31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿರಾಜ್ಯ ಸುದ್ದಿವರದಿ

ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಆರಂಭ

ಮಂಗಳೂರು : ಭಾರತದ ಚುನಾವಣಾ ಆಯೋಗವು ರಾಜ್ಯದಲ್ಲಿ ಇಂದಿನಿಂದ 1 ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮಾಡಲಿದೆ. ಈಗಾಗಲೇ ಮ್ಯಾಪಿಂಗ್ ಮುಕ್ತಾಯವಾಗಿದ್ದು, ಚುನಾವಣಾಧಿಕಾರಿಗಳು, ಬಿಎಲ್‌ಓಗಳು ಮನೆ ಮನೆಗೆ ಭೇಟಿ ಕೊಡಲಿದ್ದಾರೆ.

ಕರ್ನಾಟಕದಲ್ಲಿ  91.61% ಮ್ಯಾಪಿಂಗ್ ಆಗಿದ್ದು, 5,54,32,314 ಮತದಾರರ ಪೈಕಿ 5,07,79,810 ಮತದಾರರ ಮ್ಯಾಪಿಂಗ್ ನಡೆದಿದೆ. 46,52,504 ಮತದಾರರು ಮ್ಯಾಪಿಂಗ್ ಆಗಬೇಕಿದೆ. ಈ 5.55 ಕೋಟಿ ಮತದಾರರ ಪೈಕಿ ಅಸಲಿ ಯಾರು? ನಕಲಿ ಯಾರು? ಎನ್ನುವುದನ್ನು ಪರಿಶೀಲಿಸಲಾಗುತ್ತದೆ.

ನಕಲಿ, ಅನರ್ಹ ಮತದಾರರನ್ನು ಜರಡಿ ಹಿಡಿದು ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಮತದಾರರು ಅರ್ಜಿಯನ್ನ ತುಂಬಿ ಅರ್ಜಿಗೆ ಸಹಿ ಮಾಡಿ ಕೆಲವು ದಾಖಲೆಗಳನ್ನು ಸಲ್ಲಿಕೆ ಮಾಡಬೇಕಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಮೃತಪಟ್ಟವರು, ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಿದ್ದಾರೆ.

ಬಿಎಲ್‌ಓಗಳು ಮನೆಗೆ ಭೇಟಿ ನೀಡಿ ಎಸ್‌ಐಆರ್ ಅರ್ಜಿ ನೀಡಲಿದ್ದಾರೆ. ಎಸ್‌ಐಆರ್ ಅರ್ಜಿಗೆ ಮಾಹಿತಿ ನೀಡಿ ಮತದಾರರು ಸಹಿ ಮಾಡಬೇಕು. ಎಸ್‌ಐಆರ್‌ನಲ್ಲಿ ಭಾಗಿಯಾಗಿ ಮಾಹಿತಿ ನೀಡಿದರೆ ಮಾತ್ರ ಮತದಾನದ ಹಕ್ಕು, ಇಲ್ಲದೇ ಹೋದರೆ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ಅಕ್ಟೋಬರ್ 7, 2026ಕ್ಕೆ 18 ತುಂಬುವ ಯುವ ಮತದಾರರು ಅರ್ಜಿ ಹಾಕಬಹುದಾಗಿದೆ. ರಾಜ್ಯ ಚುನಾವಣಾ ಆಯೋಗ, ಜಿಬಿಎ ಹಾಗೂ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

ಮತದಾರರು ಯಾವ ದಾಖಲೆ ಇಟ್ಟುಕೊಳ್ಳಬೇಕು?
1. ಕುಟುಂಬದವರ ಗುರುತಿನ ಚೀಟಿ
2. ವೋಟರ್ ಐಡಿ
3. ಆಧಾರ್ ಕಾರ್ಡ್
4. ವಿಳಾಸ ದೃಢಿಕರಣ ಪತ್ರ
5. ಪಾಸ್‌ಪೋರ್ಟ್ ಸೈಜ್ ಫೋಟೋ

Related posts

ತಣ್ಣೀರುಪಂತ ಗ್ರಾ.ಪಂ. ಡಾ.ಶಿವರಾಮ ಕಾರಂತ್‌ ಪ್ರಶಸ್ತಿಗೆ ಆಯ್ಕೆ: ಫೆ.10 ರಂದು “ಹೊಳಪು-2024 ಗ್ರಾಮ ಸರ್ಕಾರದ ದಿಬ್ಬಣ” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಸಂಸ್ಥೆಯ ಕಾರುಣ್ಯ ಸ್ಪರ್ಶ ಯೋಜನೆಯಡಿ ದೇಜಮ್ಮ ರವರಿಗೆ ಚಿಕಿತ್ಸಾ ನೆರವು

Suddi Udaya

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಜ.16-25: ಕಾಜೂರು ಮಖಾಂ ಉರೂಸ್: ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಭೆ

Suddi Udaya

ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಎಂ.ಎಸ್.

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ

Suddi Udaya
error: Content is protected !!