22.7 C
ಪುತ್ತೂರು, ಬೆಳ್ತಂಗಡಿ
September 28, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆರೋಗ್ಯ ಇಲಾಖೆ ವತಿಯಿಂದ ನಡೆದ ಪಲ್ಸ್ ಪೊಲೀಯೋ ಅಭಿಯಾನಕ್ಕೆ ಮನ್ ಷ್ಯರ್ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳ ಸಾಥ್

ಬೆಳ್ತಂಗಡಿ: ಕರ್ನಾಟಕ ಸರಕಾರದ ಆರೋಗ್ಯ ಇಲಾಖೆ ವತಿಯಿಂದ ಜೂನ್ 28ರಂದು ನಡೆದ ಪಲ್ಸ್ ಪೊಲೀಯೋ ಅಭಿಯಾನಕ್ಕೆ ಬೆಳ್ತಂಗಡಿ ತಾಲೂಕು ವೈದ್ಯಧಿಕಾರಿ ಡಾ., ಸಂಜತ್ ರವರ ಮಾರ್ಗದರ್ಶನದಲ್ಲಿ ತಾಲೂಕಿನ ವಿವಿಧೆಡೆ ಸುಮಾರು 50 ಕ್ಕೂ ಅಧಿಕ ಬೂತ್ ಗಳಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಮನ್ ಷ್ಯರ್ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದರು.

ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮನ್ ಷ್ಯರ್ ತಂಗಳ್ ರವರು ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ ಜೀವನದಲ್ಲೇ ಭಾಗಿಯಾಗುದರಿಂದ ಭವಿಷ್ಯ ದಲ್ಲಿ ಸಮಾಜದ ಬಗ್ಗೆ ಕಾಳಜಿ ಮೂಡಲು ಸಹಕಾರಿ ಯಾಗುವುದು ಎಂಬುದಾಗಿ ವಿದ್ಯಾರ್ಥಿಗಳ ಸೇವೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಂಸ್ಥೆಯ ಪ್ರಾಂಶುಪಾಲ ಹೈದರ್ ಮರ್ಧಾಳ ರವರು ಸೂಕ್ತ ರೀತಿಯಲ್ಲಿ ಪೋಲಿಯೊ ಅಭಿಯಾನದ ಬಗ್ಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ವಿವಿಧ ಬೂತ್ ಗಳಿಗೆ ನಿಯೋಜಿಸಿದರು , ಮುಂದಿನ ಎರಡು ದಿನದಲ್ಲಿ ನಡೆಯುವ ಮನೆ ಭೇಟಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಸೇವೆ ಲಭ್ಯ ಎಂಬುದಾಗಿ ಪೋಲಿಯೊ ಅಭಿಯಾನದ ಕನ್ವಿನರ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ ರವರು ಪ್ರಕಟಣೆಯಲ್ಲಿ ತಿಳಿಸಿದರು.

Related posts

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಿ ಕಡಿರುದ್ಯಾವರ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಗ್ರಹ

Suddi Udaya

ವರಮಹಾಲಕ್ಷ್ಮೀ ಪ್ರಯುಕ್ತ ಸುನಿಲ್ ಸಿಲ್ಕ್ಸ್ ಸಾರೀಸ್‌ನಿಂದ ಲಕ್ಕಿಡಿಪ್ ಡ್ರಾ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ

Suddi Udaya

ಉಜಿರೆ ಅನುಗ್ರಹ ಪಿ.ಯು ಕಾಲೇಜಿಗೆ ನುಗ್ಗಿದ್ದ ಕಳ್ಳರು: ಸಿಸಿ ಕ್ಯಾಮೆರಾ, ಎನ್ ವಿಆರ್, ಹಾರ್ಡ್ ಡಿಸ್ಕ್ ಕಳ್ಳತನ

Suddi Udaya

ಕಾನರ್ಪ ಪುರುಷರ ಬಳಗದ ಪುರುಷರ ರಾಶಿ ಪೂಜೆ

Suddi Udaya

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ ವೈ ವಿಜಯೇಂದ್ರರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya
error: Content is protected !!