22.7 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಜಿರೆ ವಲಯ ವತಿಯಿಂದ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ

ಉಜಿರೆ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಜಿರೆ ವಲಯ ವತಿಯಿಂದ ಡಾ| ಅಶ್ವಿನ್ ಐ ಕೇರ್ ಸೆಂಟರ್ ಪುತ್ತೂರು ಹಾಗೂ ‘ವಿಕಾಸ್ ಒಪ್ಟಿಕಲ್ಸ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವು ಜೂ.28ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಕೆ.ಎಸ್.ಟಿ.ಎ ಉಜಿರೆ ವಲಯ ಅಧ್ಯಕ್ಷೆ ಝೀನತ್ ಉಜಿರೆ ವಹಿಸಿದ್ದರು. ಗುರುವಾಯನಕೆರೆ ಎಕ್ಸೆಲ್ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಸ್.ಎ ಮೆಡಿಕಲ್ ಮಾಲಕ ಪ್ರಕಾಶ್ ಫೆರ್ನಾಂಡಿಸ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ರವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಫಾತಿಮಾ ರಾಝ್ಮೀನಾ ಮತ್ತು ರಕ್ಷಾ ಅವರನ್ನು ಗೌರವಿಸಿ, ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಜಿರೆ ರಮ್ಯಾ ಫ್ಯಾನ್ಸಿ ಮಾಲಕ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್, ಡಾ| ಅಶ್ವಿನ್ ಸಾಗರ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಉಜಿರೆ ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್, ಎಸ್.ಎ ಮೆಡಿಕಲ್ ಮಾಲಕ ಪ್ರಕಾಶ್, ಉಜಿರೆ ಮಹಾವೀರ ಟೆಕ್ಸ್ ಟೈಲ್ಸ್ ಮಾಲಕಿ ಪುನೀತ, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಉಪಾಧ್ಯಕ್ಷೆ ವೇದಾವತಿ ಜನಾರ್ಧನ್, ಸದಸ್ಯ ನಾಗೇಶ್ ಕುಮಾರ್, ಕೆ.ಎಸ್.ಟಿ.ಎ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಲೆನ್ಸಿ ಡಿಸೋಜಾ, ಕೆ.ಎಸ್.ಟಿ.ಎ ಬೆಳ್ತಂಗಡಿ ವಲಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಗ್ರಾಮಸಭೆ

Suddi Udaya

ಧರ್ಮಸ್ಥಳ: ಮೃತ ದೇಹಗಳನ್ನು ಹೂತು ಹಾಕಿದ ದೂರು ಪ್ರಕರಣ ಕೇಸ್ ಫೈಲ್ ಪಡೆಯಲು ಧರ್ಮಸ್ಥಳ ಠಾಣೆಗೆ ಬಂದ ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ಗೌಡ, ಉಪಾಧ್ಯಕ್ಷರಾಗಿ ಗೌರಿ ಅವಿರೋಧ ಆಯ್ಕೆ

Suddi Udaya

ಕಾಶಿಪಟ್ಣ: ಬೈಕ್ ಗಳ ನಡುವೆ ಅಪಘಾತ: ಸವಾರರಿಗೆ ಗಾಯ

Suddi Udaya

ಪಡಂಗಡಿ: ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya

ಉಜಿರೆ : ಶ್ರೀ.ಧ.ಮಂ ಆಂ.ಮಾ. ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

Suddi Udaya
error: Content is protected !!