34.3 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಪಂಚಾಯತ್‌ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿಯ ಸಹಭಾಗಿತ್ವದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬೆಳ್ತಂಗಡಿ ತಾಲೂಕು ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಅ.26 ರಂದು ನಡೆಯಿತು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮುಖ್ಯಸ್ಥ, ಸಹಪ್ರಾಧ್ಯಾಪಕ ಡಾ.ಹಂಪೇಶ್ ಕೆ.ಎಸ್. ಪ್ರಧಾನ ಭಾಷಣ ಮಾಡಿದರು. ತಹಶೀಲ್ದಾರ್ ಎಸ್.ಎನ್.ನರಗುಂದ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಭವಾನಿಶಂಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ ಎನ್.ಎಸ್., ಪ.ಪಂ.ಮುಖ್ಯಾಧಿಕಾರಿ ರಾಜೇಶ್ ಕೆ., ವಿವಿಧ ಇಲಾಖಾಧಿಕಾರಿಗಳು, ಸಮುದಾಯ, ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ವಸತಿ ನಿಲಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಯ ಮುರಳೀಧರ್ ಸ್ವಾಗತಿಸಿ, ಸಂಜೀವಿನಿ ವಲಯ ಮೇಲ್ವಿಚಾರಕ ಜಯಾನಂದ ಅಂಕಾಜೆ ವಂದಿಸಿ, ವಸತಿ ನಿಯಲ ಮೇಲ್ವಿಚಾರಕಿ ಹೇಮಲತಾ ನಿರೂಪಿಸಿದರು.

Related posts

ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲಿಸಲು ಸಮಿತಿ ರಚನೆ: ಬೆಳ್ತಂಗಡಿ ವಕೀಲರ ಸಂಘ ಸ್ವಾಗತ

Suddi Udaya

ಪಂಚಾಯತು ನಿರ್ಣಯ ಅನುಷ್ಠಾನದಲ್ಲಿ ವಿಳಂಬ; ಕೊಕ್ಕಡ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ರದ್ದು

Suddi Udaya

ಬಳ್ಳಮಂಜ ಬ್ರಹ್ಮಕಲಶೋತ್ಸವ-ಶ್ರೀ ಅನಂತ ಮತ್ತು ಶ್ರೀ ಈಶ್ವರ ದೇವರ ಬ್ರಹ್ಮಕಲಶಾಭೀಷೇಕ-ಬ್ರಹ್ಮರಥೋತ್ಸವ

Suddi Udaya

ಲೆಟ್ಸ್ ಥ್ಯಾಂಕ್ ಫೌಂಡೇಶನ್ ವತಿಯಿಂದ ಕಕ್ಕಿಂಜೆಯ ವಿಶೇಷ ಚೇತನ ಮೊಹಮ್ಮದ್ ಕುಂಞಿ ರವರಿಗೆ ಗೂಡಂಗಡಿಯ ಸಹಕಾರ

Suddi Udaya

ಜೆಸಿಐ ಮಡಂತ್ಯಾರಿಗೆ ವಲಯ ಮಹಿಳಾ ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿ ಹಾಗೂ ಮನ್ನಣೆ

Suddi Udaya
error: Content is protected !!