27.4 C
ಪುತ್ತೂರು, ಬೆಳ್ತಂಗಡಿ
September 22, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸಂತ ತೆರೇಸಾ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ : ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರೌಢ ಶಾಲಾ ಮಂತ್ರಿ ಮಂಡಳದ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಮುಖ್ಯ ಅತಿಥಿಗಳಾದ ಶಾಲೆಯ ಮುಖ್ಯ ಶಿಕ್ಷಕಿ ಭ| ಮೋಲಿ ಡಿಕುನ್ಹ, ಮ್ಯಾನೇಜರ್ ಭಗಿನಿ ತೆರೇಸಿಯ ಶೇರಾ ಶಿಕ್ಷಕರು, ಕಥೋಲಿಕ್ ಕೊಆಪರೇಟಿವ್ ಸೊಸೈಟಿಯ ನಿರ್ದೇಶಕ ವಿನ್ಸೆಂಟ್ ಪಿಂಟೋ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಆಲ್ವಿನ್ ಜೋನ್ ಭಾಗವಹಿಸಿದರು.


ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉಪ ಪ್ರಾಂಶುಪಾಲರಾದ ಭಗಿನಿ ಸಹಾಯ ಮೇರಿ ಸ್ವಾಗತಿಸಿದರು . ಬಳಿಕ ಶಾಲಾ ನಾಯಕ ಹತ್ತನೇ ತರಗತಿಯ ವಂಶಿಕ್ ಹೆಚ್ ಬಿ, ಉಪನಾಯಕಿ ಒಂಬತನೇ ತರಗತಿಯ ಶರಲ್ ಪೌಲ್ ಹಾಗೂ ವಿವಿಧ ಮಂತ್ರಿ ಸ್ಥಾನಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿ ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.

ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಅತಿಥಿಗಳು ಮಾತನಾಡಿ, ಶಾಲಾ ಮಂತ್ರಿ ಮಂಡಳವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಶಾಲೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ನೂತನ ಮಂತ್ರಿ ಮಂಡಳದ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ ವಿಜ್ಞಾನ ವಿಭಾಗದ ಉಪನ್ಯಾಸಕಿ ಹಂಸಶ್ರೀ ವಂದನಾರ್ಪಣೆಗೈದರು.

Related posts

ಖೇಲೋ ಇಂಡಿಯಾ ವೇಟ್  ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ: ನಿಡ್ಲೆಯ ಪ್ರತ್ಯುಶ್ ರವರಿಗೆ ಕಂಚಿನ ಪದಕ

Suddi Udaya

ಆ.28: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿಯ ಸನ್ನಿಧಿಗೆ ಆಗಮಿಸುತ್ತಿರುವ ಧರ್ಮಸ್ಥಳದ ಶ್ರದ್ಧಾ ಅಮಿತ್

Suddi Udaya

ಕಡಿರುದ್ಯಾವರ ನಿವಾಸಿ ಶಶಿಧರ ಪರಾಂಜಪೆ ನಿಧನ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬಳಂಜ ಸಂಘದಿಂದ ಶ್ರೀ ರಾಮತಾರಕ ಮಂತ್ರ

Suddi Udaya

ಶ್ರೀ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳ ಸಭೆ

Suddi Udaya

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜು ಶಿಕ್ಷಕ ರಕ್ಷಕ ಸಂಘದ ಸಭೆ

Suddi Udaya
error: Content is protected !!