23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮುಂಡಾಜೆ: ನೆಟ್ವರ್ಕ್ ಸಮಸ್ಯೆಗೆ ರಸ್ತೆ ಕಾಮಗಾರಿ ಅಡ್ಡಿ!

ಮುಂಡಾಜೆ: ಮೊಬೈಲ್ ನೆಟ್ವರ್ಕ್ ಗೆ ರಸ್ತೆ ಕಾಮಗಾರಿ ಅಡ್ಡಿಯಾಗಿರುವ ಘಟನೆ ಮುಂಡಾಜೆಯಲ್ಲಿ ನಡೆದಿದೆ.

ಮುಂಡಾಜೆ ಗ್ರಾಮದಲ್ಲಿ ಕಳೆದ ಕೆಲ‌ ದಿನಗಳಿಂದ ಖಾಸಗಿ ಮೊಬೈಲ್ ಟವರ್ ನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ. ಇಲ್ಲಿ ವಿದ್ಯುತ್ ಇದ್ದರೆ ಮಾತ್ರ ನೆಟ್ವರ್ಕ್ ಸಿಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಮುಂಡಾಜೆ ಭಾಗದಲ್ಲಿ ವಿದ್ಯುತ್ ಸಮಸ್ಯೆ ವಿಪರೀತವಾಗಿದೆ. ಇದರಿಂದ ಇಲ್ಲಿನ ಸಾವಿರಾರು. ಗ್ರಾಹಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮೊಬೈಲ್ ಟವರ್ ಸುತ್ತ ಗಿಡಗಂಟಿ, ಬಳ್ಳಿಗಳು ಅವರಿಸಿದ್ದು, ಅವು ಟವರ್ ನ್ನು ಕೂಡ ಸುತ್ತುವರೆದಿವೆ.
ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ನೆಟ್ವರ್ಕ್ ಸರಿಪಡಿಸಲು ರಸ್ತೆ ಅಡ್ಡಿಯಾಗಿದೆ,” ಎನ್ನುವ ರೋಚಕ ಉತ್ತರ ಲಭಿಸಿದೆ.

ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಟವರ್ ಬಳಿ ಗುಡ್ಡವನ್ನು ಕಡಿಯಲಾಗಿದ್ದು, ಇದರಿಂದಾಗಿ ಗುಡ್ಡದ ಮೇಲಿರುವ ಟವರ್ ಬಳಿಯಿರುವ ಜನರೇಟರ್‌ಗೆ ಇಂಧನ ಸರಬರಾಜು ಮಾಡಲು ತೊಂದರೆಯುಂಟಾಗಿ ಈ ರೀತಿ ಸಮಸ್ಯೆ ಮರುಕಳಿಸುತ್ತಿದೆ ಎನ್ನುವ ಸಮಜಾಯಿಷಿ ದೊರೆತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ. ದಿನಪೂರ್ತಿ ನೆಟ್ವರ್ಕ್ ಸಮಸ್ಯೆಯ ಪರಿಣಾಮ ಯಾವುದೇ ಕೆಲಸ ನಿರ್ವಹಿಸಲು ಅಡ್ಡಿಯಾಗಿದ್ದು, ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದನೆ ಇಲ್ಲದಂತಾಗಿದೆ.

Related posts

ಬಳಂಜ: ಬೋಂಟ್ರೊಟ್ಟುಗುತ್ತು ದೈವಸ್ಥಾನ ಕ್ಷೇತ್ರದಲ್ಲಿ ಚಾವಡಿಯಲ್ಲಿ ದೈವಗಳ ಪ್ರತಿಷ್ಠೆ ,ಕಲಶಾಭಿಷೇಕ: ಸಂಜೆ ಬಳಂಜದಿಂದ ಬೊಂಟ್ರೋಟ್ಟು ಕ್ಷೇತ್ರಕ್ಕೆ ಹಸಿರುವಾಣಿ ಮೆರವಣಿಗೆ

Suddi Udaya

ಶಿಶಿಲ :2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್; ಶೇ 50ರಷ್ಟು ರಿಯಾಯಿತಿ: ಖರೀದಿಗೆ ಮುಗಿಬಿದ್ದ ಜನರು

Suddi Udaya

ನಾಳೆ(ಮೇ25): ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಆಗಮನ

Suddi Udaya

ರಾಷ್ಟ್ರ ಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಯತೀಂದ್ರ ರಿಗೆ ಕಂಚಿನ ಪದಕ

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆ

Suddi Udaya
error: Content is protected !!