕೃಷಿಕ ರಾಜು ಶೆಟ್ಟಿ ಕೊಕ್ರಾಡಿ, ನಾರಾವಿ ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲಾ ಹೆಗ್ಡೆ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಓ ಶಶಿಕಾಂತ್ ಜೈನ್, ಸೊಸೈಟಿ ನಿರ್ದೇಶಕರಾದ ಸದಾನಂದ ಗೌಡ ಸುಲ್ಕೇರಿ, ಕೃಷ್ಣಪ್ಪ ಪೂಜಾರಿ ಕುತ್ಲೂರು,ವಿಠಲ ಪೂಜಾರಿ ಸಾವ್ಯ,ಉಮೇಶ್ ಎಂ.ಕೆ ನಾರಾವಿ, ರಾಜೇಂದ್ರ ಕುಮಾರ್ ನಾರಾವಿ,ಶೇಖರ್ ಕುತ್ಲೂರು, ಯಶೋದ ಕುತ್ಲೂರು, ಸುಜಲತಾ ನಾರಾವಿ, ಪದ್ಮಶ್ರೀ ಕೊಕ್ರಾಡಿ, ಸುಪ್ರಿಯಾ ನಾರಾವಿ, ನವೋದಯ ಸಂಘದ ಮೇಲ್ವಿಚಾರಕ ಸ್ಟ್ಯಾನಿ, ಕೊಕ್ರಾಡಿ ಶಾಖಾ ಮುಖ್ಯಸ್ಥ ಶೇಖರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಸ್ಥಳಿಯ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಕೊಡಿಯಲಬೈಲ್ ಮಂಗಳೂರು ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಚೈತನ್ಯ ವಿಮೆ ಯೋಜನೆಯಿಂದ ಶ್ರೀಲಕ್ಷ್ಮಿ ತಂಡದ ರತ್ನರವರಿಗೆ ರೂ 50ಸಾವಿರ ವಿಮೆ ಹಸ್ತಾಂತರಿಸಲಾಯಿತು.ಹಾಗೂ ಇಂದಿರಾ ಮತ್ತು ಸುಕೇತಾ ಅವರಿಗೂ ವಿಮೆ ಮೊತ್ತ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ನಾರಾವಿ ಸೊಸೈಟಿ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಯಶೋಧರ ಬಂಗೇರ ನಿರೂಪಿಸಿದರು. ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಓ ಶಶಿಕಾಂತ್ ಜೈನ್ ವಂದಿಸಿದರು. ಶಿಕ್ಷಕರು,ಸದಸ್ಯರು, ವಿದ್ಯಾರ್ಥಿಗಳು ಸಹಕರಿಸಿದರು.

Related posts

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya

ಮಿತ್ತಬಾಗಿಲು: ಲೀಲಾವತಿ ನಿಧನ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ

Suddi Udaya

ಕೊಕ್ಕಡ ಪ್ರೌಢ ಶಾಲೆಯಿಂದ ರೂ. 3.20 ಲಕ್ಷ ಮೌಲ್ಯದ ಬ್ಯಾಟರಿ ಕಳವು ಮಾಡಿದ ಮೂವರ ಬಂಧನ

Suddi Udaya

ಗಾಳಿ ಮಳೆಯಿಂದ ಹಾನಿಗೊಳಗಾದ ತೆಕ್ಕಾರು ಬೇಬಿ ಪೂಜಾರ್ತಿರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ವೈಯಕ್ತಿಕ ಸಹಾಯ

Suddi Udaya

ನಾವೂರಿನಲ್ಲಿ ಮೀಲಾದ್ ರ‍್ಯಾಲಿ ಕಾರ್ಯಕ್ರಮಕ್ಕೆ ನವೋದಯ ಯುವಕ ಮಂಡಲ ವತಿಯಿಂದ ಸಿಹಿ ತಿಂಡಿ ವಿತರಣೆ: ಸೌಹಾರ್ದತೆಯ ಸಂದೇಶ ಸಾರಿದ ನೆಬಿದಿನ ರ‍್ಯಾಲಿ

Suddi Udaya
error: Content is protected !!