27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ : ರಸ್ತೆಗಳ ಬದಿಯಲ್ಲಿರುವ ಚರಂಡಿಗಳ ಹೂಳೆತ್ತುವಂತೆ ಮತ್ತು ಗಿಡ ಗಂಟಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರಿಂದ ಗ್ರಾ.ಪಂ.ಗೆ ಮನವಿ


ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಬದಿಗಳಲ್ಲಿ ಈಗಾಗಲೇ ಗಿಡಗಂಟಿಗಳು ಬೆಳೆದಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು ಮತ್ತು ರಸ್ತೆ ಬದಿ ಇರುವ ಚರಂಡಿಗಳಲ್ಲಿ ಹೂಳುಗಳು ತುಂಬಿದ್ದು ಇದರಿಂದ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹರಿಯುತ್ತಿದ್ದು ಪ್ರತಿ ವರುಷದಂತೆ ಈ ಬಾರಿಯೂ ಈ ಎರಡು ಕೆಲಸವನ್ನು ತುರ್ತಾಗಿ ಮಾಡಬೇಕೆಂದು ಸಾರ್ವಜನಿಕರ ಪರವಾಗಿ ಇಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ್ ಬಿ.ಎಲ್ , ರುಕ್ಮಯ ಕನ್ನಾಜೆ, ಮಾಜಿ ಉಪಾಧ್ಯಕ್ಷ ಗಿರೀಶ್ ಡೂಂಗ್ರೆ, ಗಣೇಶ್. ಆರ್, ನಿಕಟ ಪೂರ್ವ ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ್ ಕುಮಾರ್, ಹರಿಕೃಷ್ಣ ಪುತ್ರಬೈಲು,ಸಿಎ ಬ್ಯಾಂಕ್ ನಿರ್ದೇಶಕರಾದ ರಮೇಶ್ ನಲಿಕೆ, ಪ್ರಶಾಂತ್ ರಾಮಗಿರಿ, ಮಂಜು ಕನ್ನಾಜೆ, ಉಪಸ್ಥಿತರಿದ್ದರು.

Related posts

ಮಂಜು ಶ್ರೀ ಸೀನಿಯ‌ರ್ ಚೇಂಬರ್‌ ಬೆಳ್ತಂಗಡಿ ಘಟಕ: ಅಧ್ಯಕ್ಷರಾಗಿ ಜಾನ್ ಅರ್ವಿನ್ ಡಿ’ಸೋಜ, ಕಾರ್ಯದರ್ಶಿಯಾಗಿ ಶರತ್

Suddi Udaya

ಮಿತ್ತಬಾಗಿಲು: ಹಿರಿಯ ದೈವನರ್ತಕ ಅಣ್ಣು ನಲಿಕೆ ನಿಧನ

Suddi Udaya

ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ: ಬದನಾಜೆ ಸ.ಉ. ಪ್ರಾ.ಶಾಲಾ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾರಾವಿ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿಗೆ ಶೇ.94.11 ಫಲಿತಾಂಶ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ದೇವರಾಜ್ ಕುಟುಂಬ ಸಮೇತ ಭೇಟಿ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಉಜಿರೆಯಲ್ಲಿ ಕ್ಯಾಂಪಸ್ ನೇಮಕಾತಿ ಚಾಲನೆ

Suddi Udaya
error: Content is protected !!