25.6 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

“ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಆಡಳಿತ ನೀಡಲಿ – ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಾಶಯಗಳು”: ಅನಿಲ್ ಕುಮಾರ್ ಯು

ಬೆಳ್ತಂಗಡಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರದ ಜವಾಬ್ದಾರಿ ವಹಿಸಿಕೊಂಡಿರುವುದು ರಾಜ್ಯದ ರಾಜಕೀಯ ಜೀವನದಲ್ಲಿ ಮಹತ್ವದ ಘಟ್ಟವಾಗಿದೆ.

ಒಬ್ಬ ವಕೀಲನಾಗಿ, ಸಂವಿಧಾನಬದ್ಧ ಮತ್ತು ಪಾರದರ್ಶಕ ಆಡಳಿತವನ್ನು; ಒಬ್ಬ ಕಾರ್ಮಿಕ ನಾಯಕನಾಗಿ, ಕಾರ್ಮಿಕರು, ರೈತರು, ಯುವಕರು ಮತ್ತು ಶ್ರಮಜೀವಿಗಳ ಹಿತಾಸಕ್ತಿಗೆ ಆದ್ಯತೆ ನೀಡುವ ಆಡಳಿತವನ್ನು ನಾನು ನಿರೀಕ್ಷಿಸುತ್ತೇನೆ.

ಇಂದಿನ ಕರ್ನಾಟಕಕ್ಕೆ ಅಗತ್ಯವಿರುವುದು ವೇಗವಾದ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಹೂಡಿಕೆ ಸ್ನೇಹಿ ವಾತಾವರಣ ಹಾಗೂ ಎಲ್ಲ ಪ್ರದೇಶಗಳ ಸಮಾನ ಬೆಳವಣಿಗೆ. ಜನರ ವಿಶ್ವಾಸಕ್ಕೆ ತಕ್ಕಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ನೂತನ ಸರ್ಕಾರ ಕಾರ್ಯನಿರ್ವಹಿಸಲಿ ಎಂಬುದು ನನ್ನ ಆಶಯ.

“ಅಧಿಕಾರವು ಹುದ್ದೆಯಿಂದ ಸಿಗುತ್ತದೆ; ನಾಯಕತ್ವವು ಜನರ ವಿಶ್ವಾಸದಿಂದ ನಿರ್ಮಾಣವಾಗುತ್ತದೆ. ಆ ವಿಶ್ವಾಸವನ್ನು ಅಭಿವೃದ್ಧಿಯ ಶಕ್ತಿಯನ್ನಾಗಿ ಪರಿವರ್ತಿಸುವ ಜವಾಬ್ದಾರಿ ಇಂದು ನೂತನ ಮುಖ್ಯಮಂತ್ರಿಗಳ ಮೇಲಿದೆ.” ಎಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ವಕೀಲರು ಅನಿಲ್ ಕುಮಾರ್ ಯು ತಿಳಿಸಿದರು.

Related posts

ಬೆಳ್ತಂಗಡಿ ತಾಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚುನಾವಣಾ ಪರಿವೀಕ್ಷಕರು

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ದಿಂದ ವಿಧಾನಸಭಾ ಚುನಾವಣಾ ಪೂರ್ವ ತಯಾರಿ ಸಭೆ

Suddi Udaya

ಫೆ.3: ಪೇಪರ್ ಲೇಸ್ ರಿಜಿಸ್ಟ್ರೇಷನ್ ಕುರಿತು ತರಬೇತಿ ಕಾರ್ಯಾಗಾರ

Suddi Udaya

ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ಚಾಲಕ ಪದ್ಮಯ್ಯ ಗೌಡ ನಿಧನ

Suddi Udaya

ಉಜಿರೆ: ಎಸ್.ಡಿ.ಎಂ. ಕಾಲೇಜು ಗ್ರಂಥಾಲಯದ ತುಕಾರಾಮ ಸಾಲಿಯಾನ್ ಸೇವಾ ನಿವೃತ್ತಿ

Suddi Udaya

ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!