23.8 C
ಪುತ್ತೂರು, ಬೆಳ್ತಂಗಡಿ
October 8, 2026
ಅಪಘಾತತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ಕಾರುಗಳು ಮುಖಾಮುಖಿ ಡಿಕ್ಕಿ

ಬೆಳ್ತಂಗಡಿ: ಮುಂಡಾಜೆ ಕಾರುಗಳು ಮುಖಾಮುಖಿ ಡಿಕ್ಕಿಮುಂಡಾಜೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸೀಟು ಎಂಬಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು 6 ಮಂದಿ ಗಾಯಗೋಂಡ ಘಟನೆ ಜು.9 ರಂದು ಬೆಳಿಗ್ಗೆ ನಡೆದಿದೆ.

ಉಜಿರೆಯಿಂದ ಚಾರ್ಮಾಡಿ ಕಡೆಗೆ ಹೋಗುತ್ತಿದ್ದ ಮಹೀಂದ್ರಾ ಕಾರು ಹಾಗೂ ಉಜಿರೆ ಕಡೆಗೆ ಬರುತ್ತಿದ್ದ  ಝೇನ್ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮಹೀಂದ್ರಾ ಕಾರು ಪಲ್ಟಿಯಾಗಿ ರಸ್ತೆ ಬದಿ ಚರಂಡಿಗೆ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ಪಲ್ಟಿಯಾದ ಮಹೀಂದ್ರಾ ಕಾರು ಮರಕ್ಕೆ ತಗಲುತ್ತಿದ್ದಾರೆ ದೊಡ್ಡ ಮಟ್ಟದ ಅಪಾಯ ಸಂಭವಿಸುತ್ತಿತ್ತು.

ಮಹೀಂದ್ರಾ ಕಾರಿನಲ್ಲಿದ ಮಂಗಳೂರಿನ ಕಾವೂರು ಮೂಲದ  ವಿನಿತಾ 22, ಗೌರಮ್ಮ49, ಕೊಟ್ರೆಗೌಡ55 ಹಾಗೂ ಝೇನ್ ಕಾರಿನಲ್ಲಿದ ಯಾದಗಿರಿ ಸುರಪುರ ಮೂಲದ ಭೀಮಣ್ಣ65, ಶ್ರೀನಿವಾಸ 32ಶಶಿಧರ33ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನೇರವಾಗಿ ಮಳೆಗಾಲದಲ್ಲಿ ರಸ್ತೆ ಜಾರುವ ಸಂಭವ ಹೆಚ್ಚಿದ್ದು ಸೀಟು ಪ್ರದೇಶದಲ್ಲಿ ಆಗಾಗ ಅಪಘಾತ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Related posts

ಪೆರ್ಲ ಬೈಪಾಡಿ ಹಿ.ಪ್ರಾ. ಶಾಲೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ವಿ.ಪ. ಶಾಸಕ ಬಿ ಕೆ ಹರಿಪ್ರಸಾದ್ ರವರ ಭೇಟಿ

Suddi Udaya

ಬೆಳ್ತಂಗಡಿ ತಾಲೂಕಿನ 11 ಸರ್ಕಾರಿ ಶಾಲೆಗಳಗೆ ಕೆ.ಪಿ.ಎಸ್ ಸ್ಥಾನಮಾನ; ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಉಜಿರೆ : ಮಹಾಗಣಪತಿ ದಿನಸಿ ಅಂಗಡಿ ಶುಭಾರಂಭ

Suddi Udaya

ಬೆಳ್ತಂಗಡಿ ತಾಲೂಕು ಕಬ್ಬಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಪದಾಧಿಕಾರಿಯ ಆಯ್ಕೆ: ಅಧ್ಯಕ್ಷರಾಗಿ ಪ್ರಭಾಕರ್ ನಾರಾವಿ

Suddi Udaya

ಕಾರುಣ್ಯ ಆಂ.ಮಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!