23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರತಿ ಮಂಗಳವಾರ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ‘ಗಣಹವನ’ ಸೇವೆ ಆರಂಭ

ಬೆಳ್ತಂಗಡಿ:ಅಳದಂಗಡಿಯ ಪವಿತ್ರವಾದ ಕಾರಣೀಕ ಕ್ಷೇತ್ರವಾದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಕಲ ವಿಘ್ನಗಳ ನಿವಾರಕ ಹಾಗೂ ಇಷ್ಟಾರ್ಥ ಪ್ರದಾತನಾದ ಶ್ರೀ ಮಹಾಗಣಪತಿಯ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿ ಮಂಗಳವಾರ ವಿಶೇಷ ‘ಗಣಹವನ’ ಸೇವೆಯನ್ನು ಆಯೋಜಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ ತಿಳಿಸಿದ್ದಾರೆ.

ಈ ವಿಶೇಷ ಸೇವೆಯ ಮೊದಲ ಕಾರ್ಯಕ್ರಮವು ಜುಲೈ 7, 2026 ಮಂಗಳವಾರ ನಡೆಯಲಿದ್ದು, ಬೆಳಿಗ್ಗೆ ಪ್ರಾರಂಭವಾಗಿ 10 ಗಂಟೆಗೆ ಗಣಹವನದ ಪೂರ್ಣಾಹುತಿ ನೆರವೇರಲಿದೆ. ಪ್ರಥಮ ಗಣಹವನ ಸೇವೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಶಶಿಧರ ಡೋಂಗ್ರೆ ಹಾಗೂ ಡಾ. ಸುಷ್ಮಾ ಡೋಂಗ್ರೆ ದಂಪತಿ ನೆರವೇರಿಸಲಿದ್ದಾರೆ.

ಗಣಹವನ ಸೇವೆಯಲ್ಲಿ ಭಾಗವಹಿಸುವುದರಿಂದ ಭಕ್ತರು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಬಂಧುಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ.

ಗಣಹವನ ಸೇವಾ ದರ: ರೂ. 3,000/- ಮಾತ್ರ. ಸೇವಾರ್ಥಿಗಳು ಹೂ, ಹಣ್ಣು ತರಬೇಕು. ಹವನಕ್ಕೆ ಬೇಕಾದ ಉಳಿದ ಎಲ್ಲ ಸಾಮಾಗ್ರಿಗಳು, ಪುರೋಹಿತರ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದಲೇ ಮಾಡಲಾಗುವುದು. ಆಸಕ್ತ ಭಕ್ತರು ತಮ್ಮ ಹೆಸರನ್ನು ಕನಿಷ್ಠ ಒಂದು ವಾರ ಮುಂಚಿತವಾಗಿ ದೇವಸ್ಥಾನದ ಕಛೇರಿಯಲ್ಲಿ ನೋಂದಾಯಿಸಿಕೊಂಡು ಸಹಕರಿಸಬೇಕಾಗಿ ಕೋರಿಕೆ.
ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ- 9448548668 ಹಾಗೂ ಅರ್ಚಕರಾದ ಪ್ರವೀಣ ಮಯ್ಯ – 7483988272 ಇವರನ್ನು ಸಂಪರ್ಕಿಸಬಹುದಾಗಿದೆ.

Related posts

ಗುರುವಾಯನಕೆರೆ ದೈವಾರಾಧಕರ ಮಹಾ ಸಮಾವೇಶದಲ್ಲಿ ಎಕ್ಸೆಲ್ ಕಲಾ ವೈಭವ

Suddi Udaya

ಚಾರ್ಮಾಡಿ ಘಾಟ್ ಅಪಘಾತ: ಓರ್ವ ವೃದ್ಧ ಸಾವು

Suddi Udaya

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’: ಜ.9ರಿಂದ 20ರ ವರೆಗೆ ವಿಶೇಷ ಉತ್ಸವ

Suddi Udaya

ಧರ್ಮಸ್ಥಳ ಕಾಮಧೇನು ಸಂಘದ ವತಿಯಿಂದ ಆಟಿಡೊಂಜಿ ದಿನ ಆಚರಣೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಆಡಳಿತಾಧಿಕಾರಿ ಮತ್ತು ಇಲಾಖಾಧಿಕಾರಿಗಳ ಕೊರತೆಯಿಂದ ಶಿರ್ಲಾಲು ಗ್ರಾಮಸಭೆ ರದ್ದು

Suddi Udaya
error: Content is protected !!