27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಧಿಕೃತ ಪಡಿತರ ಚೀಟಿ ನವೀಕರಣ ಕೇಂದ್ರ, ಬಸ್ ಪಾಸ್ ವಿತರಣಾ ಕೇಂದ್ರವಾದ ಕರ್ನಾಟಕ ಒನ್ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣದ ಪಿಂಟೋ ಕಾಂಪ್ಲೆಕ್ಸ್ನಲ್ಲಿ ಕಾರ್ಯಚರಿಸುತ್ತಿದ್ದ ಕರ್ನಾಟಕ ಒನ್ ಸ್ಥಳಾಂತರಗೊಂಡು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ಜೂ.24ರಂದು ಶುಭಾರಂಭಗೊಂಡಿತು.

ತಿಂಗಳಾಡಿಯ ಹಾಜಿ ಉಮ್ಮರ್ ಮುಸ್ಲಿಯರ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರಿಗೆ ಸ್ಪಷ್ಟ ಮಾಹಿತಿ ನೀಡಿ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆ ಉನ್ನತವಾಗಿ ಬೆಳೆಯಲಿ. ತತ್ವರಿತ ಸೇವೆಗಳ ಮೂಲಕ ಸರಕಾರದ ನಾನಾ ಯೋಜನೆಗಳನ್ನು ಜನರಿಗೆ ತಲುಪಿಸಿ ಪಾರದರ್ಶಕ ವಾಹಿವಾಟು ನಡೆಯಲಿ ಎಂದು ಶುಭ ಹಾರೈಸಿದರು.

ಬೆಳ್ತಗಂಡಿ ಡಿಕೆಆರ್‌ಡಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಫಾ.ಬಿನೊಯ್ ಎ.ಜೆ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಾಮ್, ಮುಖ್ಯಾಧಿಕಾರಿ ಕೆ.ರಾಜೇಶ್, ಆಹಾರ ನಿರೀಕ್ಷಕ ವಿಶ್ವ ಕೆ., ಸಬ್ ರಿಜಿಸ್ಟರ್ ಆಫೀಸರ್ ನಾಗರಾಜ್, ಕರ್ನಾಟಕ ಒನ್ ಜಿಲ್ಲಾ ಸಂಯೋಜಕ ಶಶಿಧರ್ ಟಿ., ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ ಬಿ., ಬೆಳ್ತಂಗಡಿ ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಟ್ಟಡ ಮಾಲಕ, ಗುರುವಾಯನಕೆರೆ ವಿಕಾಸ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ಬೆಳ್ತಂಗಡಿ ಸಿವಿಲ್ ಇಂಜಿನಿರ‍್ಸ್ ಆಫ್ ಕನ್ಸಲ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ., ಬೆಳ್ತಂಗಡಿ ಜಮೀಯತುಲ್ ಫಲಾಹ್ ಅಧ್ಯಕ್ಷ ಖಾಲಿದ್ ಪುಲಾಭೆ, ದೂಮ್ ಧಮಾಕ ಅಬ್ದುಲ್ ರಝಾಕ್ ಹಾಗೂ ಜಿ.ಕೆ.ಸೂಪರ್ ಮಾರ್ಕೆಟ್ ಶರೀಫ್ ಜಿ.ಕೆ. ಉಪಸ್ಥಿತರಿದ್ದರು.

ಪಟ್ಟಣದ ಪಿಂಟೋ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿದ್ದ ನಮ್ಮ ಕರ್ನಾಟಕ ಒನ್ ಕಚೇರಿ ಇದೀಗ ಸ್ಥಳಂತಾರಗೊಂಡು ಶುಭಾರಂಭಗೊಂಡಿದೆ. ನಮಗೆ ಬೆಳ್ತಂಗಡಿಯಲ್ಲಿ ಯಾವುದೇ ಶಾಖೆಗಳು ಇರುವುದಿಲ್ಲ. ಕರ್ನಾಟಕ ಒನ್ ಅಧಿಕೃತ ಪಡಿತರ ಚೀಟಿ ನವಿಕರಣ ಕೇಂದ್ರ ಮತ್ತು ಬಸ್ ಪಾಸ್ ವಿತರಣ ಕೇಂದ್ರವಾಗಿದ್ದು, ಜನರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಉದ್ದೇಶವಾಗಿದೆ. -ಅಶ್ರಫ್ ಮಾಲಕರು ಕರ್ನಾಟಕ ಒನ್

Related posts

ಪುಂಜಾಲಕಟ್ಟೆ ಕೆ.ಪಿ.ಎಸ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಶಿರ್ಲಾಲು ಶ್ರಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ

Suddi Udaya

ಬಿಸಿಲ ಝಳಕ್ಕೆ ವರುಣ ಕೃಪೆ, ಬೆಳ್ತಂಗಡಿ ತಾಲೂಕಿನ ನಾನಾ ಭಾಗದಲ್ಲಿ ಮಳೆ- ಜನತೆ ಕೂಲ್ ಕೂಲ್

Suddi Udaya

ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೊಕ್ರಾಡಿ ಸ.ಪ್ರೌ. ಶಾಲಾ ಶಿಕ್ಷಕಿ, ಅಕ್ಕಮ್ಮ ರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya
error: Content is protected !!