28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಎಕ್ಸೆಲ್ ಟೆಕ್ನೊ ಸ್ಕೂಲ್ “ಲುಮಿನ್ಯಾ” ಪ್ರಾರಂಭೋತ್ಸವ ಆರಂಭ, ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

ಗುರುವಾಯನಕೆರೆ: ನಗರ ಪ್ರದೇಶಗಳಲ್ಲಿ ಉತ್ಕೃಷ್ಟ ದರ್ಜೆಯ ಶಿಕ್ಷಣ ಹೇಗೆ ಸಿಗುತ್ತಿದೆಯೋ ಅದೇ ಮಾದರಿಯಲ್ಲಿ ಎಕ್ಸೆಲ್‌ನಲ್ಲಿ ಕೂಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಮತ್ತು ಸಂಸ್ಕಾರಭರಿತ ಶಿಕ್ಷಣ ನೀಡಿ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವ ಪ್ರಯತ್ನ ನಮ್ಮದು ಎಂದು ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಅವರು ಜೂ 10ರಂದು ನಡೆದ ಎಕ್ಸೆಲ್ ವಿದ್ಯಾಸಾಗರ್ ಕ್ಯಾಂಪಸ್‌ನಲ್ಲಿ ಎಕ್ಸೆಲ್ ಟೆಕ್ನೊ ಸ್ಕೂಲ್ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವುಗಳು ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ.ದೇಶದ ಭವಿಷ್ಯ ರೂಪಿಸುವ ಮಕ್ಕಳನ್ನು ಎಕ್ಸೆಲ್ ಮೇಲೆ ನಂಬಿಕೆಯಿಟ್ಟು ಸೇರಿಸಿದ್ದೀರಿ. ನಂಬಿಕೆಗೆ ನ್ಯಾಯ ಕೊಡುವ ಪರಿಪೂರ್ಣ ಕೆಲಸವನ್ನು ನಾವು ಮಾಡುತ್ತೇವೆ.ವಿದ್ಯಾರ್ಥಿಗಳು 360 ಡಿಗ್ರಿ ಸರ್ವತೋಮುಖ ಬೆಳವಣಿಗೆಯತ್ತ ಗಮನಹರಿಸಬೇಕು.ಇದಕ್ಕಾಗಿ ಅಗತ್ಯವಾದ ಬೆಂಬಲವನ್ನು ಸಂಸ್ಥೆಯು ನೀಡುತ್ತದೆ ಎಂದರು..

ಎಕ್ಸೆಲ್ ಟೆಕ್ನೊ ಸ್ಕೂಲ್ ಪ್ರಾಂಶುಪಾಲರಾದ ಸುಮಿತ್ರಾರವರು ಮಾತನಾಡಿ ಪಿಯು ಶಿಕ್ಷಣದಲ್ಲಿ ಎಕ್ಸೆಲ್ ವಿದ್ಯಾರ್ಥಿಗಳು ಅಮೋಘ ಸಾಧನೆಯ ಶಿಖರವೇರಿದ್ದಾರೆ. ಅದೇ ಮಾದರಿಯಲ್ಲಿ ಟೆಕ್ನೋ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.ಜೊತೆಗೆ ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಎಕ್ಸೆಲ್ ನಲ್ಲಿ ನಡೆಯುತ್ತದೆ ಎಂದರು.

ವೇದಿಕೆಯಲ್ಲಿ ಅರಮಲೆಬೆಟ್ಟ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ, ಟೆಕ್ನೋ ಶಾಲೆಯ ಮುಖ್ಯಸ್ಥರಾದ ಸಹನಾ ಜೈನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕ ಚಂದ್ರಪ್ಪ ಅವರು ನಿರೂಪಿಸಿದರು.ಎಕ್ಸೆಲ್ ಶಿಕ್ಷಕಿಯರಾದ ಲೀನಾ ಫ್ಲೋರಿನಾ ಪಿಂಟೋ, ಪವಿತ್ರಾ ಕೋಟ್ಯಾನ್, ಸ್ವಾತಿ, ಗೀತಾ, ಚೇತನಾ, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Related posts

ರಿಷಿಕಾ ಕುಂದೇಶ್ವರರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ರಿಷಬ್ ಶೆಟ್ಟಿ ಭೇಟಿ

Suddi Udaya

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಪದ್ಮುಂಜ ಸರಕಾರಿ ಪ್ರೌಢಶಾಲೆಗೆ ಶೇ.96.15 ಫಲಿತಾಂಶ

Suddi Udaya

ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನಲ್ಲಿ ‘ಟ್ಯಾಲೆಂಟ್ ಹ್ಯೂಸ್ 2026’ ಸಂಭ್ರಮ

Suddi Udaya

ಕುವೆಟ್ಟು: ಕೇದಳಿಕೆ ನಿವಾಸಿ ಬಾಬು ನಾಯ್ಕ್ ನಿಧನ

Suddi Udaya
error: Content is protected !!