30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮನ್ ಷ್ಯರ್ ಅಕಾಡಮಿಯ ಕಾಲೇಜು ಉಪಪ್ರಾಂಶುಪಾಲೆ ಗೌತಮಿ ಶರಣ್. ಪಿ. ಆರ್.ಪ್ರಾಂಶುಪಾಲರಾಗಿ ಪದೋನ್ನತಿ

ಗೇರುಕಟ್ಟೆ: ಸಯ್ಯಿದ್ ಉಮರ್ ಅಸ್ಸಖಾಫ್ ಮನ್ ಶರ್ ತಂಗಳ್ ರವರ ನೇತೃತ್ವದ ಮನ್ ಶರ್ ಅಕಾಡೆಮಿಯಲ್ಲಿ ಕಳೆದ ಆರು ವರ್ಷಗಳಿಂದ ಬೌತಶಾಸ್ತ್ರ ಉಪನ್ಯಾಸಕರಾಗಿ ಪಿ. ಯು. ಕಾಲೇಜ್ ಹಾಗೂ ಪ್ಯಾರ ಮೆಡಿಕಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ , ಸೇವಾ ಬದ್ಧತೆ, ಕಠಿಣ ಪರಿಶ್ರಮದಿಂದ ತಮ್ಮ ಶೈಕ್ಷಣಿಕ ವೃತಿ ಬದುಕನಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಸಾಧಕರಾಗಿ ಸಮಾಜಕ್ಕೆ ಸಮರ್ಪಿಸಿದ ಇವರ ಪ್ರಾಮಾಣಿಕ ಸೇವೆಗೆ ಮನ್ ಷ್ಯರ್ ಅಕಾಡೆಮಿಯಲ್ಲಿ 2023 ರಲ್ಲಿ ವರ್ಷದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು ಹಾಗೂ ಮನ್ ಶರ್ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ, ಪ್ರಥಮ, ದ್ವಿತೀಯ, ತ್ರಿತಿಯ ರಾಂಕ್ ಗಳನ್ನು ಪಡೆಯುವಲ್ಲಿ ಬೆನ್ನೆಲುಬಾಗಿ ನಿಂತ , ಇವರ ಸಾಧನೆಗೆ ಆಡಳಿತ ಮಂಡಳಿಯು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ಯಾರ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಪದೊನ್ನಾತಿಯನ್ನು ನೀಡಿ ಗೌರವಿಸಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಇವರು ಪುತ್ತೂರಿನ ವಿವೇಕಾನಂದ ಕಾಲೇಜು, ಬಂಟ್ವಾಳದ ಪಾಲಿಟೆಕ್ನಿಕ್ ಐ ಟಿ ಕಾಲೇಜು ಗಳಲ್ಲಿ ಸೇವೆ ಸಲ್ಲಿಸಿರುವ ಅನುಭವಿ ಭೌತಶಾಸ್ತ್ರ ಉಪನ್ಯಾಸಕಿ ಗೌತಮಿ ಶರಣ್ ಪಿ ಆರ್ ಇವರನ್ನು 2026 ಶೈಕ್ಷಣಿಕ ವರ್ಷದಲ್ಲಿ ಮನ್ ಶರ್ ಪದವಿ ಪೂರ್ವ ಕಾಲೇಜು ಇದರ *ಪ್ರಾಂಶುಪಾಲರಾಗಿ ಪದೋನ್ನತಿಯನ್ನು ನೀಡಲಾಯಿತು.

ಇವರು ಬಂಟ್ವಾಳ ತಾಲೂಕು ಕಾವಳಕಟ್ಟೆ ಎನ್‌.ಸಿ.ರೋಡ್ ನಿವಾಸಿ, ಉದ್ಯಮಿ ಜಯಪ್ರಸನ್ನ ನಿಡ್ವಾಲ್ ರವರ ಧರ್ಮಪತ್ನಿ, ಬಂಟ್ವಾಳ ತಾಲೂಕು ವಗ್ಗ, ಕವಳಮುಡೂರು ನಿವಾಸಿ ರವೀಂದ್ರ ಪೂಜಾರಿ ಹಾಗೂ ಶಶಿಕಲಾ ರವರ ಸುಪುತ್ರಿ. ಇವರನ್ನು ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮನ್ ಶರ್ ತಂಗಳ್, ರವರ ನಿರ್ದೇಶನದಂತೆ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ರವರು , ಸಂಸ್ಥೆಯ ಕಾರ್ಯನಿರ್ವಾಹನಾ ಅಧಿಕಾರಿ ರಶೀದ್ ಕುಪ್ಪೆಟ್ಟಿ, ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕರ ಸಮ್ಮುಖದಲ್ಲಿ ಅಧಿಕಾರ ಪತ್ರವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆಳ ಹಂತದಿಂದ ತಮ್ಮ ನಿಸ್ವಾರ್ಥ ಸೇವೆ, ಕಠಿಣ ಪ್ರಯತ್ನ ದಿಂದ ಹಂತ ಹಂತ ವಾಗಿ ಉನ್ನತ ಸ್ಥಾನ ವನ್ನು ಅಲಂಕರಿಸಿರುವ ನೂತನ ಪ್ರಾಂಶುಪಾಲರಿಗೆ ಸಹುದ್ಯೋಗಿಗಳು ಹಾಗು ವಿದ್ಯಾರ್ಥಿಗಳು ಶುಭವನ್ನು ಕೋರಿದರು

Related posts

ಲಾಯಿಲ ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಪಿಯು ಮರುಮೌಲ್ಯಮಾಪನ: ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಿತೀಷ ರಾಜ್ಯಕ್ಕೆ 10ನೇ ಸ್ಥಾನ

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಪುದುವೆಟ್ಟು ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಮುಂಡಾಜೆ: 36 ವರ್ಷಗಳ ಸಾರ್ಥಕ ಸೇವೆಯ ಬಳಿಕ ಶಿಕ್ಷಕಿ ಜಯಂತಿ ಟಿ. ವಯೋನಿವೃತ್ತಿ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya
error: Content is protected !!