September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಏಕಾಏಕಿ ಚಲಿಸಿದ ಲಾರಿ: ಚಾಲಕ ಬಂದಾರು ನಿವಾಸಿ ಮಹೇಶ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ವಿಟ್ಲ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು (ಜೂ.18) ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಟಿಪ್ಪರ್ ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಬಂದಾರು ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.
ಟಿಪ್ಪರ್ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸುವ ಸಲುವಾಗಿ ಚಾಲಕ ಮಹೇಶ್ ಲಾರಿಯ ಕೆಳಗೆ ಇಳಿದು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಏಕಾಏಕಿ ಲಾರಿ ಮುಂದಕ್ಕೆ ಚಲಿಸಿದ್ದು, ಮಹೇಶ್ ಲಾರಿಯ ಚಕ್ರಗಳ ಅಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Related posts

ಉಜಿರೆ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಆಚರಣೆ

Suddi Udaya

ಹತ್ಯಡ್ಕ : ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಶಿಶಿಲ-ಅರಸಿನಮಕ್ಕಿ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರಿಂದ ತೆರವು ಕಾರ್ಯ

Suddi Udaya

ನಿಡ್ಲೆ: 90 ವರ್ಷದ ವಯೋವೃದ್ಧೆ ಸರಸ್ವತಿಯವರಿಂದ ಮತದಾನ

Suddi Udaya

ಬೆಳ್ತಂಗಡಿ ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕ ಲೋಕಯ್ಯ ಗೌಡ ನಿಧನ

Suddi Udaya

ಜು.13: ಉಜಿರೆಯಲ್ಲಿ ನ್ಯೂ ತ್ರಿಲೋಖ್ ನೃತ್ಯ ಸಂಸ್ಥೆ ಶುಭಾರಂಭ

Suddi Udaya

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

Suddi Udaya
error: Content is protected !!