23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಅಭಿಯಾನ: ಕ್ಷಣಿಕ ಸುಖಕ್ಕೆ, ಶಾಶ್ವತ ಸುಖ ಕಳೆದು ಕೊಳ್ಳಬೇಡಿ: ಬಿ. ಸೋಮಶೇಖರ ಶೆಟ್ಟಿ

ಉಜಿರೆ : ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶ್ರಯದಂತೆ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಅಭಿಯಾನ ಜುಲೈ 7ರಂದು ಜರಗಿತು.

ಶ್ರೀ ಧರ್ಮಸ್ಥಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರೋಟೋರಿಯನ್ ಬಿ ಸೋಮಶೇಖರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಯುವಜನತೆ ಹಾದಿ ತಪ್ಪುವ ಸಂದರ್ಭ ಯಾವ ರೀತಿ ವಿದ್ಯಾರ್ಥಿಗಳು ಮುಂಜಾಗ್ರತೆ ವಹಿಸಬೇಕು. ಸ್ವಯಂ ಸಂಕಲ್ಪ ಮಾಡುವ ಮೂಲಕ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಯುವ ಜನತೆ,ಕ್ಷುಲ್ಲಕ ಕಾರಣ,ಆತುರದ ನಿರ್ಧಾರ ,ಸಹಪಾಠಿಗಳ,ಮಿತ್ರರ ಒತ್ತಾಯಕ್ಕೆ ಕಟ್ಟು ಬಿದ್ದು, ದುಶ್ಚಟ ಕ್ಕೆ ಬಲಿಯಾಗಿ,ಕ್ಷಣಿಕವಾದ ಸುಖಕ್ಕೆ,ಶಾಶ್ವತವಾದ ಸುಖ ವನ್ನು,ಕಳೆದುಕೊಂಡು ಜೀವನವನ್ನು,ಭವಿಷ್ಯವನ್ನು ಹಾಳುಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು. ಆರೋಗ್ಯಕರ ಜೀವನಶೈಲಿ ಸ್ವಚ್ಛತೆ ಮತ್ತು ನೈತಿಕ ಮೌಲ್ಯಗಳನ್ನು ಸಂಸ್ಕಾರ ಹಿತ ಜೀವನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಎಂದು ಕರೆ ನೀಡಿದರು.

ಮಾದಕ ವ್ಯಸನ, ದುಶ್ಚಟ ಮತ್ತು ಸಾಮಾಜಿಕ ಅನಿಷ್ಠಗಳಿಂದ ದೂರವಿರುತ್ತೇನೆ ಎಂದು ವಿದ್ಯಾರ್ಥಿಗಳು ಪ್ರಮಾಣ ಮಾಡಿದರು ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಯಿತು ಕಾರ್ಯಕ್ರಮದ ನಿರೂಪಣೆಯನ್ನು ಪೂಜಾ ನಿರ್ವಹಿಸಿದರು

Related posts

ಬೆಳ್ತಂಗಡಿ ಬಂಗೇರ ಬ್ರಿಗೇಡ್ ಇದರ ಹೊಸಂಗಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ವಿದ್ಯಾನಿಧಿ ವಿತರಣೆ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರಿಗೆ ಶ್ರೀಮತಿ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ಮತ್ತು ಮಕ್ಕಳು ಸತ್ಯನಪಲ್ಕೆ ಕಲ್ಮಂಜ ಇವರಿಂದ ನೂತನ ಪುಷ್ಪರಥ ಸಮರ್ಪಣೆ ; ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ರಥಬೀದಿಯಿಂದ ಶ್ರೀ ಕ್ಷೇತ್ರ ಪಜಿರಡ್ಕಕ್ಕೆ ಭವ್ಯ ಶೋಭಾಯಾತ್ರೆ,

Suddi Udaya

ತಾಜುಲ್ ಉಲಮಾ ಎಟ್ಟಿಕ್ಕುಳಂ ದರ್ಸ್” ಗೆ ಹತ್ತು ಲಕ್ಷ ರೂಪಾಯಿ ಚೆಕ್ ಹಸ್ತಾಂತರ

Suddi Udaya

ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ: ರೂ.4.83 ಲಕ್ಷ ಲಾಭ, ಸದಸ್ಯರಿಗೆ ಶೇ. 14 ಡಿವಿಡೆಂಟ್

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ರಹಿಮಾನ್ ಪಡ್ಪು ಆಯ್ಕೆ

Suddi Udaya
error: Content is protected !!