September 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ಚುನಾವಣೆ

ಬೆಳ್ತಂಗಡಿ ಪಿಎಂಶ್ರೀ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಗಾಗಿ ಚುನಾವಣಾ ಪ್ರಕ್ರಿಯೆಯನ್ನು ಜೂ.೮ರಂದು ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣಾ ಪದ್ಧತಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ದೇಶದ ಚುನಾವಣಾ ಮಾದರಿಯಲ್ಲಿಯೇ ಇವಿಎಂ ಮಿಷಿನ್ ಆಪ್ ಮೂಲಕ ಮೊಬೈಲ್‌ನಲ್ಲಿ ಮತದಾನ ಪ್ರಕ್ರಿಯೆಯನ್ನು ಆಯೋಜಿಸಲಾಯಿತು. ಚುನಾವಣಾ ಪ್ರಕ್ರಿಯೆಯು ಸಂಪೂರ್ಣವಾಗಿ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಜರುಗುವಂತೆ ವ್ಯವಸ್ಥೆ ಮಾಡಲಾಯಿತು.

ಶಾಲೆಯ ಚುನಾವಣಾ ಅಧಿಕಾರಿಗಳಾಗಿ ಶಾಲಾ ಮುಖ್ಯ ಶಿಕ್ಷಕ ಪಿ. ಶಿವಾನಂದ ಭಂಡಾರಿ ಅವರು ಮಾರ್ಗದರ್ಶನ ನೀಡಿ, ಶಾಲೆಯ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಚುನಾವಣಾ ಕಾರ್ಯವನ್ನು ಸಮರ್ಪಕವಾಗಿ ನಡೆಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಅವಕಾಶ ಪಡೆದರು.

ಮಧ್ಯಾಹ್ನದ ನಂತರ ಮತ ಎಣಿಕೆ ಕಾರ್ಯವನ್ನು ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಯಿತು. ಶಾಲಾ ಮಂತ್ರಿಮAಡಲದ ನಾಯಕಿಯಾಗಿ ಗಣ್ಯಶ್ರೀ, ಉಪನಾಯಕನಾಗಿ ಲೋಹಿತ್ ಆಯ್ಕೆಯಾಗಿರುತ್ತಾರೆ.

ಇತರ ಮಂತ್ರಿಗಳಾದ ಶಿಕ್ಷಣ ಮಂತ್ರಿಯಾಗಿ ಯಶ್ವಿನ್ ವೈ ಶೆಟ್ಟಿ, ಅನೂಫ್ ಅಲಿ, ಗೃಹ ಮಂತ್ರಿಯಾಗಿ ಪೂರ್ಣೇಶ, ಶರಣಪ್ಪ, ಹಣಕಾಸು ಮಂತ್ರಿಯಾಗಿ ಪಂಚಮಿ, ವಿಲಾಸ್, ಆರೋಗ್ಯ ಮಂತ್ರಿಯಾಗಿ ಶ್ರೀಶಾಂತ್, ಆರ್ಯನ್, ಆಹಾರ ಮಂತ್ರಿಯಾಗಿ ಆರವ್, ವರ್ಷಿತಾ, ಕ್ರೀಡಾ ಮಂತ್ರಿಯಾಗಿ ಸಹನ್ ಬೋಧ್, ಪ್ರೀತಮ್, ರಕ್ಷಣಾ ಮಂತ್ರಿಯಾಗಿ ವೈ. ರೋಹಿತ್, ಅಭಿಷೇಕ್, ನೀರಾವರಿ ಮಂತ್ರಿಯಾಗಿ ಸುಜನ್, ಮಹಮ್ಮದ್ ಹಫೀಝು, ವಾರ್ತಾ ಮಂತ್ರಿಯಾಗಿ ಯಶ್ವಿತ್, ಫಾತಿಮತ್ ಶಿಫಾನ, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ರಶಾನ, ಹವೀಶ್ ಶೆಟ್ಟಿ, ಕಾನೂನು ಮಂತ್ರಿಯಾಗಿ ನೀರಜ್, ಫಾತಿಮತ್ ಹಿಬಾ, ಗ್ರಂಥಾಲಯ ಮಂತ್ರಿಯಾಗಿ ಸಿರಿ, ಶೈವಿ. ಪಿ. ಶೆಟ್ಟಿ, ತೋಟಗಾರಿಕಾ ಮಂತ್ರಿಯಾಗಿ ಮನೀಶ್, ತೇಜಸ್, ವಿರೋಧ ಪಕ್ಷದ ನಾಯಕಿಯಾಗಿ ವರ್ಷಿತಾ ಆಯ್ಕೆಯಾದರು.

ನೂತನವಾಗಿ ಆಯ್ಕೆಯಾದ ಶಾಲಾ ಮಂತ್ರಿಮಂಡಲದ ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

Related posts

ಮೇಲಂತಬೆಟ್ಟು: ನಡುವಡ್ಕ ನಿವಾಸಿ ಹೊನ್ನಮ್ಮ ನಿಧನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ: ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿ ಹಾಗೂ 20 ಮಂದಿ ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

Suddi Udaya

ಕುವೆಟ್ಟು ಸ.ಉ.ಪ್ರಾ.ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಸೆ.10: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಕಾರ್ಯಕ್ರಮ, ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

Suddi Udaya

ಪಿಲ್ಯ: ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ

Suddi Udaya
error: Content is protected !!