22.9 C
ಪುತ್ತೂರು, ಬೆಳ್ತಂಗಡಿ
August 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಕ್ರಮವಾಗಿ ಸರಕಾರಿ ಜಾಗದಲ್ಲಿ ಮರ ಕಡಿಯುವಾಗ ಅರಣ್ಯ ಇಲಾಖೆಯಿಂದ ದಾಳಿ

ಬೆಳ್ತಂಗಡಿ : ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರವನ್ನು ಕಡಿಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆರಿಯಕಾಡು ಎಂಬಲ್ಲಿ ಸರಕಾರಿ ಜಾಗದಲ್ಲಿ ನೆರಿಯ ಗ್ರಾಮದ ಅಂಬ್ಲೆ ನಿವಾಸಿ ಕೃಷ್ಣಪ್ಪ ಗೌಡರ ಮಗ ರಾಜಪ್ಪ ಗೌಡ(57) ಎಂಬವರು ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೆ ಹೆಬ್ಬಲಸು ಮರವನ್ನು ಕಡಿಯುತ್ತಿರುವ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್ ಗೆ ಬಂದ ಖಚಿತ ಮಾಹಿತಿ ಮೇರೆಗೆ ಜೂ.29 ರಂದು ದಾಳಿ ಮಾಡಿದ್ದಾರೆ.

ಸರಕಾರಿ ಜಾಗಕ್ಕೆ ದಾಳಿ ಮಾಡಿದ ವೇಳೆ ಒಂದು ಹೆಬ್ಬಲಸು ಮರವನ್ನು ಕಡಿದು ತುಂಡರಿಸಿರುವುದು ಪತ್ತೆಯಾಗಿದೆ. 40 ಹೆಬ್ಬಲಸು ಹಲಗೆ ಮರದ ಗಾತ್ರದ ಒಟ್ಟು ಪ್ರಮಾಣ 1.003 ಘನ ಮೀಟರ್ ಹಾಗೂ 3 ಮರದ ದಿಮ್ಮಿಗಳ ಒಟ್ಟು ಪ್ರಮಾಣ 1.026 ಘನ ಮೀಟರ್ ಆಗಿದೆ.ಕಡಿದಿರುವ ಮರಗಳನ್ನು ಮಹಜರು ನಡೆಸಿ ವಶಪಡಿಸಿಕೊಂಡು ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಜೂ.30 ರಂದು ವರದಿ ಮಾಡಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಜು.1 ರಂದು ಪ್ರಕರಣ ದಾಖಲಿಸಲು ವರದಿಯನ್ನು ಸಲ್ಲಿಸಿ ಜು.2 ರಂದು ಅನುಮತಿ ಸಿಕ್ಕಿದ ಬಳಿಕ ಸಂಜೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ನೆರಿಯ ಗ್ರಾಮದ ಅಂಬ್ಲೆ ನಿವಾಸಿ ಆರೋಪಿ ರಾಜಪ್ಪ ಗೌಡ(57) ವಿರುದ್ಧ THE KARNATAKA FOREST ACT, 1963 8 Sections 33(2) of the THE KARNATAKA FOREST ACT, 1963 THE KARNATAKA FOREST RULES, 1969, 25(3)d ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದಲ್ಲಿ ನೆರಿಯ ಡಿ.ಆರ್.ಎಫ್.ಒ ರವಿಚಂದ್ರ, ಗಸ್ತು ವನಪಾಲಕ ರವಿ ಜಟ್ಟಿ ಮುಕ್ರಿ , ಚಿಬಿದ್ರೆ ಡಿ.ಆರ್.ಎಫ್.ಒ ದೀಪಾ ಗಡಿಗ, ಚಾಲಕ ಕುಶಾಲಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ವಾಣಿ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಸಂಘದಿಂದ ‘ಮಾಕ್ ಪಾರ್ಲಿಮೆಂಟ್’ ಕಾರ್ಯಕ್ರಮ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವರ ವಾರ್ಷಿಕ ಜಾತ್ರೆ: ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ “ಪರೀಕ್ಷಾ ಸಿದ್ಧತೆ ಕಾರ್ಯಾಗಾರ”

Suddi Udaya

ಉಜಿರೆ: ಎಸ್.ಡಿ.ಟಿ.ಯು ಚಾಲಕ ಹಾಗೂ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಶಿಲಾ೯ಲಿನಲ್ಲಿ ತಂದೆಯ ಮೇಲೆ ಪುತ್ರ, ಸೊಸೆಯಿಂದ ಹಲ್ಲೆ ಆರೋಪ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಮುಳಿಯ ಗೋಲ್ಡ್ & ಡೈಮಂಡ್ಸ್‌: ಡಿ.27ರಿಂದ ಜ.5ರ ವರೆಗೆ ವರ್ಷಾಂತ್ಯದ ಮಾರಾಟ: ಶೇ 50ರ ವರೆಗೆ ವಿಎ ಕಡಿತ; ಹಳೆಯ ಆಭರಣಗಳ ವಿನಿಮಯಕ್ಕೆ ಅವಕಾಶ

Suddi Udaya
error: Content is protected !!