September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಸ.ಉ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ

ಬಂದಾರು: ಬಂದಾರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣಾ ಕಾರ್ಯಕ್ರಮವು ಜೂ. 16 ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಯಶೋ ವಿಜಯ (ಬದುಕು-ನೆನಪು-ಸ್ಮರಣೆ) ಹಾಗೂ ಶಶಿಧರ ಶೆಟ್ಟಿ ಬರೋಡ ಇವರ ಮಾತೃಶ್ರೀಯವರಾದ ದಿ. ಕಾಶಿ ಶೆಟ್ಟಿಯವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿತ್ತು.

ಪ್ರಮುಖ ಸಂಘಟನಾ ಸಂಸ್ಥೆಗಳಾದ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ (ರಿ.) ಉಜಿರೆ, ರೋಟರಿ ಕ್ಲಬ್‌ ಬೆಳ್ತಂಗಡಿ, ಪಟ್ಲ ಫೌಂಡೇಶನ್‌ ಬೆಳ್ತಂಗಡಿ ಘಟಕ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ.), ಬಿರುವೆರ್‌ ಕುಡ್ಲ (ರಿ.) ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ಈ ಶ್ಲಾಘನೀಯ ಕಾರ್ಯಕ್ರಮ ಮೂಡಿಬಂದಿದೆ.

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನ ಸಂಚಾಲಕರು ಹಾಗೂ ಲಕ್ಷ್ಮೀ ಇಂಡಸ್ಟ್ರೀಸ್ ಮತ್ತು ‘ಕನಸಿನ ಮನೆ’ ಉಜಿರೆಯ ಮಾಲಕರಾದ ಕೆ. ಮೋಹನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಿ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಇದೇ ಸಂದರ್ಭದಲ್ಲಿ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ, ಬಂದಾರು ಸರಕಾರಿ ಶಾಲೆಯ ವತಿಯಿಂದ ಕೆ. ಮೋಹನ್ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪದ್ಮುಂಜ ಸಿ.ಎ.ಬ್ಯಾಂಕ್‌ ನ ಉಪಾಧ್ಯಕ್ಷ ಅಶೋಕ್‌ ಪಾಂಜಲ , ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್‌ , ಶಾಲಾ ಮುಖ್ಯೋಪಾಧ್ಯಾಯರಾದ ವಿಶ್ವನಾಥ್‌, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ನವೀನ್‌, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿಮಲ ತಾರಿದಡಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ರಫೀಕ್ ಸ್ವಾಗತಿಸಿ, ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ವಿನುತಾ, ಚಂದ್ರಕಲಾ, ರೇಖಾ, ದೀಪಿಕಾ, ಗೀತಾ ಹಾಗೂ ಸುಜಯಿನಿ ಉಪಸ್ಥಿತರಿದ್ದು ಸಹಕರಿಸಿದರು.

Related posts

ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ: ನಿರಂಜನ್ ಜೈನ್ ಕುದ್ಯಾಡಿ‌

Suddi Udaya

ಪದ್ಮುಂಜ: ಕ್ವಾಟ್ರಸ್ ಪುದ್ದೊಟ್ಟು ದೇವಸ್ಥಾನ ಹೋಗುವ ಜಿ.ಪಂ. ರಸ್ತೆ ಬದಿ ಅನಧಿಕೃತವಾಗಿ ಹಾಕಿದ್ದ ಬೇಲಿಯನ್ನು ತೆರವುಗೊಳಿಸಿದ ಕಂದಾಯ ಇಲಾಖೆ

Suddi Udaya

ಪೃಥ್ವಿ ಜುವೆಲ್ಸ್ ನಿಂದ ಜ್ಯುವೆಲ್ಲರಿ ಪ್ರದರ್ಶನಕ್ಕೆ ಮೂಡಬಿದ್ರೆಯಲ್ಲಿ ಚಾಲನೆ

Suddi Udaya

ನಿಡ್ಲೆ: ನೆಡಿಲು ನಾರಾಯಣ ಗೌಡರವರ ತೋಟಕ್ಕೆ ನುಗ್ಗಿದ್ದ ಒಂಟಿ ಸಲಗ: ಹಲವು ಬಾಳೆ ಗಿಡ ಹಾಗೂ ಅಡಿಕೆ ಗಿಡಗಳಿಗೆ ಹಾನಿ

Suddi Udaya

ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟನೆ

Suddi Udaya

ಅಂತರ್ ಜಿಲ್ಲಾ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಎಸ್.ಡಿ.ಎಂ ಕಾಲೇಜಿಗೆ ಪ್ರಶಸ್ತಿ

Suddi Udaya
error: Content is protected !!