31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

  ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಉಜಿರೆಯ NABH ಪುರಸ್ಕೃತ  ಬೆನಕ ಹೆಲ್ತ್ ಸೆಂಟರ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇಶ ಕಂಡ ಅಪ್ರತಿಮ ವೈದ್ಯ  ಡಾ. ಬಿ.ಎಸ್.ರಾಯ್ ಅವರ ಸ್ಮರಣಾರ್ಥ ಜು. 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ಮತ್ತು ಅಳದಂಗಡಿ ಪರಿಸರದಲ್ಲಿ ಮನೆ ಮಾತಾಗಿರುವ ವೈದ್ಯರಾದ ಡಾ.ಎನ್ ಎಮ್ ತುಳಪುಳೆ  ಅವರನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತೀ ದಂಪತಿಗಳು ಶಾಲು ಹೊದಿಸಿ , ಫಲಪುಷ್ಪ ನೀಡಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ  ಡಾ. ಎನ್ ಎಮ್ ತುಳಪುಳೆಯವರು ಕಳೆದ 26 ವರ್ಷಗಳಿಂದ ಬೆನಕ ಆಸ್ಪತೆಯ ಕಾರ್ಯವೈಖರಿ ಮತ್ತು ನಿಸ್ಪ್ರಹ ಸೇವೆಯನ್ನು  ಹತ್ತಿರದಿಂದ ಬಲ್ಲವನಾಗಿದ್ದು ,ಬೆನಕ ಆಸ್ಪತ್ರೆ ರೋಗಿಗಳ ಪಾಲಿನ ಸಂಜೀವಿನಿ ಎಂದರೆ ಅತಿಶಯೋಕ್ತಿಯಲ್ಲ. ಈ ಆಸ್ಪತ್ರೆ ಇನ್ನೂ ಎತ್ತರಕ್ಕೆ ಬೆಳೆದು ಬೆಳ್ತಂಗಡಿ ತಾಲೂಕಿಗಷ್ಟೇ ಅಲ್ಲ ,ಸುತ್ತಲಿನ ಪರಿಸರದ ರೋಗಿಗಳಿಗೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು .

ಡಾ. ಗೋಪಾಲಕೃಷ್ಣರವರು ಮಾತನಾಡುತ್ತ ಕೇವಲ 7 ಹಾಸಿಗೆಗಳಿಂದ ಪ್ರಾರಂಭಿಸಿದ ನಮ್ಮ ಬೆನಕ , ಪ್ರಸ್ತುತ 130  ಹಾಸಿಗೆಗಳನ್ನು ಹೊಂದಿದ್ದು , ಇದು ಕೇವಲ ನನ್ನೊಬ್ಬನ  ಸಾಧನೆಯಲ್ಲ , ಇದು ನಮ್ಮ ತಾಲೂಕಿನ ಮತ್ತು ಸುತ್ತಲಿನ ಪರಿಸರದ ಬಂಧುಗಳು, ತಾಲೂಕಿನ ವೈದ್ಯರುಗಳು , ನನ್ನ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ಪ್ರೋತ್ಸಾಹ ಮತ್ತು ಸಹಕಾರ ಇವೆಲ್ಲವುಗಳಿಂದ ಸಾಧ್ಯವಾಯಿತೆಂದು ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು .

ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಹ್ವಾನದ ಮೇರೆಗೆ ಪಾಲ್ಗೊಂಡ ಎಲ್ಲ ವೈದ್ಯರುಗಳಿಗೆ ಹೂ ನೀಡಿ ಗೌರವಿಸಲಾಯಿತು .

ಇದೇ ಸಂದರ್ಭದಲ್ಲಿ ಚಿಕಿತ್ಸೆಗೆಂದು  ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಗ್ಯೂ ಪೀಡಿತ  ಮತ್ತು ಪ್ಲೇಟ್ಲೆಟ್ ಅತ್ಯಂತ ಕಡಿಮೆಯಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಿಡ್ಲೆ ಗ್ರಾಮದ ಕರಿಯ ( 50ವರ್ಷ ) ಇವರಿಗೆ ಈ ವರ್ಷದ ಉಚಿತ ಚಿಕಿತ್ಸೆಯನ್ನು ಆಸ್ಪತ್ರೆಯ ವತಿಯಿಂದ ನೀಡಲಾಗುವುದೆಂದು ವೈದ್ಯಕೀಯ ನಿರ್ದೇಶಕರು ಪ್ರಕಟಿಸಿದರು.

ಡಾ. ಅಂಕಿತ ಜಿ ಭಟ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಡಾ.ಆದಿತ್ಯ ರಾವ್ ರವರು ಡಾ.ಎನ್ ಎಂ ತುಳಪುಳೆಯವರ ಪರಿಚಯವನ್ನು ಮಾಡಿದರು . ಡಾ.ಭಾರತಿ ಜಿ ಕೆ ವಂದಿಸಿದರು.  

Related posts

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಉರುವಾಲು: ದಿನಕರ ಪೂಜಾರಿ ಕಡ್ತಿಲ ನಿಧನ

Suddi Udaya

ಶಿಶಿಲ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ವಾರ್ಷಿಕ ಮಹೋತ್ಸವ

Suddi Udaya

ಪುಂಜಾಲಕಟ್ಟೆ ಯುವಕ ಸೈನೇಡ್ ಸೇವಿಸಿ ಆತ್ಮಹತ್ಯೆ

Suddi Udaya

ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಕಾಜೂರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!