28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಚೈತನ್ಯ ಕಲಾವಿದರು ಬೈಲೂರು ವತಿಯಿಂದ ದಯಾ ವಿಶೇಷ ಶಾಲೆಯ ಫಾ. ವಿನೋದ್ ಮಸ್ಕರೇನ್ಹಸ್ ರವರಿಗೆ ಸನ್ಮಾನ

ಬೆಳ್ತಂಗಡಿ: ಜಿಲ್ಲೆಯ ಖ್ಯಾತ ನಾಟಕ ಕಲಾವಿದ ಹಾಗೂ ನಿರೂಪಕರಾದ ಪ್ರಸನ್ನ ಶೆಟ್ಟಿ, ಬೈಲೂರು ರವರು 100ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಚೈತನ್ಯ ಕಲಾವಿದರು ಬೈಲೂರು ವತಿಯಿಂದ ದಯಾ ವಿಶೇಷ ಶಾಲೆಯ ನಿರ್ದೇಶಕರಾದ ವಂ.ಫಾ| ವಿನೋದ್ ಮಸ್ಕರೇನ್ಹಸ್ ರವರನ್ನು ದಯಾ ವಿಶೇಷ ಶಾಲೆಗೆ ಭೇಟಿ ನೀಡಿ, ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಫಾ. ವಿನೋದ್ ಮಸ್ಕರೇನ್ಹಸ್ ರವರ ಸಾಧನೆಯನ್ನು ಗುರುತಿಸಿ ಹಾಗೂ ಚೈತನ್ಯ ಕಲಾವಿದರು ಬೈಲೂರು ಅವರ ತಂಡವು ಈ ವರ್ಷ ರಾಘು ಮಾಸ್ಟ್ರು ನಾಟಕವು ಅತಿ ಕಡಿಮೆ ಸಮಯದಲ್ಲಿ ನೂರಕ್ಕಿಂತ ಹೆಚ್ಚು ವೇದಿಕೆಯನ್ನು ಯಶಸ್ವಿಯಾಗಿ ಪಡೆದುಕೊಂಡಿರುವ ಸಂತೋಷದ ಹಿನ್ನೆಲೆಯಲ್ಲಿ‌ ದಯಾ ವಿಶೇಷ ಶಾಲೆಯ ನಿರ್ದೇಶಕರಿಗೆ ಈ ಗೌರವವನ್ನು ಪ್ರಧಾನ ಮಾಡಲಾಗಿದೆ.ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಕಲಾವಿದರು, ಅಭಿಮಾನಿಗಳು, ದಯಾ ವಿಶೇಷ ಶಾಲೆಯ ಸಿಬ್ಬಂದಿಗಳು ಹಾಗೂ ವಿಶೇಷ ಚೇತನ ಮಕ್ಕಳು ಉಪಸ್ಥಿತರಿದ್ದು, ಪ್ರಸನ್ನ ಶೆಟ್ಟಿ ಅವರ ಮುಂದಿನ ಕಲಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

Related posts

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ.59 ಲಕ್ಷ ಲಾಭ, ಶೇ.15 ಡಿವಿಡೆಂಟ್ ಘೋಷಣೆ

Suddi Udaya

ರಾಜ್ಯದ 5,8 ಮತ್ತು 9ನೇ ತರಗತಿ “ಬೋರ್ಡ್​” ಪರೀಕ್ಷೆಗೆ “ಸುಪ್ರೀಂ ಕೋರ್ಟ್” ತಡೆಯಾಜ್ಞೆ

Suddi Udaya

ನಾವೂರು ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ ಜಿಲ್ಲಾ ಮಟ್ಟದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ :ಶಾಸಕ ಹರೀಶ್ ಪೂಂಜರವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕುಕ್ಕೇಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ನಾರಾವಿ ವರ್ಗಾವಣೆಗೊಂಡ ಪ್ರಾಂಶುಪಾಲರಿಗೆ ಬೀಳ್ಕೊಡುಗೆ

Suddi Udaya
error: Content is protected !!