27.6 C
ಪುತ್ತೂರು, ಬೆಳ್ತಂಗಡಿ
September 24, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಗೋಪಾಲ್ ರವರಿಗೆ ಬೀಳ್ಕೊಡುಗೆ ಸಮಾರಂಭ

ನಿಡ್ಲೆ: ಸ.ಉ.ಹಿ.ಪ್ರಾ. ಶಾಲೆ ಹಾಗೂ ಜ್ಯೋತಿ ಹಳೆ ವಿದ್ಯಾರ್ಥಿ ಸಂಘ ಬರೆಂಗಾಯ ಇವರ ಸಹಭಾಗಿತ್ವದಲ್ಲಿ ಬರೆಂಗಾಯ ಶಾಲೆಯಲ್ಲಿ ಸುಮಾರು 20ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕರ್ತವ್ಯವನ್ನು ನಿರ್ವಹಿಸಿ ಹಲವಾರು ಪ್ರಶಸ್ತಿಗಳನ್ನು ಶಾಲೆಗೆ ಗಳಿಸಿಕೊಟ್ಟು ಪ್ರಸ್ತುತ ಇಲಾಖೆಯ ಆದೇಶದಂತೆ ಹಿರಿಯ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಉ.ಹಿ.ಪ್ರಾ. ಶಾಲೆ ಬದನಾಜೆ ಇಲ್ಲಿಗೆ ವರ್ಗಾವಣೆಗೊಂಡ ಹಿರಿಯ ಮುಖ್ಯ ಶಿಕ್ಷಕರಾದ ಗೋಪಾಲ್ ರವರಿಗೆ ಬೀಳ್ಕೊಡುಗೆ ಸಮಾರಂಭವು ಜೂ.25ರಂದು ಬರೆಂಗಾಯ ಶಾಲೆಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಣತಜ್ಞ ಪ್ರವೀಣ್ ಹೆಬ್ಬಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾ. ಪಂ. ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣತಜ್ಞ ಪ್ರವೀಣ್ ಹೆಬ್ಬಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಅಠವಳೆ, ನಿಸರ್ಗ ಯುವಜನೇತರ ಮಂಡಲ ಇದರ ಗೌರವಾಧ್ಯಕ್ಷ ನವೀನ್ ಗಾಂತ್ರಡ. ಅಧ್ಯಕ್ಷ ಪುನೀತ್, ಬರೆಂಗಾಯ ಹಾ. ಉ. ಸಹಕಾರಿ ಸಂಘದ ಅಧ್ಯಕ್ಷ ಸುಂದರ್ ಕಜೆ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಡೀಕಯ್ಯ ಕಾಟ್ಲ, ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸುಬ್ಬರತ್ನ, ಕೊಡುಗೈದಾನಿ ಹೊನ್ನಪ್ಪ ಗೌಡ ಮೇರ್ಲ ಉಪಸ್ಥಿತರಿದ್ದರು.

ವರ್ಗಾವಣೆಗೊಂಡ ಹಿರಿಯ ಮುಖ್ಯ ಶಿಕ್ಷಕ ಗೋಪಾಲ್ ರವರ ಬಗ್ಗೆ ಶಿಕ್ಷಕ ಸತೀಶ್ ಆಚಾರ್, ಪ್ರವೀಣ್ ಹೆಬ್ಬಾರ್, ಶಾಲಾ ವಿದ್ಯಾರ್ಥಿನಿಗಳಾದ ಕೃತಿ, ಸಾನ್ವಿ, ಚೇತನಾ, ಸುಚಿತ್ರ, ಶ್ರಾವಣಿ, ಸುಂದರ್ ಕಜೆ, ಶಕುಂತಳಾ ಜೆ. ಶೆಟ್ಟಿ, ದೀಪಾ, ಶಿಕ್ಷಕ ದಯಾನಂದ, ಉಪ ಪ್ರಾಂಶುಪಾಲ ಚಂದ್ರಶೇಖರ್ ಕಜೆ, ಶಿಕ್ಷಕ ಸತೀಶ್ ಮಾಚಾರ್, ಅಂಗನವಾಡಿ ನಿವೃತ್ತ ಶಿಕ್ಷಕಿ ಕುಸುಮ, ನವೀನ್ ಗಾಂತ್ರಡ ಮಾತನಾಡಿದರು. ಶಿಕ್ಷಕಿ ಗಂಗಮ್ಮ ಸನ್ಮಾನ ಪತ್ರ ವಾಚಿಸಿದರು. ಗೋಪಾಲ್ ರವರನ್ನು ಶಾಲು ಹೊದೆಸಿ ಮೈಸೂರು ಪೇಟ ತೊಡಿಸಿ ಉಂಗುರ ಫಲಪುಷ್ಪ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ಗೋಪಾಲ್ ರವರು ಶಾಲೆಗೆ ರೂ. 20ಸಾವಿರ ಮೌಲ್ಯದ ಯುಪಿಎಸ್ ನೀಡಿದರು.

ಗೋಪಾಲ್ ರವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ರುಕ್ಮಯ್ಯ ಪೂಜಾರಿಯವರು ಗೋಪಾಲ್ ರವರು ಶಾಲೆಗೆ ನೀಡಿದ ಸೇವೆ ಬಗ್ಗೆ ಮಾತನಾಡಿದರು.ಮುಖ್ಯ ಶಿಕ್ಷಕಿ ರೋಸಾ ವಿ. ಟಿ ಸ್ವಾಗತಿಸಿದರು. ಶಿಕ್ಷಕ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮರಿಯಪ್ಪ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ನಿಸರ್ಗ ಯುವ ಜನೇತರ ಮಂಡಲದ ಪದಾಧಿಕಾರಿಗಳು , ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಪದಾಧಿಕಾರಿಗಳು, ಬರೆಂಗಾಯ ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಪ್ರಗತಿಬಂಧು ಒಕ್ಕೂಟದ ಪದಾಧಿಕಾರಿಗಳು, ಆಟೋ ಚಾಲಕರು ಹಾಗೂ ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು,ಶಿಕ್ಷಕ ವೃಂದ, ಪೋಷಕವೃಂದ, ವಿದ್ಯಾರ್ಥಿವೃಂದ,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪುಟಾಣಿಗಳು, ವನದುರ್ಗಾ ಕ್ರೀಡಾ ಸಮಿತಿಯ ಪದಾಧಿಕಾರಿಗಳು, ಗೋಪಾಲ್ ರವರ ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ : ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ ಎಸ್.ಡಿ ಎಂ ಮಹಿಳಾ ಐ.ಟಿ.ಐ ಕಾಲೇಜಿನ ಓರಿಯಂಟೇಷನ್ ಹಾಗೂ ಕಾನ್ವಕೇಷನ್ ಕಾರ್ಯಕ್ರಮ

Suddi Udaya

ಜು.1ರಿಂದ ಗುರುವಾಯನಕೆರೆ ಸೆಲೆಕ್ಷನ್ ವೇರ್ ನಲ್ಲಿ ಮಾನ್ಸೂನ್ ಬಂಪರ್ ಆಫರ್

Suddi Udaya

ನಿಡ್ಲೆ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಬೆಳ್ತಂಗಡಿ: ವಿದ್ಯುತ್ ಗುತ್ತಿಗೆದಾರ ಬೆನೆಡಿಕ್ಟ್ ವೇಗಸ್ ನಿಧನ

Suddi Udaya
error: Content is protected !!