25.4 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಇಂದಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ

ಇಂದಬೆಟ್ಟು : ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ 12 ವರುಷಗಳು ತುಂಬಿದ ಈ ಸಂತಸದ ದಿನದಲ್ಲಿ, ಅವರಿಗೆ ಭಗವಂತನು ​ಉತ್ತಮ ಆರೋಗ್ಯ ​ಅಪಾರ ಚೈತನ್ಯ ಇನ್ನಷ್ಟು ಮಿಗಿಲಾದ ದೇಶಸೇವೆ ಮಾಡುವ ಶಕ್ತಿ​ಯನ್ನು ಬಂಗಾಡಿ ಸೀಮೆಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ಸ್ವಾಮಿ ಕರುಣಿಸಲಿ ಎಂದು ಪ್ರಾರ್ಥಿಸಿ, ಇಂದಬೆಟ್ಟು ಶಕ್ತಿ ಕೇಂದ್ರದ ಬೂತ್ 28, 29,30,31 ವತಿಯಿಂದ ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು, ತಾಲೂಕು ರೈತ ಮೋರ್ಚಾದ ಉಪಾಧ್ಯಕ್ಷ ಪಳನಿ ಸ್ವಾಮಿ ಪಿ.ಆರ್, ಬೂತ್ ಅಧ್ಯಕ್ಷರಾದ ನವೀನ್ ಜೈನ್, ಕಾರ್ಯದರ್ಶಿ ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ವಿಜಯ್ ಹೊಡಿಕ್ಕಾರು, ಗಣೇಶ್ ಗೌಡ ಕಲ್ಲಾಜೆ, ರಾಮ ಮೊಯಿಲಿ ಬಂಗಾಡಿ, ತಿಮ್ಮಪ್ಪ ಗೌಡ ಬೆದ್ರಬೆಟ್ಟು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಉಜಿರೆ ಸಿದ್ದವನ ಗುರುಕುಲದಲ್ಲಿ ಗುರುವಂದನಾ ವ್ಯಾಸಪೂರ್ಣಿಮೆ ಮತ್ತು ‘ವಂದೇ -ಗುರುಪರಂಪರಾಮ್’ ಕಾರ್ಯಕ್ರಮ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಮಾಧವ ಕಾಮತ್ ನಿಧನ

Suddi Udaya

ಆರಂಬೋಡಿಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ 41ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಸಿದ್ಧತೆ: ಅಧ್ಯಕ್ಷರಾಗಿ ಸಂಘಟಕ ಪ್ರಣೀತ್ ಹಿಂಗಾನಿ ಆಯ್ಕೆ

Suddi Udaya

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನ: ಕುವೆಟ್ಟು ನಿವಾಸಿ ಮೊಹಮ್ಮದ್ ರಫೀಕ್ ಬಂಧನ

Suddi Udaya

ಸಹಕಾರಿ ಸಂಘದ ವತಿಯಿಂದ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಅವರಿಗೆ ಅಭಿನಂದನೆ

Suddi Udaya
error: Content is protected !!