25.4 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವತಿಯಿಂದ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಅಳದಂಗಡಿ: ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ 24ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ ಹಾಗೂ ಕಂಪ್ಯೂಟರ್ ವಿತರಣೆ ಮತ್ತು ಆರೋಗ್ಯ ತಪಾಸಣೆ ಶಿಬಿರವು ಜೂ.೧೪ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ಜರುಗಿತು.

ಈ ಕಾರ್ಯಕ್ರಮದ ಉದ್ಘಾಟಣೆಯನ್ನು ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್ ದೀಪ ಪ್ರಜ್ವಲನೆ ಮೂಲಕ ನೇರವೇರಿಸಿ ಶುಭ ಕೋರಿದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆಯನ್ನು ವಹಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ವಸ್ತ್ರದಾನ, ಉಚಿತ ಪುಸ್ತಕ ಹಾಗೂ ಕಂಪ್ಯೂಟರ್ ನ್ನು ವಿತರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ,ಮೋಹಿತ್ ಕುಮಾರ್,ನಾರಾಯಣ ದೇವಾಡಿಗ ದುಬೈ,ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ,ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಂಜನ್ ಜಿ ಗೌಡ, ಮಂಗಳೂರು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸತೀಶ್ ಕಾಶಿಪಟ್ಣ, ಕೆಕೆ ಶಾಹುಲ್ ಹಮೀದ್ ಉಪಸ್ಥಿತರಿದ್ದರು.

ಸನ್ಮಾನ\ ರ‍್ಯಾಂಕ್ ವಿಜೇತರಿಗೆ ಪ್ರತಿಭಾ ಪುರಸ್ಕಾರ:
ನಿವೃತ್ತ ಸೈನಿಕರಾದ ಎಸಿಪಿ ನಾಯಕ್ ಸುಬೇದಾರ ಎನ್‌ಪಿ ತಂಗಚ್ಚನ್, ರೂಬಿನ್ ಜೋಸೆಫ್ ರವರನ್ನು ಸನ್ಮಾನಿಸಲಾಯಿತು.ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪಿ.ಹೆಚ್.ನಿತ್ಯಾನಂದ ಶೆಟ್ಟಿ,ಪ್ರಜ್ಞಾ ಓಡಿಲ್ನಾಳ,ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಮೊದಲು ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್,ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ, ಮೋಹಿತ್ ಕುಮಾರ್,ನಿವೃತ್ತ ಸೈನಿಕರು ಶ್ರೀ ಸೋಮನಾಥೇಶ್ವರಿ ದೇವರ ಮತ್ತು ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Related posts

ಅ.28 : ಈ ವರ್ಷದ ಕೊನೆಯ ‘ಚಂದ್ರಗ್ರಹಣ’ : 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ

Suddi Udaya

ಡಿ 19-20: ಉಜಿರೆ ಶ್ರೀ ಧ.ಮಂ.ಅ.ಹಿ. ಪ್ರಾ. ಶಾಲೆಗೆ ಶಾಲಾ ಶತಮಾನೋತ್ಸವ ಸಂಭ್ರಮ

Suddi Udaya

ಕುಂದಾಪುರ ಜೆಸಿಯ ಆತಿಥ್ಯದಲ್ಲಿ ನಡೆದ ಲಾಟ್ಸ್ ನಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಪ್ರಶಸ್ತಿ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಆರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಮತ್ತು ಸ್ಚಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ

Suddi Udaya

ಅಳದಂಗಡಿ ಅರಮನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಭೇಟಿ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಅಭಿವಂದನಾ ಕಾರ್ಯಕ್ರಮ: ಚಲನಚಿತ್ರ ನಟ ವಿಜಯ ರಾಘವೇಂದ್ರ ಭಾಗಿ

Suddi Udaya
error: Content is protected !!