26.2 C
ಪುತ್ತೂರು, ಬೆಳ್ತಂಗಡಿ
September 22, 2026
Uncategorized

ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಬೈರಾಪುರಕ್ಕೆ ಸಂಪರ್ಕ: ಶಿಶಿಲ- ಬೈರಾಪುರ ಘಾಟಿರಸ್ತೆಯ ಜಂಟಿ ಸ್ಥಳ ಸಮೀಕ್ಷೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಬೈರಾಪುರದವರೆಗಿನ ಪ್ರಸ್ತಾವಿತ ಘಾಟಿ
ರಸ್ತೆಗೆ ಆ.6 ಇಂದು ಜಂಟಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಜೇಕಬ್ ಎಲ್. ಅವರ ಸೂಚನೆ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಿ.ಎಂ ಜಿ.ಎಸ್. ವೈ ಮತ್ತು ಪಿ.ಎಂ -ಜನಮನ್ ಯೋಜನೆಯಡಿ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು.
ನಿವೃತ್ತ ಇಂಜಿನಿಯರ್ ಎಚ್ ಎಂ ಶಿವಪ್ರಕಾಶ್, ಕೆಎಚ್ ಬಿ ಮಾಜಿ ಅಧ್ಯಕ್ಷ ಜಿ.ಎಚ್ ಹಾಲಪ್ಪ, ಸಮಾಜ ಸೇವಕ ಬಿ ಕೆ ಲಕ್ಷ್ಮಣ್ ಕುಮಾರ ಚಿಕ್ಕಮಗಳೂರು, ಯೋಜನಾ ವಿಭಾಗ ದ ಕಾರ್ಯಪಾಲಕ ಎಂಜಿನಿಯರ್ ಹರೀಶ್, ಸಹಾಯಕ ಇಂಜಿನಿಯರ್ ಸಂತೋಷ್ , ಮಂಗಳೂರು ಯೋಜನಾ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ರಾಜಾರಾಮ್, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್, ರಸ್ತೆ ಹೋರಾಟ ಸಮಿತಿಯ ಕೆ . ಜಿ ಗೋಖಲೆ, ಪದ್ಮನಾಭ ಕೆ, ಸುಂದರ ಕೆ, ಕರುಣಾಕರ ಅಡ್ಡಹಳ್ಳ, ನರಸಿಂಹ ಗೌಡ, ಹಾಗೂ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು .

Related posts

ಜೂ.30 : ಕೊಕ್ಕಡ ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ರೆಖ್ಯಾ ಗ್ರಾಮದ ಬಾಲಕೃಷ್ಣ ಗೌಡ ಸಾವು : ಕಾಡಾನೆ ದಾಳಿ ಶಂಕೆ

Suddi Udaya

ಪುಂಜಾಲಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya

ಎಪಿಎಂಸಿ ನಿವೃತ್ತ ಕಾರ್ಯದರ್ಶಿ ವೆಂಕಪ್ಪ ಗೌಡ ಕೈಯಾಡಿ ನಿಧನ

Suddi Udaya

ಗೇರುಕಟ್ಟೆ ಪೇಟೆಯ ಬಳಿಯ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶ ವ ಪತ್ತೆ

Suddi Udaya

ಭಾರೀ ಗಾಳಿ-ಮಳೆ: ನಾವೂರು ನಾಗಜೆ ಯಮನಾ ರವರ ಮನೆಗೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ಹಾನಿ

Suddi Udaya
error: Content is protected !!