28.3 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾಳ್ತಿಲ ಕಶೆಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಯೋಗ ದಿನಾಚರಣೆ

ಬಂಟ್ವಾಳ : ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಆಡಳಿತ ಮಂಡಳಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀದೇವಳದ ಆಡಳಿತ ಮೊಕ್ತೇಸರರಾದ ಸುಧಾಕರ ಶೆಣೈ ಮರೋಳಿ ನೆರವೇರಿಸಿದರು. ಯೋಗ ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯವಾಹಕ ಡಾಕ್ಟರ್ ಜಯಪ್ರಕಾಶ್ ನಾಯಕ್ ಮೋನಡ್ಕ, ಬೆಂಗಳೂರು ನಡೆಸಿಕೊಟ್ಟರು.

ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಸ್ತಾವನೆಯನ್ನು ಡಾಕ್ಟರ್ ವಿಜಯಲಕ್ಷ್ಮಿ ನಾಯಕ್ ನೇರಳಕೋಡಿ ರವರು ನಿರ್ವಹಿಸಿದರು. ರಾಜ್ಯಮಟ್ಟದ ಯೋಗ ಪಟುಗಳಾದ ಸಾನ್ವಿ ನಾಯಕ್ ಮೈರಾ ಹಾಗೂ ದೀಕ್ಷ ಪ್ರಭು ಕೆಮ್ಮಾಯಿ ರವರು ವಿಶೇಷ ಯೋಗ ಆಸನಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಭುವನೇಶ್ ಶಾನಭಾಗ್ ಬೆಂಗಳೂರು, ಡಾ ಶಿವಪ್ರಕಾಶ್ ಮೋನಡ್ಕ, ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ರಮೇಶ್ ನಾಯಕ್ ಗುಂಡೂರು, ಅನುವಂಶಿಕ ಮೊಕ್ತೇಸರರಾದ ಕಂಟಿಕ ವೆಂಕಟ್ರಾಯ ಶೆಣೈ, ಮಾಜಿ ಮೊಕ್ತೇಸರರಾದ ಕಂಟಿಕ ಗೋಪಾಲ ಶೆಣೈ, ಸುಧಾಕರ ಪ್ರಭು ಪೆರ್ಮರೋಡಿ, ಮೊಕ್ತೇಸರರಾದ ನಿತ್ಯಾನಂದ ಭಟ್ ಬರೆಪ್ಪಾಡಿ, ಚಂದ್ರಶೇಖರ್ ಪ್ರಭು ಹೆಣ್ಣೂರು, ಕಶೆಕೋಡಿ ರಾಘವೇಂದ್ರ ನಾಯಕ್, ಸಂದೀಪ್ ಪ್ರಸಾದ್ ಕಡಂಬು, ಸಚಿನ್ ಇಂದಾಜೆ, ಮಾನಸ ನಾಯಕ್ ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

ಮೊಕ್ತೇಸರರಾದ ದಯಾನಂದ ನಾಯಕ್ ಬೆಳ್ತಂಗಡಿ ವಂದಿಸಿದರು. ಸುಮಾರು 100 ಕ್ಕೂ ಹೆಚ್ಚು ಯೋಗಪಟುಗಳು ಯೋಗಾಸನಗಳನ್ನು ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

Related posts

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಪದ್ಮುಂಜ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ 25 ವಿದ್ಯಾರ್ಥಿಗಳು ಉತ್ತೀರ್ಣ

Suddi Udaya

ಉಜಿರೆ ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿಭಾ ಸಂಗಮ ಕಾರ್ಯಕ್ರಮ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರವರಿಗೆ ಗೌರವಾರ್ಪಣೆ

Suddi Udaya

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya
error: Content is protected !!