23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿಯಲ್ಲಿ ‘ಗಾಯತ್ರಿ ಮೆಡಿಕಲ್ಸ್’ ಶುಭಾರಂಭ: ಗ್ರಾಮೀಣ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯ ಹೊಸ ಭರವಸೆ

ನಾರಾವಿ: ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಔಷಧಿಗಳು ಹಾಗೂ ಆರೋಗ್ಯ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ನಾರಾವಿಯ ಪಂಚಮಿ ವಾಣಿಜ್ಯ ಸಂಕೀರ್ಣದಲ್ಲಿ ‘ಗಾಯತ್ರಿ ಮೆಡಿಕಲ್ಸ್’ ನೂತನವಾಗಿ ಇತ್ತೀಚೆಗೆ ಶುಭಾರಂಭಗೊಂಡಿತು.

ನೂತನ ಮೆಡಿಕಲ್ಸ್ ನ್ನು ಗಾಯತ್ರಿ ಕಾಂಪ್ಲೆಕ್ಸ್‌ನ ಮಾಲಕರಾದ ಸುನಂದ ಸುಂದರ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಸೇವೆ ಎನ್ನುವುದು ಕೇವಲ ವ್ಯಾಪಾರವಲ್ಲ, ಸಮಾಜಸೇವೆಯೂ ಹೌದು. ಜನರ ಆರೋಗ್ಯದ ಕಾಳಜಿ ಹಾಗೂ ಗುಣಮಟ್ಟದ ಸೇವೆಯನ್ನು ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಆರಂಭಗೊಂಡಿರುವ ಗಾಯತ್ರಿ ಮೆಡಿಕಲ್ಸ್‌ನಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಔಷಧಿಗಳು ಹಾಗೂ ಆರೋಗ್ಯ ಸಂಬಂಧಿತ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್. ಸುಧಾಕರ ಭಂಡಾರಿ ಹಾಗೂ ಪಂಚಮಿ ವಾಣಿಜ್ಯ ಸಂಕೀರ್ಣದ ಮಾಲಕರಾದ ಸತೀಶ್ ಆಚಾರ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ಸೇವಾ ಕೇಂದ್ರಗಳು ಆರಂಭಗೊಳ್ಳುವುದು ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರ ಬೆಳವಣಿಗೆಯಾಗಿದ್ದು, ಸಂಸ್ಥೆ ಉತ್ತಮ ಸೇವೆಯ ಮೂಲಕ ಜನರ ವಿಶ್ವಾಸ ಗಳಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಕಿಣಿ, ಉದಯ ಹೆಗ್ಡೆ ನಾರಾವಿ,ಜಿನೇಶ್ ಜೈನ್, ಕೃಷ್ಣ ತಂತ್ರಿ ನಾರಾವಿ, ನಿತ್ಯಾನಂದ ಪೂಜಾರಿ ಕುತ್ಲೂರು,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ನಾರಾಯಣ ಪೂಜಾರಿ, ವಿಶ್ವನಾಥ ಪೂಜಾರಿ, ರಾಜೇಶ್ ಆಚಾರ್ಯ, ರವಿ ಬಂಗೇರ ಅಳದಂಗಡಿ, ಎಂ.ಎಸ್. ಪೂಜಾರಿ ಮರೋಡಿ,ರಾಮಪ್ಪ ಪೂಜಾರಿ ಅಳದಂಗಡಿ, ಅಶೋಕ್ ಕುಮಾರ್ ಜೈನ್ ಈದು, ಸುಪ್ರೀಯಾ–ಹರೀಶ್ ನಾರಾವಿ, ಭಾಗ್ಯಶ್ರೀ–ಅನಿಲ್ ನಾರಾವಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.

ಆಗಮಿಸಿದ ಅತಿಥಿಗಳನ್ನು ಸಂಸ್ಥೆಯ ಮುಖ್ಯಸ್ಥರಾದ ರಾಮಚಂದ್ರ ಹಾಗೂ ಕಾವ್ಯಾಶ್ರೀ ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದರು.

ಗಾಯತ್ರಿ ಮೆಡಿಕಲ್ಸ್‌ನಲ್ಲಿ ಲಭ್ಯವಿರುವ ಸೇವೆಗಳು

  • ಎಲ್ಲಾ ರೀತಿಯ ವೈದ್ಯಕೀಯ ಔಷಧಿಗಳು
  • ಮಕ್ಕಳ ಹಾಗೂ ಹಿರಿಯರ ಔಷಧಿಗಳು
  • ಆರೋಗ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು
  • ವೈದ್ಯರ ಸಲಹೆಯ ಮೇರೆಗೆ ದೊರೆಯುವ ಔಷಧಿಗಳು
  • ಗುಣಮಟ್ಟದ ಸೇವೆ ಹಾಗೂ ಗ್ರಾಹಕ ಸ್ನೇಹಿ ವ್ಯವಸ್ಥೆ

Related posts

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಗೆಜ್ಜೆಗಿರಿ ಆಯುರ್ವೇದಿಕ್ ಕೇಂದ್ರದ ಪ್ರಗತಿ ಕುರಿತು ಸಚಿವ ಮಧು ಬಂಗಾರಪ್ಪ ರವರಿಗೆ ಮನವಿ

Suddi Udaya

ಕೊಕ್ಕಡ : ನಿವೃತ್ತ ಅಂಚೆ ಪಾಲಕ  ಬಾಲಕೃಷ್ಣ ನಿಧನ

Suddi Udaya

ಮಧ್ವ ಯಕ್ಷಕೂಟ ವತಿಯಿಂದ ನವರಾತ್ರಿ ಪ್ರಯುಕ್ತ ಕೊಲ್ಪೆದಬೈಲಿ ನಲ್ಲಿ ಯಕ್ಷಗಾನ ತಾಳಮದ್ದಳೆ:  ಯಕ್ಷಗಾನಕ್ಕೆ ಪ್ರೋತ್ಸಾಹ ಅಗತ್ಯ:ಡಾ. ಸುಬ್ರಹ್ಮಣ್ಯ ಬಲ್ಲಾಳ್

Suddi Udaya

ಕಳೆಂಜ ನಂದಗೋಕುಲ ಗೋಶಾಲೆ: ಮೇ 19: ಗೋಗ್ರಾಸ ಹೊರ ಕಾಣಿಕೆ ಸಮರ್ಪಣೆ: ಮೇ 26: ನಂದಗೋಕುಲ ದೀಪೋತ್ಸವ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!