28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

‘ರಾಘು ಮಾಸ್ಟರ್’ ನಾಟಕ 100ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನ: ಶಿಶಿಲ ಶಾಲೆಯಲ್ಲಿ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ತಂಡದವರಿಂದ ಸಂಭ್ರಮಾಚರಣೆ

ಶಿಶಿಲ: 100ಕ್ಕೂ ಹೆಚ್ಚು ಯಶಸ್ವಿ ನಾಟಕ ಪ್ರದರ್ಶನಗಳನ್ನು ನೀಡಿದ ಸಂಭ್ರಮದ ಅಂಗವಾಗಿ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ಅವರ ತಂಡದವರು ಇಂದು ಶಿಶಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸಂಭ್ರಮವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಶೆಟ್ಟಿ ಅವರು, “ನಮ್ಮ ‘ರಾಘು ಮಾಸ್ಟರ್’ ನಾಟಕವು 100ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ನೀಡಲು ಅನೇಕ ಸಂಘ-ಸಂಸ್ಥೆಗಳು ಹಾಗೂ ಶಾಲೆಗಳ ಸಹಕಾರ ಕಾರಣವಾಗಿದೆ. ಅವುಗಳಲ್ಲಿ ಶಿಶಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು. ಆದ್ದರಿಂದ ಈ ಸಂತಸದ ಕ್ಷಣವನ್ನು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಹಂಚಿಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವೆ” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೋಹನ್ ಗೌಡ, ಮುಖ್ಯಶಿಕ್ಷಕಿ ಶ್ರೀಮತಿ ಸರಸ್ವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರುಣಾಕರ ಶಿಶಿಲ, ಸದಸ್ಯರಾದ ಭುವನ್ ಕುಮಾರ್, ಮನೋಜ್, ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪ್ರಸನ್ನ ಶೆಟ್ಟಿ ಅವರ ತಂಡದ ಸದಸ್ಯರು ಉಪಸ್ಥಿತರಿದ್ದರು.ಸಂಭ್ರಮದ ಅಂಗವಾಗಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಿದರು.

Related posts

ಬೆಳ್ತಂಗಡಿಯ ಹೇರಾಜೆಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ದೈವಗಳಿಗೆ ನರ್ತನ ಸೇವೆ: ನಟ ವಿಜಯರಾಘವೇಂದ್ರ ಭಾಗಿ

Suddi Udaya

ಭಾರತೀಯ ಮಜ್ದೂರ್ ಸಂಘದ 71ನೇ ಸ್ಥಾಪನಾ ದಿನಾಚರಣೆ ಹಾಗೂ ರಿಕ್ಷಾ ಚಾಲಕ -ಮಾಲಕರ ಸಂಘ ವೇಣೂರು ವಲಯ ವಾರ್ಷಿಕ ಸಭೆ

Suddi Udaya

ಹೊಸಂಗಡಿ: ಗಾಳಿ ಮಳೆಗೆ 5 ಮನೆಗಳಿಗೆ ಹಾನಿ : ಸ್ಥಳಕ್ಕೆ ಪಂಚಾಯತು, ಕಂದಾಯ ಅಧಿಕಾರಿಗಳ ಭೇಟಿ

Suddi Udaya

ನಡ ಸ.ಹಿ.ಪ್ರಾ. ಶಾಲಾ ಶತಮಾನೋತ್ಸವ ಸಮಿತಿಯಿಂದ ಡಾ|| ಹೆಗ್ಗಡೆಯವರ ಭೇಟಿ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಜಿಲ್ಲೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ

Suddi Udaya

ಬೆಳ್ತಂಗಡಿ ಪ.ಪಂ. ನಲ್ಲಿ ಪೌರ ಕಾರ್ಮಿಕರ ದಿನಾಚರಣೆ

Suddi Udaya
error: Content is protected !!