23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ: ತರಗತಿ ಕೊಠಡಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ

ಬಂದಾರು : ಇಲ್ಲಿನ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ವರ್ಷಾಚರಣೆಯ ಸವಿನೆನಪಿಗಾಗಿ ಹಿರಿಯ ವಿದ್ಯಾರ್ಥಿಗಳು, ಎಸ್.ಡಿ. ಎಂ.ಸಿ. ಮತ್ತು ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ 26 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಉದ್ದೇಶಿತ ತರಗತಿ ಕೊಠಡಿ ಕಾಮಗಾರಿಗೆ ಶಂಕು ಸ್ಥಾಪನೆ ಕಾರ್ಯಕ್ರಮವು ಜೂ.29ರಂದು ನೆರವೇರಿತು.

ಅರ್ಚಕರಾದ ಪ್ರಶಾಂತ ಹೊಳ್ಳ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ ಹಿರಿಯ ವಿದ್ಯಾರ್ಥಿ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಪಿ.ತಿಮ್ಮಯ್ಯ ಗೌಡ ಅವರು ಶಿಲಾನ್ಯಾಸಗೈದರು.

ಈ ಸಂದರ್ಭ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ , ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಉಪಾಧ್ಯಕ್ಷ ವೆಂಕಪ್ಪ ಪಿ.ಎಸ್., ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಶಾಂತ್ ನಿರುಂಬುಡ, ನಿವೃತ್ತ ಶಿಕ್ಷಕಿ ರೇವತಿ ಅನಾಬೆ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಬಾಬಿ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಸಾದ್ ಅಂಡಿಲ, ಕೋಶಾಧಿಕಾರಿ ಯಶೋಧಾ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಮೀನಾಕ್ಷಿ ಎಸ್ ಡಿ ಎಂ ಸಿ, ಅಮೃತ ಮಹೋತ್ಸವ ಸಮಿತಿ , ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಶಿಕ್ಷಕ ವೃಂದದವರು ಇದ್ದರು.

Related posts

ಗಾಳಿ ಮಳೆ; ಕೊಯ್ಯೂರು ಜಿನ್ನಪ್ಪ ಗೌಡರ ಮನೆಗೆ ಬಿದ್ದ ತೆಂಗಿನಮರ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ

Suddi Udaya

ಕಕ್ಕಿಂಜೆ ಮಾಂಡೋವಿ ಮೋಟಾರ್ಸ್‌ನಲ್ಲಿ ನ್ಯೂ ಬ್ರೆಝಾ ಕಾರು ಬಿಡುಗಡೆ

Suddi Udaya

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ WAVES-24 ಗುರುದೇವ ಕಾಲೇಜಿಗೆ ಪ್ರಶಸ್ತಿ

Suddi Udaya

ಬಿಎಂಎಸ್ ರಿಕ್ಷಾ ಚಾಲಕರ ಸಂಘ ಕ್ಷೇಮ ನಿಧಿ ಯೋಜನೆಯ 31ನೇ ಸಹಾಯಧನ ಹಸ್ತಾಂತರ

Suddi Udaya

ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

Suddi Udaya
error: Content is protected !!