November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪ್ರತಿಭಾ ಕಾರಂಜಿ ಸ್ಪರ್ಧೆ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಬೆಳ್ತಂಗಡಿ: ಬೆಳ್ತಂಗಡಿಯ ಮಂಜೊಟ್ಟಿಯ ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 2026–27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ವಿದ್ಯಾರ್ಥಿಗಳು ತಮ್ಮ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಒಟ್ಟು 11 ಬಹುಮಾನಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರಲ್ಲಿ 6 ಪ್ರಥಮ, 3 ದ್ವಿತೀಯ ಹಾಗೂ 2 ತೃತೀಯ ಬಹುಮಾನಗಳು ಸೇರಿವೆ.

ಜಾನಪದ ನೃತ್ಯ: ಸಂಜನಾ, ತೇಜಸ್, ಶ್ರೀಶಾ, ಭೂಮಿಕಾ ವರ್ಷಿಣಿ ಹಾಗೂ ಋದ್ಧಿಶ್ರೀ (ಪ್ರಥಮ), ಭಾಷಣ (Pick and Speech): ಸಂಜನಾ (ಪ್ರಥಮ), ಚಿತ್ರಕಲೆ: ಬೃಂದಾ(ಪ್ರಥಮ), ಧಾರ್ಮಿಕ ಪಠಣ (ಸಂಸ್ಕೃತ): ಇಂಚರಾ(ಪ್ರಥಮ), ಭರತನಾಟ್ಯ: ನಿದೀಶಾ(ಪ್ರಥಮ), ಖವ್ವಾಲಿ: ಶ್ರೀವಿನಿತ್, ನಿದೀಶ್, ಶ್ರೇಯಸ್, ಶಿರಾಕ್ಷಾ, ರಿತಿಕಾ ಶೆಣೈ ಹಾಗೂ ರಿಶಿತಾ (ಪ್ರಥಮ), ಗಜಲ್: ಪ್ರಾಪ್ತಿ ವಿ. ಶೆಟ್ಟಿ(ದ್ವಿತೀಯ), ಹಿಂದಿ ಭಾಷಣ: ರಿತಿಕಾ ಶೆಣೈ (ದ್ವಿತೀಯ), ಜಾನಪದ ಗೀತೆ: ಶ್ರೀರಕ್ಷಾ(ದ್ವಿತೀಯ), ಆಂಗ್ಲ ಭಾಷಣ: ಸ್ಥವ್ಯ ಆರ್. ಶೆಟ್ಟಿ (ತೃತೀಯ), ಚರ್ಚಾ ಸ್ಪರ್ಧೆ: ದೀಪ್ತಾ (ತೃತೀಯ) ಬಹುಮಾನಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ ಹೇಮಲತಾ ಎಂ. ಆರ್. ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಹೆಚ್ಚಿನ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ.

Related posts

ಕೊಕ್ಕಡ: 4ನೇ ವರ್ಷದ ಊದು ಪೂಜೆ ಹಾಗೂ ಪಿಲಿ ನಲಿಕೆ-ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಒಂಟಿಸಲಗ ಪ್ರತ್ಯಕ್ಷ: ವಾಹನ ಸವಾರರ ಪರದಾಟ

Suddi Udaya

ವೇಣೂರು: ಬಜಿರೆ ನಿವಾಸಿ ಶ್ರೀಮತಿ ವಸಂತಿ ನಿಧನ

Suddi Udaya

ಬದ್ಯಾರಿನಲ್ಲಿ ನೂತನವಾಗಿ ನಿರ್ಮಿಸಿದ ದಿ| ಬಿ. ಲಕ್ಕಣ್ಣ ಶೆಟ್ಟಿ ಸ್ಮಾರಕ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಮತ್ತು ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ

Suddi Udaya

ಜ.10-11: ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಾಗಬ್ರಹ್ಮಮಂಡಲೋತ್ಸವ

Suddi Udaya
error: Content is protected !!