September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ2 ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಯಕ್ಷಧ್ರುವ- ಯಕ್ಷ ಶಿಕ್ಷಣ ತರಗತಿಯ ಉದ್ಘಾಟನೆ

ಧರ್ಮಸ್ಥಳ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, 2026-27ನೇ ಶೈಕ್ಷಣಿಕ ವರ್ಷದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ )ಮಂಗಳೂರು “ಯಕ್ಷಧ್ರುವ- ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ” ಜೂ.23 ರಂದು ಶಾಲೆಯ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಶುಭ ಆರಂಭಗೊಂಡಿತು .

ಕಾರ್ಯಕ್ರಮವು ಶಾಲಾ ಎ ಸ್‌.ಡಿ.ಎಂ.ಸಿ.ಯ ಅಧ್ಯಕ್ಷ ಕೆ ನಂದ, ಯಕ್ಷದ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಶಿತಿಕಂಠ ಭಟ್, ಪಟ್ಲ ಪೌಂಡೇಶನ್ ಟ್ರಸ್ಟಿ ಶ್ರೀ ಭುಜಬಲಿ ಧರ್ಮಸ್ಥಳ, ಯಕ್ಷ ತರಗತಿ ಶಿಕ್ಷಕ ಬೆಳ್ತಂಗಡಿ ತಾಲೂಕು ಅರುಣ್ ಕುಮಾರ್ ಧರ್ಮಸ್ಥಳ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಹೇಮಲತಾ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಉಪಸ್ಥಿತಿಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಯನ್ನು ಪಟ್ಲ ಫೌಂಡೇಶನ್ ಟ್ರಸ್ಟಿ ಭುಜಬಲಿ, ಉದ್ಘಾಟರಾಗಿ ಸುರೇಶ್ ಶೆಟ್ಟಿ ಅಧ್ಯಕ್ಷರು ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ ಪಟ್ಲ ಫೌಂಡೇಶನ್ ನ ನಡೆಸುತ್ತಿರುವ ಸಮಾಜಮುಖಿ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಶುಭವನ್ನು ಹಾರೈಸಿದರು. ಪಟ್ಲ ಫೌಂಡೇಶನ್ ತಾಲೂಕು ಘಟಕ ಕಾರ್ಯದರ್ಶಿ ಶಿತಿ ಕಂಠ ಭಟ್ ಇವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಯಕ್ಷದ್ರುವ ಯಕ್ಷ ತರಗತಿಯ ಶಿಕ್ಷಕ ಅರುಣ್ ಇವರಿಗೆ ವೀಳ್ಯವನ್ನು ವಿದ್ಯಾರ್ಥಿಗಳಿಂದ ಹಸ್ತಾಂತರಿಸಲಾಯಿತು.

ಹಾಗೆಯೇ ಯಕ್ಷಗಾನದ ಪುಸ್ತಕವನ್ನು ಪಟ್ಲ ಫೌಂಡೇಶನ್ ಟ್ರಸ್ಟಿ ಭುಜಬಲಿ ಇವರ ಮೂಲಕ ಯಕ್ಷ ತರಗತಿ ಶಿಕ್ಷಕರಿಗೆ ಹಸ್ತಾಂತರ ಮಾಡಲಾಯಿತು. ಎಸ್ ಡಿ ಎಂ ಸಿ ಸದಸ್ಯರಾದ ರೂಪೇಶ್ . ಕೆ,ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಧನ್ಯವಾದವನ್ನು ಸಹಶಿಕ್ಷಕಿ ಶ್ರೀಮತಿ ವಿಜಯ , ಅತಿಥಿ ಶಿಕ್ಷಕಿ ಶ್ರೀಮತಿ ಜಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬೆಳಾಲು ಶ್ರೀ ಧ.ಮಂ.ಅನುದಾನಿತ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಕುಡ್ಲ ನನ್ನ ಹೃದಯದಲ್ಲಿದೆ: ಮುಲ್ಲೈ ಮುಹಿಲನ್

Suddi Udaya

ಉಜಿರೆ ಅನುಗ್ರಹದಲ್ಲಿ ನವೀಕೃತಗೊಂಡ ಪೂರ್ವ ಪ್ರಾಥಮಿಕ ತರಗತಿ ಹಾಗೂ ಒಳಾಂಗಣ ಆಟದ ಮನೆಯ ಉದ್ಘಾಟನೆ

Suddi Udaya

ಎಸ್‌ಡಿಎಂ ಕಾಲೇಜಿನ ಕಲಾ ವಿಭಾಗದ ನೂತನ ಡೀನ್ ಆಗಿ ಡಾ. ಬೋಜಮ್ಮ ಕೆ. ಎನ್. ನೇಮಕ

Suddi Udaya

ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಮತದಾನ

Suddi Udaya

ಬ್ಯೂಟಿಪಾರ್ಲರ್ ಎಸೋಸಿಯೇಶನ್ ವತಿಯಿಂದ ಮಹಿಳಾ ದಿನಾಚರಣೆ

Suddi Udaya
error: Content is protected !!