26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ: ಯಂಗ್ ಚಾಲೆಂಜರ್ಸ್ ನಲ್ಲಿ ಅಣಬೆ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ರಬ್ಬರ್ ಬೊರ್ಡ್ ಕೋಟ್ಟಾಯಂ, ಮತ್ತು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಮುಂಡಾಜೆ ಇವರ ಜಂಟಿ ಆಶ್ರಯದಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ವಿವಿಧ ಸ್ವಸಹಾಯ ಸಂಘಗಳ ಸದಸ್ಯರ ಕೂಡುವಿಕೆಯೊಂದಿಗೆ ಯಂಗ್ ಚಾಲೆಂಜರ್ಸ್ ಭವನದಲ್ಲಿ ಒಂದು ದಿನದ ಅಣಬೆ ಕೃಷಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಾಗಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಮುಂಡಾಜೆ ಇದರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೊಸಗದ್ದೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಸಿಪಿಸಿಆರ್‌ಐ ಸಂಸ್ಥೆಯ ಪಾಂಡುರಂಗ ಮಂಗಳೂರು, ರಬ್ಬರ್ ಬೋರ್ಡ್ ನ ರಿಜಿನಲ್ ಕಚೇರಿಯಾ ರಬ್ಬರ್ ಪ್ರೊಟೆಕ್ಷನ್ ಕಮಿಷನರ್ ಶೃಜಾ ಟಿ.ಪಿ, ಅಸಿಸ್ಟೆಂಟ್ ಡೆವಲಪ್ಮೆಂಟ್ ಅಫೀಸರ್ ರೋಶನಿ
ಇವರು ಭಾಗಿಯಾಗಿದ್ದು ತರಬೇತಿ ನಡೆಸಿಕೊಟ್ಟರು.

ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಸ್ವಾಗತಿಸಿದರು. ಗೌರವ ಸಲಹೆಗಾರ ಬಾಬು ಪೂಜಾರಿ ಕೂಳೂರು ವಂದಿಸಿದರು. ಕಾರ್ಯದರ್ಶಿ ಲಕ್ಷ್ಮಣ್ ನಾಯ್ಕ್ ನಿರೂಪಿಸಿದರು.
ಯಂಗ್ ಚಾಲೆಂಜರ್ಸ್ ಪದಾಧಿಕಾರಿಗಳು ಹಾಗೂ 40 ಕ್ಕೂ ಅಧಿಕ ಮಂದಿ ತರಬೇತಿಯ ಪ್ರಯೋಜನ ಪಡೆದರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya

ಮಡಂತ್ಯಾರು: ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಚರಂಡಿಗೆ ಜಾರಿದ ಕೆ ಎಸ್ ಆರ್ ಟಿ ಸಿ ಬಸ್ಸು

Suddi Udaya

ಪಡಂಗಡಿ : ತಿಮ್ಮಪ್ಪ ಜೆ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಮುಂಬೈ – ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಭ್ಯವಿದ್ದಂತಹ ವಿವಿಧ ಕೋರ್ಸ್ ಗಳೆಲ್ಲಾ ಇದೀಗ ಪುತ್ತೂರಿನಲ್ಲೂ: VFX, AI, SAP ಕೋರ್ಸ್ ಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ; ಅತೀ ಕಡಿಮೆ ಶುಲ್ಕದೊಂದಿಗೆ ನುರಿತ ತಂಡದಿಂದ ತರಬೇತಿ ನೀಡಲಿದೆ ವಿದ್ಯಾಮಾತಾ

Suddi Udaya
error: Content is protected !!