September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪತ್ನಿಯನ್ನು ಬಸ್ಸು ಹತ್ತಿಸಿ, ಸ್ಕೂಟಿಯಲ್ಲಿ ಬರುತ್ತೇನೆಂದು ಹೇಳಿದ ಪತಿ: ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಶವ ಪತ್ತೆ:

ಧರ್ಮಸ್ಥಳ: ಸಂಬಂಧಿಕರಿಗೆ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ನೀಡಲು ಚಿಕ್ಕಮಗಳೂರಿಗೆ ಹೋಗಿ ಹಿಂದಿರುಗುವ ವೇಳೆ ಮಳೆ ಬಂದ ಹಿನ್ನೆಲೆಯಲ್ಲಿ ಪತ್ನಿಯನ್ನು ಬಸ್ಸು ಹತ್ತಿಸಿ, ಸ್ಕೂಟಿಯಲ್ಲಿ ಬರುತ್ತೇನೆಂದು ಹೇಳಿದ ಪತಿಯ ಶವ ಕೊಟ್ಟಿಗೆ ಹಾರದ ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆ ಎ.26 ರಂದು ನಡೆದಿದೆ.

ಚಿಕ್ಕಮಗಳೂರು ತಾಲ್ಲೂಕಿನ ತೇಗೂರಿನ ದಿಲೀಪ್ (40ವ) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ.
ಉಜಿರೆಯಲ್ಲಿ ವಾಸವಿದ್ದ ದಿಲೀಪ್ ರವರು ಧರ್ಮಸ್ಥಳದಲ್ಲಿ ಮುಡಿ ತೆಗೆಯುವ ಕಾರ್ಯ ಮಾಡುತ್ತಿದ್ದರು.
ಧಮ೯ಸ್ಥಳ ಗ್ರಾಮದ ಕೂಟದ ಕಲ್ಲು ಎಂಬಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು.
ಇದರ ಆಮಂತ್ರಣ ಪತ್ರಿಕೆಯನ್ನು ತಮ್ಮ ಸಂಬಂಧಿಕರಿಗೆ ನೀಡಲು ಪತ್ನಿಯೊಂದಿಗೆ ತೇಗೂರಿಗೆ ಬಂದಿದ್ದ ದಿಲೀಪ್ ಬುಧವಾರ ಸ್ಕೂಟಿಯಲ್ಲಿ ಉಜಿರೆಗೆ ಹೊರಟ್ಟಿದ್ದರು. ಕೊಟ್ಟಿಗೆಹಾರ ಸಮೀಪ ಬರುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿಂದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗಲು ಹೇಳಿ ತಾನು ಮಳೆ ನಿಂತ ಮೇಲೆ ಸ್ಕೂಟಿಯಲ್ಲಿ ಬರುವುದಾಗಿ ತಿಳಿಸಿದ್ದಾರೆ.


ಬುಧವಾರ ಸಂಜೆ ಹೆಬ್ಬರಿಗೆ ಸಮೀಪ ರಸ್ತೆ ಬದಿಯಲ್ಲಿ ದಿಲೀಪ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್‌ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದೆ.
ಈ ಬಗ್ಗೆ ಸ್ಥಳಕ್ಕೆ ಬಣಕಲ್ ಪೊಲೀಸ್ ಇಲಾಖೆ ಮಾಹಿತಿ ಬಂದು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.


ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಸ್ಕೂಟಿ ಪತ್ತೆ:
ದಿಲೀಪ್ ಅವರ ಸ್ಕೂಟಿ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಮೇ 5 ರಂದು ಹಮ್ಮಿಕೊಂಡಿದ್ದು ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ಚಿಕ್ಕಮಗಳೂರಿಗೆ ಬಂದಿದ್ದವರು ಹಿಂದಿರುಗುವ ವೇಳೆ ಈ ಘಟನೆ ನಡೆದಿದ್ದು,. ಅಪಘಾತ ನಡೆದ ಜಾಗಕಿಂತ ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

Related posts

ಜು.6 : ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಮುಂಡಾಜೆ ಕೆ.ಎನ್. ಭಟ್ ಶಿರಾಡಿಪಾಲ್ ಅವರ ಶತಮಾನೋತ್ಸವದ ಪ್ರಯುಕ್ತ ಶತನಮನ ಶತಸನ್ಮಾನ ಸರಣಿ ಕಾರ್ಯಕ್ರಮ

Suddi Udaya

ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

Suddi Udaya

ಧರ್ಮಸ್ಥಳಕ್ಕೆ ಮದುವೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಅಪಘಾತ: 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯ

Suddi Udaya

ಬೆಳ್ತಂಗಡಿ ರಕ್ಷಿತ್ ಶಿವಾರಾಂ ರವರ ಸಹೋದರಿ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!