
ಬೆಳ್ತಂಗಡಿ: ರಾಷ್ಟ್ರ ಮಟ್ಟದಲ್ಲಿ ನಡೆಯುವ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಕಠಿಣವಾಗುವುದು ಒಂದೆಡೆ. ಡೊನೇಷನ್ ಸೀಟ್ ಬಾನೆತ್ತರದಲ್ಲಿರುವಾಗ ಸಾಮಾನ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಗಗನ ಕುಸುಮವಾಗುತ್ತಿರುವುದು ಇನ್ನೊಂದೆಡೆ. ಇಂಥ ಸಮಯದಲ್ಲಿ ಪ್ರತಿಭಾವಂತರಾದರೂ ಅವಕಾಶ ಇಲ್ಲವೆಂದು ಪರಿತಪಿಸುತ್ತಿದ್ದ ಕೈಗೆಟುಕುವ ಶುಲ್ಕದಲ್ಲಿ ಉನ್ನತ ಗುಣ ಮಟ್ಟದ ಕೋಚಿಂಗ್ ನೀಡುತ್ತಾ ಮಧ್ಯಮ ವರ್ಗದ ಅದೆಷ್ಟೋ ವಿದ್ಯಾರ್ಥಿಗಳ ಕನಸಿಗೆ ನನಸಾಗುವ ಅವಕಾಶ ಕಲ್ಪಿಸಿದ ಹಿರಿಮೆ ಗುರುವಾಯನಕೆರೆಯ ಎಕ್ಸೆಲ್ ನೀಟ್ ಅಕಾಡೆಮಿಯದ್ದಾಗಿದೆ.
ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿ, ನೀಟ್ ಟ್ರೈನರ್ ಆಗಿ ಖ್ಯಾತರಾದ ಸುಮಂತ್ ಕುಮಾರ್ ಜೈನ್ ಬಿ ಅವರ ಸಮರ್ಥ ನಾಯಕತ್ವ ಇಲ್ಲಿದೆ. ದಕ್ಷಿಣ ಭಾರತದ ಸುಪ್ರಸಿದ್ಧ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ, ರಾಷ್ಟ್ರ- ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತಂದ ಪ್ರಾಧ್ಯಾಪಕ ಬಳಗದ ಮಾರ್ಗದರ್ಶನದಲ್ಲಿ ನೀಟ್ ಶಿಕ್ಷಣ ಪಡೆಯಲು ಇಲ್ಲಿ ಅವಕಾಶವಿದೆ. ತನ್ನ ಶೈಕ್ಷಣಿಕ ಸಾಧನೆಗಳಿಂದ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಎಕ್ಸೆಲ್ ಟೆಕ್ನೊ ಸ್ಕೂಲ್, ವೇಣೂರಿನಲ್ಲಿರುವ ಎಕ್ಸೆಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಎಕ್ಸೆಲ್ ನೀಟ್ ಅಕಾಡೆಮಿಯ ಸಹ ಸಂಸ್ಥೆಗಳಾಗಿವೆ.

ಪದವಿ ಪೂರ್ವ ಶಿಕ್ಷಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ , ಸ್ಟೇಟ್ ಟಾಪ್ 10 ರಲ್ಲಿ 58 ವಿದ್ಯಾರ್ಥಿಗಳಿಗೆ ಸ್ಥಾನ , ಜೆ ಇ ಇ ಪರೀಕ್ಷೆಯಲ್ಲಿ ಒಟ್ಟು 12 ವಿದ್ಯಾರ್ಥಿಗಳಿಗೆ ಐ ಐ ಟಿ ಗಳಿಗೆ ಪ್ರವೇಶ , ಸಿ ಇ ಟಿಯಲ್ಲಿ 1000 ರಾಂಕ್‌ನೊಳಗೆ 300 ರಾಂಕ್, ಬಿ ಎಸ್ಸಿ ಅಗ್ರಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಸಿ ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಎನ್ ಡಿ ಎ ಪರೀಕ್ಷೆಯಲ್ಲಿ 12 ಮಂದಿ ಆಯ್ಕೆ, ನಾಟ ಎಕ್ಸಾಂ ಬರೆದವರೆಲ್ಲಾ ಅರ್ಹರಾಗುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನೂತನ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ ಹಿರಿಮೆ ಎಕ್ಸೆಲ್‌ನದು.
ನೀಟ್ ಎಕ್ಸಾಂ ಅದೆಷ್ಟೇ ಕಠಿಣವಾಗಿದ್ದರೂ ಎಕ್ಸೆಲ್‌ನ ವಿದ್ಯಾರ್ಥಿಗಳಿಗೆ ಸುಲಭ ಸಾಧ್ಯವಾಗಲು ಕಾರಣ ಇಲ್ಲಿರುವ ಪರಿಣತ ಹಾಗೂ ಹಿರಿಯ ಶ್ರೇಣಿಯ ಪ್ರಾಧ್ಯಾಪಕ ವೃಂದದ ಬೋಧನೆ. ಅಚ್ಚುಕಟ್ಟಾದ ಅಕಾಡೆಮಿಕ್ ಪ್ಲಾನ್, ನಿರಂತರವಾದ ತರಗತಿ, ಡೌಟ್ ಕ್ಲಿಯರ್ ಸೆಶನ್ಸ್, ನಿಯಮಿತವಾಗಿ ನಡೆಯುವ ಮೋಕ್ ಟೆಸ್ಟ್‌ಗಳು, ಕ್ವೆಶ್ಚನ್ ಪೇಪರ್ ಅನಾಲಿಸೀಸ್, ಸ್ಮರಣ ಶಕ್ತಿ ಹೆಚ್ಚಿಸುವ ತರಬೇತಿ, ಒತ್ತಡವಾಗದಂತೆ ನಡೆಸುವ ಕೌನ್ಸಿಲಿಂಗ್ ಸೆಷನ್‌ಗಳು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸಲು ಸಫಲವಾಗಿವೆ.

ವಿಶಾಲವಾದ ತರಗತಿ ಕೋಣೆಗಳು ಒಂದು ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿರುವ ಕ್ವೆಶ್ಚನ್ ಬ್ಯಾಂಕ್ , ಅವಶ್ಯಕತೆಗನುಗುಣವಾಗಿ ಇಂಡಿವಿಜುವಲ್ ಕೋಚಿಂಗ್, ಅಗತ್ಯವನ್ನನುಸರಿಸಿ ಆನ್ಲೈನ್ ತರಬೇತಿ, ಡೈಲಿ ಟೆಸ್ಟ್, ಪ್ರಾಧ್ಯಾಪಕರ ಉಪಸ್ಥಿತಿಯಲ್ಲಿ ಸ್ಟಡಿ ಅವರ್ , ಎಕ್ಸ್ಟ್ರಾ ಎಕ್ಸಪ್ಲಾನೇಶನ್ ಮೊದಲಾದವು ದಾಖಲಾದ ವಿದ್ಯಾರ್ಥಿಗಳ ಕನಸು ಕೈಗೂಡಿಸಲು ಕೈಗೊಳ್ಳುವ ಯತ್ನಗಳಾಗಿವೆ. ಎಕ್ಸೆಲ್ ನೀಟ್ ಅಕಾಡೆಮಿ ಅವಿರತ ಶ್ರಮ ವಹಿಸುವುದರಿಂದ ಸಹಜವಾಗಿ ಇಲ್ಲಿನ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್, ಬಿಸಿ ನೀರಿನ ವ್ಯವಸ್ಥೆ, ಕ್ಯಾಂಪಸ್‌ನಲ್ಲೇ ವೈದ್ಯಕೀಯ ಸೌಲಭ್ಯ, ನಾಲ್ಕು ಹೊತ್ತು ಗುಣಮಟ್ಟದ ಆಹಾರ ಪೂರೈಕೆ, Undu ವಿದ್ಯಾರ್ಥಿಗಳಿಗೆ ಒಬ್ಬರಂತೆ ನಿಲಯ ಪಾಲಕರು, ಯೋಗ- ಧ್ಯಾನ- ಪ್ರಾರ್ಥನಾ ಸಮಯ ಹೀಗೆ ಎಕ್ಸೆಲ್ ವಸತಿ ನಿಲಯಗಳು ವಿದ್ಯಾರ್ಥಿ ಸ್ನೇಹಿಯಾಗಿವೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಐದು ಮಂದಿ ಏಮ್ಸ್ , ಜಿಪ್ಮಾರ್ ಸೇರಿದಂತೆ ಒಟ್ಟು 258 ವಿದ್ಯಾರ್ಥಿಗಳು ಭಾರತದ ಅತ್ಯಂತ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಓದುವಂಥ ಅವಕಾಶವನ್ನು ಎಕ್ಸೆಲ್ ಮಾಡಿ ಕೊಟ್ಟಿದೆ.
ಇನ್ನೊಂದು ಸಂಸ್ಥೆಯ ಪ್ರಥಮ ಯತ್ನದಲ್ಲಿ 51.03 ಪರ್ಸಂಟೈಲ್ ದಾಖಲಿಸಿದ ಕೊಡಗು ಮೂಲದ ಪ್ರವಾಣ್ ಪೊನ್ನಪ್ಪ ಎಕ್ಸೆಲ್ ಅಕಾಡೆಮಿಗೆ ಸೇರಿ 99.91 ಪರ್ಸಂಟೇಜ್ ಪಡೆದು, ರಾಷ್ಟ್ರದಲ್ಲೇ ಎರಡನೆಯ ಸ್ಥಾನದಲ್ಲಿರುವ ಜಿಪ್ಮಾರ್‌ಗೆ ಎಂ ಬಿ ಬಿ ಎಸ್ ಗೆ ಆಯ್ಕೆಯಾಗಿರುವುದು ಎಕ್ಸೆಲ್‌ನ ಗುಣಮಟ್ಟ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಈ ಬಾರಿಯ ಮರು ನೀಟ್ ಅದೆಷ್ಟೇ ಕಠಿಣವಾಗಿದ್ದರೂ ರಾಷ್ಟ್ರ ಮಟ್ಟದಲ್ಲೇ ಗುರುತಿಸಿಕೊಳ್ಳುವಂಥ ಫಲಿತಾಂಶ ಖಚಿತವಾಗಿಯೂ ದಾಖಲಿಸುವ ಶೈಕ್ಷಣಿಕ ಸಾಮರ್ಥ್ಯ ಎಕ್ಸೆಲ್ ಸಂಸ್ಥೆಗಿದೆ .
ನೂತನ ಶೈಕ್ಷಣಿಕ ವರ್ಷದಲ್ಲಿ ನೀಟ್‌ನಲ್ಲಿ 450 ಸ್ಕೋರ್ ಮಾಡಿದ ಹಾಗೂ ಬೋರ್ಡ್ ಎಕ್ಸಾಂನಲ್ಲಿ 97 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲು ಅಕಾಡೆಮಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ನಿರ್ಧರಿಸಿದ್ದಾರೆ. 400 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಶುಲ್ಕದಲ್ಲಿ 50 ಶೇಕಡಾ ರಿಯಾಯಿತಿ, ಪಿಯುಸಿಯಲ್ಲಿ 95 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ 20 ಶೇಕಡಾ ಶುಲ್ಕ ರಿಯಾಯಿತಿ , 90 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ 10 ಶೇಕಡಾ ಶುಲ್ಕ ರಿಯಾಯಿತಿ ನೀಡಲಾಗುತ್ತದೆ. ಸೀಮಿತ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು, ವೈದ್ಯರಾಗುವ ಅವರ ಕನಸನ್ನು ನನಸಾಗಿಸಲು ಪಣ ತೊಟ್ಟಿದೆ ಎಕ್ಸೆಲ್ ನೀಟ್ ಅಕಾಡೆಮಿ ಗುರುವಾಯನಕೆರೆ.
ಹೆಚ್ಚಿನ ಮಾಹಿತಿಗೆ 8867242769/ 9880899769 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.













