31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಧನ್ಯೋಸ್ಮಿ

ಬೆಳ್ತಂಗಡಿ: ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಧನ್ಯೋಸ್ಮಿಯು ಜೂ.28 ರಂದು ವಾಮಂಜೂರಿನಲ್ಲಿ ಜರುಗಿತು.

ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ 2025 -26 ನೇ ಸಾಲಿನ ಕಾರ್ಯ ಚಟುವಟಿಕೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿತು . ಜಿಲ್ಲೆಯಲ್ಲಿರುವ 120 ಕ್ಲಬ್ ಗಳಲ್ಲಿ ಸೇವಾ ಚಟುವಟಿಕೆಗಳಾದ ವೈದ್ಯಕೀಯ, ಸಾಮಾಜಿಕ ಹಾಗೂ ಶಿಕ್ಷಣ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಸಮಗ್ರವಾಗಿ ಐದನೇ ಸ್ಥಾನವನ್ನು ಪಡೆಯಿತು . ಉತ್ತಮ ಅಧ್ಯಕ್ಷರಾಗಿ ಲಯನ್ ಮುರಳಿ ಬಲಿಪ ಉತ್ತಮ ಕಾರ್ಯದರ್ಶಿಯಾಗಿ ಲಯನ್ ಅಮಿತಾನಂದ ಹೆಗ್ಡೆ, ಉತ್ತಮ ಕೋಶಾಧಿಕಾರಿಯಾಗಿ ಲಯನ್ ಸುಭಾಷಿಣಿ ಪುರಸ್ಕೃತಗೊಂಡರು.

ಕ್ಲಬ್ ನ ಸದಸ್ಯರುಗಳಾದ ಲಯನ್ ರಾಜು ಶೆಟ್ಟಿ,ಲಯನ್ ರವೀಂದ್ರ ಶೆಟ್ಟಿ, ಲಯನ್ ವಸಂತ ಶೆಟ್ಟಿ ಶ್ರದ್ದಾ, ಲಯನ್ ಉಮೇಶ್ ಶೆಟ್ಟಿ, ಲಯನ್ ದೇವದಾಸ್ ಶೆಟ್ಟಿ ಲಯನ್ ಕಿರಣ್ ಕುಮಾರ್, ಲಯನ್ ನಿತ್ಯಾನಂದ ನಾವರ, ಲಯನ್ ಧರಣೇಂದ್ರ ಕೆ ಜೈನ್ ಲಯನ್ ರಘುರಾಮಶೆಟ್ಟಿ ಲಯನ್ ಪ್ರಕಾಶ್ ಶೆಟ್ಟಿ ವಿಶೇಷ ಪುರಸ್ಕಾರವನ್ನು ಪಡೆದರು.


ಉತ್ತಮ ಇಮೇಜ್ ಬಿಲ್ಡ್ ಪ್ರಾಜೆಕ್ಟ್ ಗಾಗಿ ನೂತನ ಕಟ್ಟಡ ಲಯನ್ಸ್ ಸೇವಾ ಭವನವು ಪ್ರಶಸ್ತಿಯನ್ನು ಪಡೆಯಿತು. ವಾಮಂಜೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಲಯನ್ ಅರವಿಂದ ಶೆಣೈಯವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಮಾರಂಭದಲ್ಲಿ ಬೆಳ್ತಂಗಡಿ ಲಯನ್ಸ್ ನ ಎಲ್ಲಾ ಸದಸ್ಯರು ಭಾಗವಹಿಸಿದರು.

Related posts

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ರಸಾದ್ ಅಜಿಲ, ಪ್ರಧಾನ ಸಂಚಾಲಕರಾಗಿ ಡಾ. ನಿರಂಜನ್ ರೈ ನೇಮಕ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ

Suddi Udaya

ಸುಣ್ಣದಕೆರೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ವಸಂತಿರವರಿಗೆ ಸನ್ಮಾನ

Suddi Udaya

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಗುರುಪೂಜೆಯ ಪೂರ್ವಭಾವಿ ಸಭೆ

Suddi Udaya
error: Content is protected !!