31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಅಡ್ಡ ಮತದಾನ ವಿವಾದ: ಬೇಲೂರು ಶಾಸಕ ಹೆಚ್. ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

ಬೆಳ್ತಂಗಡಿ: ರಾಜ್ಯ ವಿಧಾನ ಪರಿಷತ್ ಚುನವಾಣೆಯಲ್ಲಿ ಬಿಜೆಪಿ ಪಾಳದಲ್ಲಿ ನಡೆದ ಅಡ್ಡ ಮತದಾನ ತೀವ್ರ ಚರ್ಚೆಯಾಗುತ್ತಿದ್ದಿ, ಬಿಜೆಪಿಯ ಶಾಸಕರು ನಾನಲ್ಲ ನಾನಲ್ಲ ಎನ್ನುತ್ತಿರುವ ವೇಳೆ ಹಾಸನ ಜಿಲ್ಲೆಯ ಬೇಲೂರು ಶಾಸಕ ಹುಲ್ಲಹಳ್ಳಿ ಕೆ.ಸುರೇಶ್ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದರು.

ಧರ್ಮಸ್ಥಳಕ್ಕೆ  ಭೇಟಿ ನೀಡಿದ ಅವರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ನನ್ನ ಮೇಲೆ ಅಪಪ್ರಚಾರ ಮಾಡಿದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿ ತನ್ನ ನಂಬಿದ ಜನತೆ ಹಾಗೂ ಆರೋಪಕ್ಕೆ  ಸಲುವಾಗಿ ಕಾಣಿಕೆಯನ್ನು ಹುಂಡಿಗೆ ಹಾಕಿದರು. ಬಳಿಕ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.

ನಾನು ಪಕ್ಷ ದ್ರೋಹ ಮಾಡಿಲ್ಲ, ಬಿಜೆಪಿಯ ನಿಷ್ಟವಾಂತ ಪ್ರಾಮಾಣಿಕ ಕಾರ್ಯಕರ್ತ. ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ, ಪಕ್ಷದ ವರಿಷ್ಠರು ಸೂಚಿಸಿದ ವ್ಯಕ್ತಿಗೆ ಮತದಾನ ಮಾಡಿದೇನೆ ಎಂದು ಮಂಜುನಾಥ ಸ್ವಾಮಿ ಸನ್ನಿದಿಯಲ್ಲಿ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಬಂದಿರುವ ಆರೋಪಕ್ಕೆ ಮಂಜುನಾಥ ಸ್ವಾಮಿಯೇ ಹಾಗೂ ನನ್ನ ಕ್ಷೇತ್ರದ ಜನರೇ ಸಾಕ್ಷಿ. ಬಿಜೆಪಿ ಪಕ್ಷ ನನ್ನ ತಾಯಿ ಹಾಗಾಗಿ ನನ್ನ ಬೆಳವಣಿಗೆಯನ್ನು ಸಹಿಸಲಾರದೆ ಕೆಲವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಹೆಚ್ ಕೆ. ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಅಣ್ಣಪ್ಪ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ  ನಾನು ಮೋಸ ಮಾಡಿಲ್ಲ  ಅಪಪ್ರಚಾರ ಮಾಡಿದವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳಿ ತೆಂಗಿನಕಾಯಿ ಒಡೆದರು.”

259 ಅಧಿಕ ಮಂದಿ ಬೆಂಬಲಿಗರು 100 ಕ್ಕೂ ಮಿಕ್ಕಿ ಕಾರಿನಲ್ಲಿ ಕೇಸರಿ ಶಾಲು, ಬಿಜೆಪಿ ಪಕ್ಷದ ಬಾವುಟ ಹಿಡಿದುಕೊಂಡೆ ಧರ್ಮಸ್ಥಳಕ್ಕೆ ಆಗಮಿಸಿದರು.

ಪವಿತ್ರ ನೇತ್ರಾವತಿ ನದಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿ  ನಮಸ್ಕಾರಿಸಿ  ಬಳಿಕ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಕಾರ್ಯರ್ಕತರು ಪ್ರಾಮಾಣಿಕ ಶಾಸಕರು, ನಾವು ದ್ರೋಹ ಮಾಡಿಲ್ಲ, ಭಾರತ ಮಾತೆಗೆ,  ಜೈಕಾರ ಕೂಗಿದರು.

Related posts

ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಲ್ಲೊಂದು ಮೈಲಿಗಲ್ಲು!

Suddi Udaya

ಸವಣಾಲು: ಸಾಂತಪ್ಪ ಮಲೆಕುಡಿಯ ನಿಧನ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆ ದುರ್ಗಾ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ನವೀಕೃತಗೊಂಡು ಶುಭಾರಂಭ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಯುವ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಕೇಂದ್ರ ಬಜೆಟ್ 2026-2027:ಜಾಗತಿಕ ಸವಾಲಿನ ನಡುವೆಯೂ ಜನರ ಆಶೋತ್ತರ ಪ್ರತಿಬಿಂಬಿತವಾದ ಬಜೆಟ್: ಹರೀಶ್ ಪೂಂಜ

Suddi Udaya
error: Content is protected !!