28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

ಕೊಕ್ಕಡ : ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆಯು ಜೂ.29 ರಂದು ಕೊಕ್ಕಡದ ಎಜುನೆಸ್ಟ್ ಅಕಾಡೆಮಿ ಕೇಂದ್ರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ವಹಿಸಿದರು.

ವಲಯ ಮಟ್ಟದಲ್ಲಿ ನಡೆಯುವ ಲೇಡಿ ಜೆಸಿ ಹಾಗೂ ಜೂನಿಯರ್ ಜೆಸಿ ಸಮ್ಮೇಳನ ಸಿಂಧು ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಣಯಿಸಲಾಯಿತು. ಮುಂದಿನ ತಿಂಗಳಲ್ಲಿ ಫಲ್ಗುಣಿ ಪ್ರಾಂತ್ಯದ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿಗೆ ತಯಾರಿ ನಡೆಸಲಾಯಿತು. ಮಧ್ಯಾಂತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪಡೆದ ಘಟಕದ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಅದೇ ರೀತಿ ವಲಯಾಧ್ಯಕ್ಷರಿಂದ ಬಿಡುಗಡೆಗೊಂಡ ಕಪಿಲಾವಾಣಿ ಮೊದಲ ಸಂಚಿಕೆಗೆ ಸಂಪಾದಕರಾದ ಜಸ್ವಂತ್ ಪಿರೇರಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದೀಪಾ ವಿ. ವಾಚಿಸಿದರು. ಜೂನ್ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಜೂನಿಯರ್ ಜೆಸಿ ಅಧ್ಯಕ್ಷರಾದ ಆದ್ಯಾ ಜೈನ್, ಜೊತೆ ಕಾರ್ಯದರ್ಶಿ ಜೋಯ್ ಬೊತೆಲ್ಲೊ, ಜೆಸಿಂತಾ ಡಿಸೋಜ ಅವರಿಗೆ ಶುಭಾಶಯವನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿತೇಶ್ ಎಲ್. ಪಿರೇರಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ‌., ಕೆ. ಶ್ರೀಧರ ರಾವ್, ಸಂತೋಷ್ ಜೈನ್, ವಿಕ್ಟರ್ ಸುವಾರಿಸ್, ಚಂದನಾ ಪಿ., ಜೋಸೆಫ್ ಪಿರೇರಾ ಹಾಗೂ ದಕ್ಷಾ ಜೈನ್ ಸಭೆಯಲ್ಲಿ ಭಾಗವಹಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ವಂದಿಸಿದರು.

Related posts

ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಬಿಸಾಡಿದ ಪ್ರಕರಣ: ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ಮೋಹನ್ ಗೌಡ ನೇತೃತ್ವದಲ್ಲಿ ಕರ್ನಾಟಕ ಸಾವಯವ ಕೃಷಿ ಯೋಜ‌ನೆಯಿಂದ 150ಕ್ಕೂ ಹೆಚ್ಚು ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ

Suddi Udaya

ನಾಳೆ (ಜು.28) ಕುಲಾಲ ಮಂದಿರದಲ್ಲಿನೂತನ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ – ವಿದ್ಯಾರ್ಥಿ ವೇತನ ವಿತರಣೆ – ಆಟಿ ಕೂಟ ಕಾಯ೯ಕ್ರಮ

Suddi Udaya

ಮರೋಡಿ: ಹಲ್ಲೆ, ಜೀವ ಬೆದರಿಕೆ ಆರೋಪ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವಾಣಿಯಲ್ಲಿ ‘ಆರ್ಮ್ಡ್ ಫೋರ್ಸ್‌ನಲ್ಲಿ ವೃತ್ತಿ’ ಕುರಿತು ಮಾರ್ಗದರ್ಶನ ಕಾರ್ಯಕ್ರಮ

Suddi Udaya

ದಿ| ಕಾಶಿ ಶೆಟ್ಟಿ ಸ್ಮರಣಾರ್ಥ ದೇವನಾರಿ ಬಂಗಾಡಿ ಸ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ ವಿತರಣೆ

Suddi Udaya
error: Content is protected !!