32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಕ್ಕಿಂಜೆ ಯುವಕ ಆಲ್ವಿನ್ ಸಿ. ಜೆ ಗೆ ಅಂತರರಾಷ್ಟ್ರೀಯ ಮಟ್ಟದ “ಯುವ ವಿಜ್ಞಾನಿ ಪ್ರಶಸ್ತಿ” ಗೌರವ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ನಿವಾಸಿ ಸಿ. ಎ. ಜೋನಿ ಮತ್ತು ಸಿನ್ಸಿ ದಂಪತಿಯ ಪುತ್ರರಾದ ಆಲ್ವಿನ್ ಸಿ. ಜೆ ಅವರು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ಯುವ ವಿಜ್ಞಾನಿ ಪ್ರಶಸ್ತಿ” (Young Scientist Award) ಯಿಂದ ಪುರಸ್ಕೃತ ಗೊಂಡಿದ್ದಾರೆ.

ಜೂ. 5 ಮತ್ತು 6 ರಂದು ನಡೆದ “ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಆಲ್ವಿನ್ ಅವರು ಪ್ರಸ್ತುತ ತುಮಕೂರಿನ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSIT – SSAHE) ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ (E&EE) ವಿಭಾಗದ ‘ಕಂಪ್ಯೂಟರ್ ಅಪ್ಲಿಕೇಶನ್ಸ್ ಇನ್ ಇಂಡಸ್ಟ್ರಿಯಲ್ ಡ್ರೈನ್ಸ್’ (CAID) ವಿಭಾಗದಲ್ಲಿ ಸ್ನಾತಕೋತ್ತರ (PG) ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.

ಸಂಶೋಧನೆ ಮತ್ತು ಸಾಧನೆ:
ಇವಿ ತಂತ್ರಜ್ಞಾನ (ಎಲೆಕ್ನಿಕ್ ವೆಹಿಕಲ್) ಮತ್ತು ಸುಸ್ಥಿರ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಲ್ವಿನ್ ಅವರು ನೀಡುತ್ತಿರುವ ನಿರಂತರ ಮತ್ತು ಪ್ರಭಾವಶಾಲಿ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಇದೇ ಸಮ್ಮೇಳನದಲ್ಲಿ ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ BESS in a Changing Climate: Challenges, Risks, and Adaptive Strategies ಎಂಬ ಮಹತ್ವದ ಪ್ರಬಂಧವನ್ನು ಮಂಡಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾದರು. ಆಲ್ವಿನ್ ಅವರು ಈ ಸಾಧನೆಯನ್ನು ಇಇಇ ವಿಭಾಗದ ಸಹ-ಪ್ರಾಧ್ಯಾಪಕರಾದ ಡಾ. ಶಿಲ್ಪಾ ಜಿ. ಎನ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತಿದ್ದಾರೆ.

ಗಣ್ಯರ ಜಂಟಿ ಆಯೋಜನೆ:
ಈ ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇಡೋ ಅಗ್ರಿಕಲ್ಮರ್, (NAAC A+) ಮಾನ್ಯತೆ ಪಡೆದ ಎಸ್‌ಜಿಟಿ (SGT) ವಿಶ್ವವಿದ್ಯಾಲಯ, ರೂರ್ಕಿಯ ಮದರ್‌ಹುಡ್ ವಿಶ್ವವಿದ್ಯಾಲಯ, ರಾಂಪುರದ ಮೊಹಮ್ಮದ್ ಅಲಿ ಚೌಹರ್ ವಿಶ್ವವಿದ್ಯಾಲಯ ಮತ್ತು ఎఐఎఆరాఇసిటిఇఐసిటి (AIARECTEICT) ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದವು.


ಆಲ್ವಿನ್ ಸಿ. ಜೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆದ್ರಬೆಟ್ಟಿನ ಮರಿಯಾಂಬಿಕಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮುಗಿಸಿದ್ದು, ನಂತರ ಉಜಿರೆಯ ಎಸ್‌ಡಿಎಂ (SDM) ಕಾಲೇಜು, ನಿಟ್ಟೆಯ ಎನ್‌ಆರ್‌ಎಎಂ (NRAM) ಪಾಲಿಟೆಕ್ನಿಕ್ ಮತ್ತು ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ (MCE) ಹಳೆಯ ವಿದ್ಯಾರ್ಥಿಯಾಗಿದ್ದಾರೆ.

Related posts

ರಾಜ್ಯ ಮಟ್ಟದ ಪ್ರಕೃತಿ ಚಿಕಿತ್ಸೆ,ಯೋಗ ಹಾಗೂ ಪೌಷ್ಠಿಕ ಆಹಾರ ಮಾಹಿತಿ ಶಿಬಿರದ ಸಮಾರೋಪ

Suddi Udaya

ನೆರಿಯ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಸರೋಜಾ ನಿವೃತ್ತಿ

Suddi Udaya

ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಮಾರುಕಟ್ಟೆಗೆ ಬಿಡುಗಡೆ

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya

ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸಂಘ ಪಿಲಿಕಜೆ ಬೈಲುವಾರು ಸಮಿತಿಯ ಮಾಸಿಕ ಸಭೆ , ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!