31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಮಂತ್ರಿ ಮಂಡಲ ರಚನೆ

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಜೂ. 30ರಂದು ಶಾಲಾ ಮಂತ್ರಿ ಮಂಡಲದ ಚುನಾವಣೆ ನಡೆಯಿತು.

ಕಂಟ್ರೋಲರ್ ಬಳಸಿ ಇ.ವಿ.ಎಂ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅನುಕೂಲ ಒದಗಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್.ಬಿ ಅವರ ದೂರ ದೃಷ್ಟಿಯಂತೆ, ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ , ಚುನಾವಣಾ ಗುರುತಿನ ಚೀಟಿ, ಮತದಾರರ ಪಟ್ಟಿ, ಪ್ರತ್ಯೇಕ ಬೂತ್ ವ್ಯವಸ್ಥೆ ಮತ್ತು ಮತಗಳ ಎಣಿಕೆ ಕಾರ್ಯ ನಡೆಯಿತು.

ಶಾಲಾ ನಾಯಕಿಯಾಗಿ ಕು.ಚಿರಣ್ಯಾ , ಉಪನಾಯಕಿಯಾಗಿ ಕು.ಪ್ರಣಮ್ಯ ಎಂ.ಎಸ್, ಸಭಾಪತಿಯಾಗಿ ಕು.ಆತ್ಮೀ ಕೋಟ್ಯಾನ್, ಕ್ರೀಡಾ ಮಂತ್ರಿಯಾಗಿ ಮಾ. ಅನ್ವೇಶ್ ಮತ್ತು ವಿರೋಧ ಪಕ್ಷದ ನಾಯಕರಾಗಿ ಮಾ. ಬದರಿನಾಥ್ ಸಿ.ಪಿ ಆಯ್ಕೆಯಾದರು.‌
ಶಾಲಾ ಮುಖ್ಯೋಪಾಧ್ಯಾಯ ಶಾಂತಿರಾಜ್ ಜೈನ್ , ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಆಡಳಿತಾಧಿಕಾರಿ ಕೀರ್ತಿನಿಧಿ ಮತ್ತು ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನ ಶಿಕ್ಷಕಿ ಶ್ರೀಮತಿ ಕಾವ್ಯಶ್ರೀ ಎನ್ ಪೂರ್ವ ಸಿದ್ಧತೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಮಾರ್ಗದರ್ಶನ ಮಾಡಿದರು.

ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಪ್ರಸಾದ್, ನಿತೇಶ್ , ದಾಮೋದರ್, ಪೂಜಾಶ್ರೀ, ಶ್ವೇತಾ ಕಿರಣ್, ಅಂಜಲಿ, ಕಾವ್ಯ ಶೆಟ್ಟಿ, ಮರಿಟಾ ಪ್ರಿಯಾ ಸೆರಾವೋ, ಮಮತಾ ಮತ್ತು ಕೃಷ್ಣಪ್ಪ ಎಂ.ಕೆ ಕಾರ್ಯ ನಿರ್ವಹಿಸಿ, ಶಿಕ್ಷಕ ವೃಂದ ಸಹಕರಿಸಿದರು.

Related posts

ಪೋಟೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪ: ಮಹಿಳೆಯಿಂದ ಪೊಲೀಸ್ ದೂರು: ಆರೋಪಿ ಮೇಲೆ ಪ್ರಕರಣ ದಾಖಲು

Suddi Udaya

ಬಂದಾರು: ಮಹೇಶ್ ರವರ ತೋಟಕ್ಕೆ ನುಗ್ಗಿದ್ದ ಒಂಟಿಸಲಗ: ಅಪಾರ ಕೃಷಿ ಹಾನಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಭೇಟಿ

Suddi Udaya

ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮ

Suddi Udaya

ಹೆದ್ದಾರಿ ಕಾಮಗಾರಿ ವಾಹನಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಾಯ

Suddi Udaya

ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಯುವ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya
error: Content is protected !!