29.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜು

ಪೆರ್ಮುಡ ಸ.ಹಿ.ಪ್ರಾ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಮಹಾಲಿಂಗೇಶ್ವರ್ ಶೌರ್ಯ ವಿಪತ್ತು ಘಟಕ, ಗರ್ಡಾಡಿ ವಲಯ ಹಾಗೂ ಸ ಹಿ ಪ್ರಾ ಶಾಲೆ ಪೆರ್ಮುಡ ಸಹಕಾರದೊಂದಿಗೆ ಶಾಲೆಯ ಹೊರಾಂಗಣದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ವೇಣೂರು ಸಿಎ ಬ್ಯಾಂಕಿನ ಉಪಾಧ್ಯಕ್ಷ ರತ್ನಾಕರ ಬಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಶಾಲಾ ಹಂತದಲ್ಲೇ ಮಕ್ಕಳಿಗೆ ಸಸಿ ನೆಡುವ ಹಾಗೂ ಪೋಷಿಸುವ ಅಭ್ಯಾಸವನ್ನು ಬೆಳೆಸಿದರೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅವರು ಜೀವನಪರ್ಯಂತ ಅಳವಡಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಅರಣ್ಯ ನಾಶ ಹಾಗೂ ಹವಾಮಾನ ವೈಪರಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು

ಶೌರ್ಯ ವಿಪತ್ತು ಘಟಕ ಸಂಯೋಜಕರು ಹಾಗೂ ಸ್ವಯಂಸೇವಕರು ಊರಿನವರ ಜೊತೆ ಸೇರಿ ಶಾಲಾ ಹೊರಾಂಗಣ ಸ್ವಚ್ಛತೆ ಹಾಗೂ ವಿವಿಧ ಹಣ್ಣಿನ ಗಿಡ ಗಳನ್ನು ನಾಟಿ ಮಾಡಿದರು

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಯಶೋಧ, ಕೃಷಿ ಮೇಲ್ವಿಚಾರಕ ಕೃಷ್ಣ, ವಲಯ ಒಕ್ಕೂಟದ ಅಧ್ಯಕ್ಷ ವರದರಾಜ ಕುಲಾಲ್, ನಿಟ್ಟಡೆ/ಪೆರ್ಮುಡ ಒಕ್ಕೂಟದ ಅಧ್ಯಕ್ಷ ಕರುಣಾಕರ ಹಾಗೂ ಪ್ರಕಾಶ್ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಶಾಲಾ ಮುಖ್ಯ ಶಿಕ್ಷಕಿ ಅರುಣಾ, ಅರಣ್ಯ ಇಲಾಖೆ ಅಧಿಕಾರಿ ವಸಂತ, ಸೇವಾಪ್ರತಿನಿಧಿ ವನಿತಾ ಹಾಗೂ ಪಿ ಜಯಂತಿ, ಪ್ರಮೀಳಾ, ಶೌರ್ಯ ವಿಪತ್ತು ಘಟಕದ ಎಲ್ಲಾ ಸ್ವಯಂ ಸೇವಕರು ಹಾಗೂ ಸಹಶಿಕ್ಷಕರು, ಒಕ್ಕೂಟದ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕನ್ಯಾಡಿ ಸೇವಾ ಭಾರತಿಗೆ ಬೆಳ್ತಂಗಡಿಯ ಅಕ್ಷಯ ಇಂಪ್ರೆಶನ್ಸ್ ಮಾಲಕ ಯಶವಂತ ಪಟವರ್ಧನ್ ದಂಪತಿಗಳಿಂದ ರೂ‌.25 ಸಾವಿರ ದೇಣಿಗೆ

Suddi Udaya

ಮದ್ದಡ್ಕ ತಾಯಿ‌ ಪಿಲಿಚಾಮುಂಡಿ‌ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

Suddi Udaya

ಬೆಳ್ತಂಗಡಿ ಪಾರಸ್‌ ಪೃಥ್ವಿ ಜುವೆಲ್ಸ್ ನಲ್ಲಿ “ಭರ್ಜರಿ ಆಷಾಢ ಸೇಲ್ಸ್”

Suddi Udaya

ಉಜಿರೆ ಲಲಿತನಗರ ನಿವಾಸಿ ಲೀಲಾವತಿ ನಿಧನ

Suddi Udaya

ಮಾ.27ರಿಂದ ಎ.1: ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಜಾತ್ರೋತ್ಸವ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಜಯ

Suddi Udaya
error: Content is protected !!