24.3 C
ಪುತ್ತೂರು, ಬೆಳ್ತಂಗಡಿ
June 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕ ಹರೀಶ್ ಪೂಂಜರಿಂದ ಪ.ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ ರವರಿಗೆ ಮನವಿ

ಬೆಳ್ತಂಗಡಿ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಲೆಕುಡಿಯ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ ೩ (೨) ಅಡಿಯಲ್ಲಿ ಭೂ ಪರಿವರ್ತನೆ ಮಾಡಿ ಅನುಮತಿ ನೀಡಲು ಸಂಬಂಧ ಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಶಾಸಕ ಹರೀಶ್ ಪೂಂಜ ರವರು ಪ.ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರಾದ ಕನಗವಲ್ಲಿ ರವರನ್ನು ಭೇಟಿಯಾಗಿ ಮನವಿ ಮಾಡಿದರು.

ಸ್ವಾತಂತ್ರೊತ್ತರ ಭಾರತದಲ್ಲಿ ಕತ್ತಲ ಜೀವನ :
ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬುಡಕಟ್ಟು ಸಮುದಾಯದ ಜನ ಭಯದ ವಾತಾವರಣದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಕುತ್ಲೂರು, ನಾವರ, ಶಿರ್ಲಾಲು ಸವಣಾಲು, ನಡ, ನಾವುರ, ಮಲವಂತಿಗೆ, ಮೊದಲಾದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಮೋರಿ, ವಿದ್ಯುತ್ ಸೇರಿದಂತೆ, ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲು ಹೊರಟಾಗ ಸಹಜವಾಗಿ ಎಲ್ಲಾರೂ ಅರಣ್ಯ ಇಲಾಖೆಯ ಕಡೆಗೆ ಬೊಟ್ಟು ಮಾಡುತ್ತಾರೆ. ಕಾನೂನಾತ್ಮಕ ಅಂಶಗಳನ್ನು ಅಧಿಕಾರಿಗಳು ಅವರಿಗೆ ಬೇಕಾದಂತೆ ಅರ್ಥೈಸಿದ ಪರಿಣಾಮ ಮೂಲಭೂತ ಸೌಕರ್ಯ ಇಲ್ಲದೆ ಬುಡಕಟ್ಟು ಸಮುದಾಯ ಜನರು ಕಂಗಾಲಾಗಿದ್ದಾರೆ.

ಆನ್ಲೈನ್ ಅರ್ಜಿ ಎಂಬ ಅರಣ್ಯ ಇಲಾಖೆಯ ಸಿದ್ದ ಉತ್ತರ:
ಹೋರಾಟಗಾರರು, ಜನಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ಅರುಣ್ಯ ಇಲಾಖೆಯ ಅಧಿಕಾರಿಗಳು ಆನ್ಲೈನ್ ಅರ್ಜಿ ಸಲ್ಲಿಸಬೇಕು ಎಂದು ಹೇಳುತ್ತಾರೆ ಮುಂದಿನ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆ ಮಾಹಿತಿಯ ಕೊರತೆ ಅಧಿಕಾರಿಗಳಲ್ಲಿ ಮೇಲ್ನೋಟಕ್ಕೆ ಕಾಣುತ್ತಿದೆ. ಪರಿವೇಶ್ ಪೋರ್ಟಲ್ ನಲ್ಲಿ ಅರುಣ್ಯ ಇಲಾಖೆಯ ಕಾನುನಿನ ಅನ್ವಯ ಅನುಮತಿಗಳಿಗೆ ಅರ್ಜಿ ಸಲ್ಲಿಸಲಾಗುತ್ತದೆ ಸಾಮಾನ್ಯವಾಗಿ ಫಾರೆಸ್ಟ್ ಕ್ಲಿಯರೆನ್ಸ್, ವನ್ಯ ಜೀವಿ ಮಂಡಳಿಯ ಅನುಮತಿ, ಪರಿಸರ ಸೂಕ್ಷ್ಮ ವಲಯ, SಇZ , ಮೊದಲಾದ ಅನುಮತಿಗಾಗಿ ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಕಾಮಗಾರಿ ನಡೆಸುವ ಸಂಸ್ಥೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ರೈಲ್ವೆ, ಹೆದ್ದಾರಿ ಸೇರಿದಂತೆ ಯಾವುದೇ ಕಾಮಗಾರಿಯನ್ನು ಅರುಣ್ಯ ಜಮೀನಿನಲ್ಲಿ ಮಾಡುವಾಗ ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲಾಗುತ್ತದೆ ಇದೆಲ್ಲವೂ ಸಾಮಾನ್ಯ ಪ್ರಕ್ರಿಯೆ.

ಅರಣ್ಯ ಹಕ್ಕು ಕಾಯ್ದೆ ಎಂಬ ವಿಶೇಷ ಅಧಿಕಾರ:
ತಲೆ ತಲಾಂತರದಿAದ ಅರಣ್ಯ ಅಥವಾ ಅರಣ್ಯವನ್ನು ಅವಲಂಬಿಸಿ ಜೀವನ ನಡೆಸುವ ಬುಡಕಟ್ಟು ಸಮುದಾಯದ ಹಕ್ಕುಗಳನ್ನು ಗುರುತಿಸುವ ಸಲುವಾಗಿ ಅರಣ್ಯ ಹಕ್ಕು ಕಾಯ್ದೆ -೨೦೦೬ ಜಾರಿಗೆ ಬಂದಿರುತ್ತದೆ. ಕಾಯ್ದೆಯ ಸೆಕ್ಷನ್ ೩ ಯಲ್ಲಿ ಹಕ್ಕುಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಹಕ್ಕುಗಳನ್ನು ಗುರುತಿಸಿ ಹಕ್ಕು ಪತ್ರ ನೀಡಲು ಆಡಳಿತ ವ್ಯವಸ್ಥೆಗೆ ಸಾಧ್ಯವಾಗಿಲ್ಲ ಎಂದು ಅಂಕಿ ಅಂಶಗಳನ್ನು ಗಮನಿಸಿದಾಗ ತಿಳಿಯುತ್ತದೆ.

ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ ೩ (೨) ಏನಿದರ ಮಹತ್ವ:
ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ ೩ (೨) ಅಡಿಯಲ್ಲಿ ಅರಣ್ಯ ಜಮೀನನ್ನು ರಸ್ತೆ ವಿದ್ಯುತ್, ಶಾಲೆ , ಸಮುದಾಯ ಭವನ ಸೇರಿದಂತೆ ಹನ್ನೆರಡು ಅಭಿವೃದ್ಧಿ ಯೋಜನೆಗಳಿಗೆ ಒಂದು ಹೆಕ್ಟೇರ್ ನ ಒಳಗೆ ೭೫ ಕ್ಕಿಂತ ಹೆಚ್ಚು ಮರಗಳನ್ನು ಕಡಿಯದೆ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ೨೦೦೯ ರಲ್ಲಿ ಬುಡಕಟ್ಟು ಸಚಿವಾಲಯ ಆದೇಶವನ್ನು ಮಾಡಿ ಈ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು ಎಂದು ತಿಳಿಸಲಾಗಿದೆ.

ಅರಣ್ಯ ಇಲಾಖೆಯ ವಿತ್ತಂಡವಾದ:
ಪ್ರಾರAಭಿಕ ದಿನಗಳಲ್ಲಿ ಅರಣ್ಯ ಇಲಾಖೆಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅನುಮತಿ ಕೇಳಿದಾಗ ಅದೆಲ್ಲ ಆಗುವುದಿಲ್ಲ ಆನ್ಲೈನ್ ಅರ್ಜಿ ಸಲ್ಲಿಸಬೇಕು ಎಂದು ಹೇಳುತ್ತಿದ್ದರು. ನಂತರ ಆದೇಶ ಪ್ರತಿಯೊಂದಿಗೆ ಕೇಳಿದಾಗ ಫಾರೆಸ್ಟ್ ಕ್ಲಿಯರೆನ್ಸ್ ಬೇಡ ಆದರೆ ವನ್ಯ ಜೀವಿ ಮಂಡಳಿಯ ಅನುಮತಿ ಬೇಕು ಎಂದು ಹೇಳಲು ಆರಂಭಿಸಿದರು. ಈ ಬಗ್ಗೆ ಮತ್ತೆ ಬುಡಕಟ್ಟು ಸಚಿವಾಲಯದಿಂದ ಸ್ಪಷ್ಟನೆಯನ್ನು ಕೇಳಿದಾಗ ವನ್ಯಜೀವಿ ಮಂಡಳಿಯ ಅನುಮತಿ ಕೂಡ ಅವಶ್ಯಕತೆ ಇಲ್ಲ ಅರಣ್ಯ ಹಕ್ಕು ಗ್ರಾಮ ಸಭೆಯ ಷರತ್ತುಗಳು ಹೊರತುಪಡಿಸಿ ಇತರ ಯಾವುದೇ ಅನುಮತಿಗಳು ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದರ ಮಧ್ಯೆ ಅರಣ್ಯ ಇಲಾಖೆ ವೈಯಕ್ತಿಕ ಹಕ್ಕುಪತ್ರ ಇದ್ದಾಗ ಮಾತ್ರ ಅರಣ್ಯವಾಸಿಗಳೆಂದು ಪರಿಗಣನೆ ಮಾಡಲು ಸಾಧ್ಯ ವೈಯಕ್ತಿಕ ಹಕ್ಕುಪತ್ರ ಇಲ್ಲದೆ ಇದ್ದಾಗ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ ೩ (೨) ಅನ್ವಯ ಆಗಲ್ಲ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಅರಣ್ಯವನ್ನು ಅವಲಂಬಿಸಿರುವ ಎಲ್ಲಾರು ಅರಣ್ಯವಾಸಿಗಳು ಎಂದು ಬುಡಕಟ್ಟು ಸಚಿವಾಲಯ ೨೦೦೮ ರಲ್ಲಿ ಆದೇಶ ನೀಡಿರುತ್ತದೆ.

ಅಧಿವೇಶನದಲ್ಲಿ ಪ್ರಸ್ತಾಪ :
ಶಾಸಕ ಹರೀಶ್ ಪೂಂಜರವರು ೨೦೧೯ ರಿಂದ ಅಧಿವೇಶನದಲ್ಲಿ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ ೩ (೨) ಬಗ್ಗೆ ನಿರಂತರವಾಗಿ ಧ್ವನಿಯೆತ್ತುತ್ತ ಬಂದಿದ್ದಾರೆ. ಪ್ರತಿ ಹಂತದಲ್ಲೂ ಅರಣ್ಯ ಇಲಾಖೆ ಆಧಾರ ರಹಿತ ಉತ್ತರವನ್ನು ನೀಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಬುಡಕಟ್ಟು ಸಚಿವಾಲಯಕ್ಕೆ ಪರಿಸರ ಸಚಿವಾಲಯ ೨೦೨೦ ರಲ್ಲಿ ನೀಡಿದ ಅಭಿಪ್ರಾಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರದರ್ಶನ ಮಾಡುತ್ತಿದ್ದು. ಈ ಅಭಿಪ್ರಾಯವನ್ನು ಪರಿಶೀಲನೆ ಮಾಡಿ ೨೦೨೫ ರಲ್ಲಿ ಬುಡಕಟ್ಟು ಸಚಿವಾಲಯ ಹೊರಡಿಸಿದ ಆದೇಶವನ್ನು ಮರೆಮಾಚಲಾಗುತ್ತಿದೆ.

ಜನರನ್ನು ದಿಕ್ಕು ತಪ್ಪಿಸುವ ಷಡ್ಯಂತ್ರಗಳು :
ಈ ಮಧ್ಯೆ ಅರಣ್ಯ ಇಲಾಖೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನರನ್ನು ಒಕ್ಕಲೆಬ್ಬಿಸಲು ಉತ್ತಮ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಆದ್ದರಿಂದ ಅಭಿವೃದ್ಧಿ ಯೋಜನೆಗಳು ಸ್ಥಗಿತವಾಗುತ್ತದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಅರಣ್ಯದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಬುಡಕಟ್ಟು ಸಮುದಾಯಗಳನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಕಾನೂನಿನ ಅನ್ವಯ ಮೂಲಭೂತ ಸೌಕರ್ಯ ಕಲ್ಪಿಸಬೇಕಾಗುತ್ತದೆ.

ಎಂಟು ದಶಕಗಳ ಕತ್ತಲಿನ ಜೀವನಕ್ಕೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ:
ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಲೆಕುಡಿಯ ಸಮುದಾಯದ ಮುಖಂಡರು ಆ ಭಾಗದ ಜನಪ್ರತಿನಿಧಿಗಳು ಸಂಘಟಿತ ಪ್ರಯತ್ನ ಮಾಡಿದರೆ ಇನ್ನೂ ೪-೫ ತಿಂಗಳಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬಹುದು ಪ್ರಮುಖವಾಗಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಹಂತ ೧; ಮೆಸ್ಕಾಂ ಇಲಾಖೆ ಫಾರಂ -ಎ ಭರ್ತಿ ಮಾಡಿ ದಾಖಲೆಗಳೊಂದಿಗೆ ಅರಣ್ಯ ಹಕ್ಕು ಗ್ರಾಮ ಸಮಿತಿಗೆ ಸಲ್ಲಿಸುವುದು.
ಹಂತ ೨: ಅರಣ್ಯ ಹಕ್ಕು ಗ್ರಾಮ ಸಭೆ ನಡೆಸಿ ನಿರ್ಣಯ ದೊಂದಿಗೆ ವಲಯ ಅರಣ್ಯಾಧಿಕಾರಿಗಳಿಗೆ ಸಲ್ಲಿಸುವುದು
ವಲಯ ಅರಣ್ಯಾಧಿಕಾರಿಗಳು ಮೂರು ವಾರಗಳ ಅವಧಿಯಲ್ಲಿ ತಮ್ಮ ವರದಿಯೊಂದಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸುವುದು.
ಹಂತ ೩: ಉಪ ವಲಯ ಅರಣ್ಯಾಧಿಕಾರಿಗಳು ನಾಲ್ಕು ವಾರಗಳ ಒಳಗೆ ಅನುಮತಿಯನ್ನು ನೀಡುವುದು. ಸಾಧ್ಯವಾಗದೆ ಇದ್ದಾಗ ಜಿಲ್ಲಾ ಮಟ್ಟದ ಸಮಿತಿಯ ನಿರ್ಣಯಕ್ಕೆ ಸಲ್ಲಿಸುವುದು. ಈ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ತಡೆಯೊಡ್ಡಿದರೆ. ಕಾನೂನು ಮತ್ತು ಆದೇಶಗಳ ಆಧಾರದಲ್ಲಿ ನ್ಯಾಯಾಲಯದಿಂದ ಸರಳವಾಗಿ ನಿರ್ದೆಶನ ಪಡೆಯಬಹುದು.

Related posts

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕಾಶಿಬೆಟ್ಟು ಹೆದ್ದಾರಿಯಲ್ಲಿ ನಿಮಾ೯ಣವಾದ ಬಾವಿಯಾಕಾರದ ಹೊಂಡ, ಗುಂಡಿಗಳು ಸಂಚಾರಕ್ಕೆ ವಾಹನಗಳ ಪರದಾಟ, ಪ್ರತಿದಿನ ವಾಹನ ಬ್ಲಾಕ್

Suddi Udaya

ಬೆಳ್ತಂಗಡಿ ಗೃಹರಕ್ಷಕ ದಳ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಸುಲ್ಕೇರಿ: ಅನುದಾನಿತ ಖಾಸಗಿ ಹಿ.ಪ್ರಾ. ಹಾಗೂ ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ಕಾಡಾನೆ ದಾಳಿ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತ ಪರಿಹಾರ ನೀಡಲು ಉದ್ಯಮಿ ಗಣೇಶ್ ಕಲಾಯಿ ಒತ್ತಾಯ

Suddi Udaya

ಕಳಿಯ ಮತ್ತು ಬೆಳ್ತಂಗಡಿಮೆಸ್ಕಾಂ ಸಂಪರ್ಕಕ್ಕೆ ರಸ್ತೆಗೆ ಶಿಲಾನ್ಯಾಸ

Suddi Udaya
error: Content is protected !!